ನಲಸಂ|| ಮಾರ್ಗಶಿರ) ಪೂರ್ಣಕಲಾ ೧೮೧ | # # / \/ \\ / \ + # # J # \ \ & # ೪ \/ \/ \ \# ಉತ್ತರವನ್ನು ಕೊಡಲಾರದೆ ನಡುಗಿದಳು, ನಿಲ್ಲಲಾರದೆ ಕುಳಿತು ಬಿಟ್ಟಳು, ಮಧುಮಿತ್ರನು ಆರ್ತಸ್ವರದಿಂದ-ರಕ್ತಾಕ್ಷಿಯನ್ನು ಕುರಿತು ಪ್ರಾರ್ಥಿಸಿದನು. “ಅಯ್ಯೋ ! ರಕ್ತಾಕ್ಷಿ ! ಇಷ್ಟೂ ಕನಿಕರವಿಲ್ಲವೆ ? ಹಳೆಯ ಸಂ ಬಂಧವನ್ನಾದರೂ ನೆನೆದು ಕೃಪೆ ಮಾಡು. ನನ್ನನ್ನು ಹಾದಿಯ ಹೆಣ ವನ್ನು ಮಾಡಬೇಡ, ನನ್ನನ್ನು ನನ್ನ ತಾಯಿಯ ಬಳಿಗಾದರೂ ಕಳು ಹಿಸು,ಬೇಕಾಗುವ ವೆಚ್ಚವನ್ನು ಕೊಡಿಸುವೆನು ಮಧುಮಿತ್ರನ ಪ್ರಾರ್ಥನೆಗೆ ಪುರುಷಕಂಠದಿಂದ ಉತ್ತರವು ಹೊರಟಿತು. ಅಮ್ಮನಲ್ಲಿಗೆ ಹೋಗಬೇಕು ! ರಕ್ತಾಕ್ಷಿ, ಕಳುಹಬೇಕು. ಈಗ ಲಲ್ಲವೇ ಜ್ಞಾನೋದಯವು ? ರಕ್ತಾಕ್ಷಿ -ನಳನೀಕಾಂತರು, ತಿರುಗಿನೋಡಿದರು, ಬಾಗಿಲ ಬಳಿ ಯಲ್ಲಿ ಪ್ರಭಾಕರನು ನಿಂತಿರುವದನ್ನೂ ಆತನ ಹಿಂದುಗಡೆಯಲ್ಲಿ, ಕಲಾ ಧವ-ಅಕ್ಷಯ-ಕುಮುದವಿತ್ರರೂ ನಿಂತಿರುವದನ್ನು ಕಂಡಳು, ಬೆದರಿ ಬೆರಗಾದಳು. ಇವರಿಲ್ಲಿಗೆ ಯಾವಾಗ-ಹೇಗೆ-ಬಂದರು. ಎಂದು, ವಿಚಾರ ಮಾರಿದಳು, ಹೇಳಿದಳು. “ ನೀವಾರು?ಹೇಳದೆ ಕೇಳದೆ ಹೀಗೆ ಪ್ರವೇಶಿಸುವ ಕಾರಣವೇನು ” ಪ್ರಭಾ-ಅಮ್ಮಾ ! ನಿಮ್ಮಂತಹ ಪ್ರಸಿದ್ದ ಮಹಿಳೆಯರೆ,-ಪರೋಪಕಾರ ನಿರತ ಪ್ರತಿಗಳಾದ ಮಧುಪ ವೃತ್ತಿಯಲ್ಲಿರುವ ಅಂಗನೆಯರ, ಮ ನೆಗೆ ಬರುವುದಕ್ಕೂ ಹೇಳಿ ಕೇಳಬೇಕೇ ? ಹಾಗೆಯೇ ಬಂದ ರಾಗದೆ ? ನಾವಾರಾದರೆ ನಿಮಗೇನು ನಷ್ಟ ? ನಿಮಗೇನು ಬೇಕು ? ಕೊಬ್ಬಿದ ಪುರುಷರಾಗಿದ್ದರೆ ಸಾಕಷ್ಟೆ !
ಪುಟ:ಪೂರ್ಣಕಲಾ.djvu/೧೯೯
ಗೋಚರ