ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಸತೀಹಿತೈಷಿಣಿ (ತ್ರೈಮಾಸಿಕ M/V \ / $#V | V \/Y\/ \V | V | V V\/ \\/ \/ V V V V\/ \ vvvvvvvvvvvvvvvvvvM ಬರುವೆನು.” ಎಂದುಹೇಳಿ ಅಪ್ಪಣೆ ಪಡೆದು ಹೊರಟುಹೋದ ಳು, ಮಧುಮಿತ್ರನು ನಸುನಗುತ್ತ-ಅಬ್ಬ ! ಹುಡುಗಿಯರು ಎಷ್ಟು ಕುಶಲೆಯರು-ನೋಡಿದೆಯಾ ? ಅಮ್ಮ ! ಸತೀ-ಜನ್ಮಸ್ಥಾನವೆಂತಹದು? ಶಿಕ್ಷಣಾಕ್ರಮ, ಅಭ್ಯಾಸ, ಸಹವಾಸ ಬಲವೆಂತಹವು ? ಇಷ್ಟರಲ್ಲಿ ಹೊರಗಿನಿಂದ-ಏಕೆ ಓಡಿಬಂದಿರೆ ? ಒಳಗೆ ಮಧುಮಿ ತ್ರನ ತಾಯಿ ಇದ್ದಾಳೆಯೆ ?' ಎಂಬ ಪ್ರಶ್ನೆಯೂ -“ನಾವು ತೋಟಕ್ಕೆ ಹೂಬಿಡಿಸಲು ಹೋಗುತ್ತೇವೆ. ಹೋಗಿರಿ ಒಳಗಿದ್ದಾರೆ.' ಎಂಬ ಉತ್ತರವೂ ಕೇಳಿಸಿತು, ಸತೀಮಣಿಯು ಉತ್ಸಾಹದಿಂದ-ಅಜ್ಜಿಯು ಬಂದಂತೆ ತೋರುತ್ತದೆ' ಎಂದು ಎದ್ದು ಬಂದು ಬಾಗಿಲಬಳಿ ನಿಂತಳು. ಪೂರ್ಣಕಲೆಯ ಅಜ್ಜಿಯು ಮತ್ತಿಬ್ಬರು ಅಂಗನಾಮಣಿಯರೊಡಗೊಂಡು ಬಂದಳು, ಸತೀಮಣಿಯು ಅಜ್ಜಿಗೆ ನಮಸ್ಕರಿಸಿ-ಅಜ್ಜಿ, ಕುಳಿತು ಕೊ ಕ್ಷೌರಿ, ತಂಗಿಯರೇ ಕುಳ್ಳಿರಿ....” ಎಂದು ಮೂವರನ್ನೂ ಕೈಹಿಡಿದು ಕುಳ್ಳಿರಿಸಿಕೊಂಡು ತಾನೂ ಕುಳಿತಳು, ಅಜ್ಜಿ-ಮಗಳೇ ! ಇಂದಿಗಾದರೂ ನಿನ್ನ ಮುಖದಲ್ಲಿ ನಗೆಯನ್ನು ಕಂ ಡೆವಲ್ಲ ! ಅಷ್ಟೇ ಸಾಕು. ಸತೀ-ಅಜ್ಜಿ ! ಹಿರಿಯರಾದ ತಮ್ಮ ಆಶೀರ್ವಾದದಿಂದ ಆ ಭಾಗ್ಯ ವುಂಟಾಯಿತು ! ಶಾಂತಿ-ನಿಜ, ಅಜ್ಜಿಯವರ ತಸಃಪ್ರಭಾವವು ಬಲವತ್ತರವಾದುದು. ಆದುದರಿಂದಲೇ ಅವರಿಗೆ ನಮ್ಮ ಗುರುಗಳು ಪುತ್ರರಾಗಿ ಜನ್ನಿಸಿ ದರು. ಸಿದ್ದ ಪುರುಷರಾದ ಈ ಪುತ್ರರ ದೆಸೆಯಿಂದ ಇವರಿಗೆ ಜಗತ್ತೇ ವಶೀಭೂತವಾಗಿದೆಯೆನ್ನ ಬೇಕು. ಅಜ್ಜಿ ಹೇಗಾದರೂ ಹೇಳಿಕೊಳ್ಳಿರಿ, ಮಧುಮಿತ್ರನ ನೆವದಿಂದಾದರೂ