೨೦೨ ಸತೀಹಿತೈಷಿಣಿ | (ಿ ಮಾಸಿಕ ++++++ ಇದ್ದಿದ್ದರೆ ನಿನ್ನ ಸ್ಥಿತಿಯು ನಮಗೆ ತಿಳಿಯುವುದಕ್ಕಾಗಲಿ, ನಿನ್ನ ಸ್ಥಿತಿಗತಿಗಳಿಗಾಗಿ ನಾವು ವಿಚಾರಪಡುವದಕ್ಕಾಗಲೀ ಕಾರಣವಿ ರುತ್ತಿರಲಿಲ್ಲ. ನೀನು ಇಲ್ಲಿಗೆ ಬಂದು ಅದರಲ್ಲಿಯೂ ನಮ್ಮ ಆ ಚಾಲ್ಯವರ್ಯರ ಶಿಷ್ಯ-ಆಶ್ರಿತ ವರ್ಗಕ್ಕೆ ಒಪ್ಪಿಸಲ್ಪಟ್ಟುದರಿಂದ ನೀನು ನಮ್ಮೆಲ್ಲರಿಗೂ ಪುತ್ರಸದೃಶನೂ ಶಿಷ್ಯನೂ ಆಗಿರುವೆ. ಇಂ ತಹ ನೀನು ನಮ್ಮ ಶಿಷ್ಯ ಕೋಟೆಯಲ್ಲಿ ಒಪ್ಪುವಂತಿರದೆ ಕುಮಾ ರ್ಗಕ್ಕೆ ಬಿದ್ದು, ನೀನು ಕೆಟ್ಟುದಲ್ಲದೆ ಇತರರನ್ನು ಕೆಡಿಸುತ್ತ ಬರು ವನೆಂಬ ಅಪವಾದಕ್ಕೆ ಪಾತ್ರನಾದರೆ ನಮ್ಮ ಮನಸ್ಸಿಗೆ ಎಷ್ಟು ವ್ಯಾಕುವಾಗಬಹುದು, ಯೋಚಿಸು! ಈಗ ಇದಕ್ಕೂ ಹೆಚ್ಚಾಗಿ ಹೇಳಿದರೆ ನಿನ್ನ ಮಿದುಳು ಚದರಬಹುದೆಂದು ಇಷ್ಟಕ್ಕೆ ನಿಲ್ಲಿಸುವೆ ನು, ಹಿಂದೆ ಆದುದಕ್ಕಾಗಿ ಅಳುತ್ತಿರದೆ ಮುಂದಿನ ಮಾರ್ಗವು ಸುಗಮವಾಗಲು ಇದು ಎಚ್ಚರಿಕೆ ಕೊಟ್ಟಂತೆ ತಿಳಿದು ಜಾಗ್ರತ ನಾಗು. ನಿನ್ನ ಅಪರಾಧವೆಷ್ಟಿದ್ದರೂ ಅದನ್ನು ನಾವು ಕ್ಷಮಿಸಬೇ ಕಾದುದು ಕರ್ತವ್ಯವೇ ಆಗಿದೆ. ಆ ವಿಚಾರದಲ್ಲಿ ನೀನೇನೂ ಕ ಳವಳಿಸಬೇಡ. ನಾವು ಮನಃಪೂರ್ವಕವಾಗಿ ನಿನ್ನ ಅಭ್ಯುದಯ ವನ್ನೇ ಹಾರೈಸುತ್ತಿರುವೆವು. ಮಧುಮಿತ್ರನು ಕಣ್ಣುಗಳನ್ನು ಅರಳಿಸಿ ಗೀತಾಚಾರೈರನ್ನೇ ನೋಡುತಿದ್ದನು. ಗೀತಾ-ಸತೀಮಣಿಯನ್ನು ಕುರಿತು- ಅಮ್ಮ ಯ್ಯಾ ! ಇಂದಿಗೆ ನಿನ್ನ ಹೃದ್ರೋಗವು ನಿವಾರಣೆಯಾಯಿತು. ಈದಿನವೀಗ ನೀನು ಪುತ್ರ ವತಿಯೆನ್ನಿಸಿದೆ. ಮಧುಮಿತ್ರನು ಇಂದು ಮತ್ತೊಂದು ಜನ್ಮ ವೆತ್ತಿದಂತೆ ಮೊದಲಿನ ದುರ್ಭಾವನೆಗಳೆಲ್ಲವನ್ನೂ ಬಿಟ್ಟು ಪರಿಶು
ಪುಟ:ಪೂರ್ಣಕಲಾ.djvu/೨೨೦
ಗೋಚರ