ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಸತೀಹಿತೈಷಿಣಿ (ತ್ರೈಮಾಸಿಕ ་ནཙན ་རཀ ಹೇಳಿದೆಯಷ್ಟೆ, ಆರೋಗ್ಯವಾಯ್ತು, ಇನ್ನಾದರೂ ಉತ್ಸಾ ಹವಾಯ್ಯೋ ?-ಇನ್ನೂ ಇಲ್ಲವೋ? ಪೂರ್ಣ-ಎಲ್ಲಿ ಬಂತು? ಶಾರದೆ? ಅಣ್ಣನಲ್ಲಿ ಅವಳು ಒಬ್ಬಳೇ ಮಾತಾ ಡುವಂತಾದಮೇಲಲ್ಲವೇ-ಆ ಮಾತು? ಈಗೆಲ್ಲಿ? ಯಾವಾಗ ಬಂದು ನೋಡಿದರೂ ನಾವು ಇದ್ದೇ ಇರುತ್ತೇವೆ. (ಇಷ್ಟರಲ್ಲಿ ಪಕ್ಕದ ಕಿರುಮನೆಯ ಕಡೆಯಿಂದ ಸಣ್ಣ ಕೂಗು ಕೇಳಿಸಿತು.) “ಪೂರ್ಣಕಲಾ! ಪೂಣ೯ಕಲಾ!” ಪೂರ್ಣಕಲೆಯು ಎಚ್ಚತವಳಂತೆ ಧಿಗ್ಗನೆದ್ದು, ಶಾರದಾ-ಕುಮು ದೆಯರ ಕೈಹಿಡಿದು- ಬನ್ನಿರೆ ! ಅಣ್ಣನು ಕೂಗುತ್ತಿರುವನು, ಅಲ್ಲಿಗೇ ಹೋಗುವ.” ಎಂದುಹೇಳಿ ಎಳೆದುಕೊಂಡು ಬಂದು ಮಧುಮಿತ್ರನ ಕಿರು ಮನೆಯ ಒಳಹೊಕ್ಕಳು. ಮಧುಮಿತ್ರನು ಮಂಚದಮೇಲೆ ಅರೆಬಾಗಿ ಮಲಗಿದ್ದನು. ಕಿರುಮನೆಯ ಒಂದು ಮೂಲೆಯಲ್ಲಿ ಸತೀಮಣಿಯು ಆಯಾಸದಿಂದ ಮೈ ಮರೆತು ನಿದ್ರಿಸುತಿದ್ದಳು. ಪೂರ್ಣಕಲೆಯು ಪ್ರ ವೇಶಿಸಿ- 'ಏನಣ್ಣ ಕೂಗಿದೆಯೇಕೆ ? ಮಧು-ಏಕೆ, ತಾಯಿಾ ! ಇದೇಕೆ, ಈದಿನ ಇಷ್ಟು ಉದಾಸೀನಮಾ ಡಿದೆ ? ದಿನದಿನಕ್ಕೆ ನೀನು ಬರುವುದನ್ನೇ ಕಡಮೆ ಮಾಡಿದಂತಿ ದೆ. ಬೇಸರವಾಗುವದೆಂದರೂ ಒಬ್ಬರೂ ಮಾತನಾಡುವವರಿಲ್ಲ, ಹೀಗೇಕೆ ? ಶಾರದೆ-ಅಣ್ಣ! ಅಷ್ಟೇಕೆ ನಿಷ್ಟುರವಾಡುವೆ? ಪೂರ್ಣಕಲೆಯನ್ನು ನಿಲ್ಲಿ ಸಿ ತಡೆಕಟ್ಟಿದ್ದವಳನ್ನು ಇದೋ ಹಿಡಿತಂದಿರುವೆವು. ಇವಳನ್ನೇ ಕೇಳು; ಹೇಳುವಳು. ಇವಳೇ-ಈ ನಮ್ಮ ಅತ್ತಿಗೆಯೇ-ನಿನ್ನ ಬೇಸರಕ್ಕೆ ಕಾರಣಳಾಗಿದ್ದರೆ ಮಧು-ಕುಮುದೆಯನ್ನು ನೋಡಿ ಸ್ಥಿರಭಾವದಿಂದ ಕುಳಿತು- ಶಾರದಾ!