ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೧೬೭ \/\/ \/ \ / 1 1+ 1 # #

  • * * * * * * * * *

ಗೀತಾ-ಅಹುದು, ಕುಮಾರ-ಕಲಾಧವನನ್ನೇ ಕಳುಹಿರುವೆನು. ಗೀತಾ ಚಾರ್ಯರ ಮಾತಿಗೆ ಉತ್ತರವಾಗಿ ಹೊರಗೆ ನಿಂತಿದ್ದ ಪ್ರಭಾಕರ ನಿಂದ ಉತ್ತರವು ಹೊರಟಿತು;_'ಕಲಾಧವನು ಕೃತಕಾರ್ಯ ನಾಗಿಯೇ ಬಂದಿರುತ್ತಾನೆ. ಭಾಸ್ಕರಾ-ವಿಸ್ಕ ಯಕೌತುಕಗಳಿಂದ- 'ಅದಾರು ಹೊರಗೆ? ಪ್ರಭಾ ಕರ! ಅಲ್ಲೇಕೆ ನಿಂತಿರಬೇಕು. ? ' (ಪ್ರಭಾಕರ-ಕಲಾಧವ ಕುಮಾರರು ಮುಂದೆ ಬಂದು ಕೈಕಟ್ಟಿ ನಿಂತರು.) ಗೀತಾಕುಮಾರ! ಬಾಬುಗಳೇನೆಂದರು? ವಿಚಾರವೇನು? ಕಲಾ-ಎಲ್ಲವೂ ತಮ್ಮ ಸಂಕಲ್ಪದಂತೆಯೇ ಆಗಿದೆ. ಪ್ರಯಾಣದಲ್ಲಿದ ಬಾಬುಗಳು ನನ್ನ ಪ್ರಾರ್ಥನೆ-ಮತ್ತು ಸನ್ನಿಧಾನದ ಆಹ್ವಾನಪತ್ರ ಗಳನ್ನು ಪರಾಮರ್ಶಿಸಿ, ಕೇಳಿ ಶಾಂತರಾಗಿದ್ದಾರಲ್ಲದೆ-ಇಷ್ಟರಲ್ಲಿ ಇಲ್ಲಿಗೆ ಬರುತ್ತೇನೆಂದೂ ಹೇಳಿರುತ್ತಾರೆ. ಭಾಸ್ಕರಾ... ಆನಂದದಿಂದ-ಅಷ್ಟು ಮಟ್ಟಿಗೆ ಮಾಡಿದರೆ ನಾನು ಉಪಕು ತನಾದೇನು ! ? ಇವರು ಹೀಗೆ ಮಾತನಾಡುತ್ತಿರುವಾಗಲೇ ತಾರಾಕಾಂತನ್ನ ಮಾತಿಲ್ಲದೆ ಸದ್ದು ಮಾಡದೆ ಬಂದು, ಮೌನದಿಂದ ಭಾಸ್ಕರಾಚಾ ರ್ಯರಿಗೆ ನಮಸ್ಕರಿಸಿ ನಿಂತನು, ಭಾಸ್ಕರಾಚಾರ್ಯರು ಬೆದರಿ ಬೆರಗಾಗಿ, ತಾರಾಕಾಂತನ ಕೈಹಿಡಿದು ಬಳಿಯಲ್ಲಿ ಕುಳ್ಳಿರಿಸಿ-ಆನಂ ದಭಾಷ್ಪವನ್ನು ಸುರಿಸುತ್ತ ಹೇಳಿದರು. 'ತಾರಾಕಾಂತಬಾಬು! ಆಗ್ರಹವು ಸಮಾಧಾನವಾಯಿತೆ? ದಯೆಯಿಟ್ಟು ಕ್ಷಮಿಸುವಿರಾ? ತಾರಾ-ಸ್ವಾಮಿ! ಕ್ಷಮಿಸುವ ಯೋಗ್ಯತೆ ನನಗೆಲ್ಲಿಯದು? ಆಗ್ರಹವಾ ರಲ್ಲಿ? ನನ್ನ ಆಗ್ರಹಾನುಗ್ರಹಗಳು ಆರಿಗೆ ಖೇದ ಮೋದಗಳ ನ್ನುಂಟುಮಾಡಬಹುದು ? ನಮ್ಮಂತಹರಿಂದ ಲೋಕಕ್ಕೆ ಏನೂ