ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಸತೀಹಿತೈಷಿಣಿ (ತ್ರೈಮಾಸಿಕ ry \\/ \n \ "\\/\/vv vvh1 \/\MMMMMMMANVI/MAMANNNNN “ಈಗೇನುಮಾಡುವುದು? ಅವರು ವಿಚಾರ ವಿಮರ್ಶೆಗೆ ಎಡೆಗೊ ಡದೆ, ದ್ವೇಷ ರೋಷಗಳನ್ನೇ ಹೊಂದಿ ಹೊರಟು ಹೋಗುವುದಾದರೆ ಗತಿಯೇನು? ) (ಕುಮುದಮಿತ್ರನ ಮಾತಿನಿಂದ ತಾರಾಕಾಂತಬಾಬುವು ಪ್ರಯಾ ಣಸನ್ನಾಹದಲ್ಲಿದ್ದಂತೆ ತಿಳಿದೆನು. ಆದರೂ ಅವರ ಕ್ಷಣಮಾತ್ರದ ಕೋಪವನ್ನು ಶಮನಪಡಿಸುವುದು ಕಷ್ಟವಲ್ಲ. ಕುಮುದಮಿತ್ರ-ಕುಮುದೆ ಇವರಿಬ್ಬರೂ ಹಟಹಿಡಿದು ಬೇಡುತ್ತಿರುವುದೊಂದುಕಡೆಗಿರಲಿ; ವಿದ್ಯಾರ್ಥಿ ಗಳಿಗೆಲ್ಲಾ ಸೂಚಿಸಿ, ಅವರ ಮುಂದಾಳಾಗಿ ಕಲಾಧವನನ್ನೇ ಅವರಲ್ಲಿಗೆ ಕಳುಹಿರುವೆನು. ಕಲಾಧವನು ಆವಕೆಲಸಕ್ಕೂ ದುಡುಕಿ ಕಾಲಿಡುವವ ನಲ್ಲ. ಹಿಂದುಮುಂದು ನೋಡಿ ಅವನು ಕಾಲಿಟ್ಟ ಬಳಿಕ ಅದನ್ನು ಸಫಲಮಾಡಿಕೊಳ್ಳದೆ ಹಿಂತಿರುಗುವನಲ್ಲ. ತಾರಾಕಾಂತರನ್ನು ಒಲಿಸಿ ಕೊಳ್ಳುವ ಭಾರವು ಅವನನ್ನೇ ಸೇರಿರುವದರಿಂದ ಚಿಂತೆಪಡಬೇಕಾಗಿಲ್ಲ.” “ಹಾಗಾದರೆ ಕಲಾಧವನೇ ನನ್ನ ಪತ್ರವನ್ನು ತೆಗೆದು ಕೊಂಡ ಹೋಗಿರುವನೇ? ?? ಮೇಲೆಹೇಳಿದ ಉತ್ತರ ಪ್ರತ್ಯುತ್ತರಗಳು ಭಾಸ್ಕರಾಚಾರ-ಗೀತಾ ಚಾತ್ಯರಿಗೆ ನಡೆಯುತ್ತಿದ್ದವು. ಇಬ್ಬರೂ ಶಾಂತಿನಿಕೇತನ ವಿದ್ಯಾನಿಲ ಯದ ಶಾರದಾಮಂದಿರದ ಮುಂಗಡೆಯ ಅಂಗಳದಲ್ಲಿ ನೆಲದಮೇಲೆ ಕುಳಿತಿದ್ದರು. ಭಾಸ್ಕರಾಚಾರರು ಅತ್ಯಂತ ವ್ಯಾಕುಲದಲ್ಲಿದ್ದಂತೆ ಅವರ ಮುಖಭಾವದಿಂದ ತಿಳಿಯುತ್ತಿದ್ದಿತು. ಅಂಗಳದ ಹೊರಗಡೆಯಲ್ಲಿ ಕಲಾಧವ ಪ್ರಭಾಕರರಿಬ್ಬರೂ ಜಾಗರೂಕತೆಯಿಂದ ನಿಂತು ಆಚಾರರಿಬ್ಬರ ಸಂಭಾಷ ಣೆಯನ್ನು ಕೇಳುತ್ತಿದ್ದರು. ಭಾಸ್ಕರಾಚಾರ್ಯರು, ಗೀತಾಚಾರ್ಯರು ಕಲಾಧವನ ವಿಷಯವಾಗಿ ಮಾಡಿದ ಶ್ಲಾಘನೆಗೆ ಹರ್ಷಿತರಾಗಿ; ಹಾಗಿ ದ್ದರೆ ನನ್ನ ಪತ್ರವನ್ನು ಆತನ ವಶಕ್ಕೆ ಒಪ್ಪಿಸಿದ್ದೀರಷ್ಟೆ!”