ನಲಸಂk ಮಾರ್ಗಶಿರ) ಪೂರ್ಣಕಲಾ ೨೦೯ /vJMV\/\/v • 1 # 1 # 1 \ \ \ \r\\
- * * * * * * * * * * * *
MANIAN ಇರಲಿ, ಮೇಲಿನತ್ತರ ಪ್ರತ್ಯುತ್ತರಗಳು ನಡೆಯುತ್ತಿದ್ದಾಗ ಹೊತ್ತು ಮಧ್ಯಾಹ್ನಾ ತ್ರರಮೂರುಘಂಟೆ. ಊಟಪಾಟಗಳೆಲ್ಲವೂ ನೆರವೇರಿ ವಿರಾ ಮಕಾಲವಾಗಿದ್ದುದರಿಂದ ಮೂವರೂ ಒಟ್ಟಾಗಿ ಕಲೆತು ಮಾತನಾ ಡುತ್ತಿದ್ದರು. ಪೂರ್ಣಕಲೆಯಮಾತಿಗೆ ಕುಮುದೆಯು ಉತ್ತರವನ್ನು ಕೊಡದೆ ತಲೆಬಾಗಿ ಕುಳಿತಳು. ಶಾರದೆಯು ಕಣ್ಣು ಸನ್ನೆ ಮಾಡಿ, ಪೂರ್ಣ ಕಲೆಯ ಕೈಯನ್ನು ಚಿವುಟಿ (ಜಿಗುಟಿ ಹೇಳಿದಳು, (ಪೂರ್ಣಕಲಾ ! ನೀನೂ ಸರಿಯೆ; ಒಳ್ಳೆ ಗಡಸುಗಾರ್ತಿಯಾಗಿ ದೀಯೆ. ಈಗಲೇ ಅವಳು ಪಾಲುಗಾರ್ತಿಯಾಗಿ ಬಂದು ನಿಲ್ಲಬೇಕೆನ್ನು ವೆಯಲ್ಲ! ಪಾಪ! ಅವಳು, ಮುಂದೆ ತಾನು ಮಾಡುವದಿದ್ದೇ ಇದೆ, ಇವರು ಈಗ ಎರಡೆರಡು ದಿನದ ಮಟ್ಟಿಗಾದರೂ ಅಣ್ಣನೊಡನೆ ಸಂತೋ ಷವಾಗಿ ಮಾತನಾಡುತ್ತಿರಲಿ” ಎಂದು ನಮ್ಮ ಮೇಲಿನ ದಯೆಗೇ ಹೀಗೆ ಸುಮ್ಮನಿರುವಳು. ಹಾಗಿಲ್ಲದಿದ್ದರೆ ಇವಳಾಗಲೇ ಅವನನ್ನು ತನ್ನ ಕಡೆಗೆ ತಿರುಗಿಸಿ, ನಮ್ಮನ್ನು ಬಳಿಗೂ ಬರಗೊಡದಂತೆ ಮಾಡಿಬಿಡುತ್ತಿದ್ದಳು.” ಕುಮುದೆಲಜ್ಜೆಯಿಂದ ಕೆಂಪೇರಿದ ಮುಖವನ್ನು ಪ್ರಯಾಸದಿಂದ ಮೇಲಕ್ಕೆತ್ತಿ ಕೃತಕ ಕೋಪದಿಂದ ಏನು, ಬಜಾರಿಯಾದೆ, ಶಾರದೆ ! ಈಗಲೇ ಇಷ್ಟು ಕೊಂಕು-ಬಿಂಕಗಳೇನು ? ಕಣ್ಣು ಸನ್ನಿ ಯೇನು, ಕಯ್ತಿರುಗಿಸುವುದೇನು-ಇದೆಲ್ಲಿಂದ ಕಲ್ಲುಬಂದೆ ?? ಶಾರದೆ ಎಲ್ಲಿಂದಲೂ ಏಕೆ ಕಲ್ಲು ಬರಬೇಕು? ನೀನೇ ಸಾಲದೇ-ನನ್ನಂ ತಹ ನೂರುಮಂದಿ ಶಾರದೆಯರನ್ನು ನಿಪುಣೆಯರನ್ನಾಗಿ ಮಾಡ ಲು ? ಇವೆಲ್ಲವೂ ನಿನ್ನ ಪ್ರಸಾದವೇ ! ಹೇಗಾದರೂ ಆಗಲಿ, ಆ ದಿನ ನೀನು (ಆತನು ಮಲಗಿದುದು ನನ್ನ ಉತ್ಸಾಹವೇ ಹೆದ ತಾಗಿದೆ. ಪ್ರತಿಕ್ಷಣವೂ ಅವನಮಾತೇ ನೆನಪಿಗೆ ಬರುತ್ತದೆ. ದೇವರು ಅವನಿಗೆ ಆರೋಗ್ಯಭಾಗ್ಯವನ್ನು ಕೊಟ್ಟರೆ-' ಹೀಗೆಂದು 27