ನಲಸಂ| ಮಾರ್ಗಶಿರ) ಪೂರ್ಣಕಲಾ ೨೧೧ ಆಕೆಯನ್ನು ಈಗಲೇ ಕುಚೇಷ್ಟೆ ಮಾಡಬೇಡಿರಿ, ನಾನು ಈಗ ಗುರು ವಾಕ್ಯದಲ್ಲಿ ಬದ್ಧನಾಗಿದ್ದೇನೆ. ಸರಸಪ್ರಸಂಗವೇನೂ ಈಗ ಆಗ ಬಾರದೆಂದು ಅವರ ಅಪ್ಪಣೆ! ಎಲ್ಲಿ, ಎಲ್ಲರೂ ಕುಳಿತು ಏನನ್ನಾದ ರೂ ಓದಿ-ಹಾಡಿ-ಮನಸ್ಸಿಗೆ ಉತ್ಸಾಹವುಂಟುಮಾಡಿರಿ ! ಶಾರದಾ ಆಗಲಿ, ಆದರೆ ಇದೇನು ತಾಯಿಯು ಇಷ್ಟು ಹೊತ್ತಿನಲ್ಲಿ ಮ ಲಗಿರುವರು ? ಮಧು--ನನ್ನ ಕಾಯಿಲೆಗಾಗಿ ೨೦ ದಿನಗಳಿಂದ ಸರಿಯಾಗಿ ಊಟನಿದ್ರೆ ಯೊಲ್ಲದೆ ಪೇಚಾಡುತ್ತಿದ್ದು, ಪಾಪ! ಈಗ ಮೈಮರೆತು ಮಲ ಗಿದ್ದಾಳೆ, ಮಲಗಿರಲಿ, ಪೂಣ೯-ಅವರು ಮಲಗಿದುದರಿಂದಲೇ ನಾವಿಲ್ಲಿ ಮಾತನಾಡಿದರೆ ಎಚ್ಚ ರವಾಗುವದೆಂದು ನನ್ನ ಕಿರುಮನೆಯಲ್ಲಿಯೇ ಕುಳಿತಿದ್ದೆವು. ಪೂರ್ಣಕಲೆಯ ಮಾತು ಮುಗಿವುದಕ್ಕೆ ಮೊದಲೇ ಸತೀಮಣಿ ಯು ಗಾಬರಿಗೊಂಡೆದ್ದು ಕುಳಿತು, ಸುತ್ತಲೂ ನೋಡಿದಳು. ಮುಂದೆ ಮಂಚದಮೇಲೆ ಕುಳಿತಿದ್ದ ಮಗನನ್ನೂ ನಿಂತಿದ್ದ ಮವರು ಸುಕುಮಾರಿ ಯರನ್ನೂ ನೋಡಿ ಸಂತೋಷದಿಂದ ಎದ್ದು ಬಂದು ಕುಮುದೆಯ ಮುಡಿ ದಡ-ತಾಯಿ ! ಭಾಗ್ಯಲಕ್ಷ್ಮಿ ! ನಿನ್ನ ಪುಣ್ಯ-ನಿನ್ನ ತಂದೆಯ ಅಮ್ಮ ತೋಪಮವಾದ ಔಷಧ; ಪೂರ್ಣಕಲೆ ಶಾರದೆಯರ ಆದರೋಪಚಾರ, ಗುರುಗಳ ಆಶೀರ್ವಾದ-” ಇವೆಲ್ಲ ಸೇರಿ ನನ್ನ ಮಗನು ಉಳಿದನು. ಬಾ, ತಾಯಿ, ಕುಳಿತುಕೊ-ನೀವೂ ಬನ್ನಿ-ತಾಯಿಯರೆ, ಪೂರ್ಣ-ಶಾರದೆ-'ಇಲ್ಲ-ಇಲ್ಲ ! ಈಗ ನಾವು ಬರುವುದಿಲ್ಲ, ನಾವು ಶಾರದಾಪೂಜೆಗೆ ಹೂ ಮಾಲೆಗಳನ್ನು ಕಟ್ಟಲು ಹೋಗಬೇಕು, ಕುವುದಕ್ಕನು ಇಲ್ಲಿರುವಳು,' ಎಂದು ಹೇಳಿ ಹೊರಟುಹೋ ದರು. ಕುಮುದೆಯು ಸಂಕುಚಿತಸ್ತರದಿಂದ-ನಾನೂ ಹೋಗಿ
ಪುಟ:ಪೂರ್ಣಕಲಾ.djvu/೨೨೯
ಗೋಚರ