ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಸತೀಹಿತೈಷಿಣಿ (ಿ ಮಾಸಿಕ ವನ್ನು ಸಂರಕ್ಷಿಸಿಕೊಂಡು ಬರುವುದೇಮೇಲೆಂದೂ ಇನ್ನೂ ಹ ಲವು ಬಗೆಯಾಗಿ ಹೇಳಿ ಅಡ್ಡಿ ಪಡಿಸುತ್ತಿದ್ದನು. ಶಾಂತಿ-ಈಗಲೋ ? ಈಗ ಕುಮುದಮಿತ್ರನು ಏನೆನ್ನು ವನು ? ನಿನ್ನ ಸ್ವಾಮಿ ಏನೆನ್ನು ವರು ? ರೋಹಿಣಿ ಅವರು ಈ ವರೆಗೆ ತಾವು ಸಂಸಾರಿಕ ವಿಚಾರದಲ್ಲಿ ಶಾಂತಿಯ ಷ್ಟನ್ನೂ ಕಾಣದಿದ್ದುದಾಗಿಯೂ, ಈಗಲೀಗ ತಮಗೆ ಚಿತ್ರಶಕ್ತಿ, ಮನೋಲ್ಲಾಸಗಳುಂಟಾಗಿ ಸುಖಾನುಭವ ಮಾಡುತ್ತಿರುವುದಾಗಿ ಯೂ, ಇದೇ ಸುಖವೆ-ಈ ಶಾಂತಿಯೇ ನಿಜವಾದುದೆಂದೂ, ಈ ವ ರೆಗೆತೋರುತಿದ್ದುದೆಲ್ಲವೂ ಕನಸಿನ ಕನವರಿಕೆಯಂತೆ ಕೇವಲ ಹಾ ಹಾಕಾರಕ್ಕೆ ಬೇಕಾದುದಷ್ಟನ್ನು ಮಾತ್ರ ತೋರ್ಪಡಿಸುತ್ತಿದ್ದ ವಿದ್ಯಮಾನವೆಂದೂ ಹೇಳುವರು, ಮಗನು, ಈಗ ನನ್ನನ್ನೂ ಕುಮುದೆಯನ್ನೂ ನೋಡಿ, ಇದೀಗ ನಿಜವಾದ ಅಭಿಮಾನ, ಈಗಲೀಗ ನೀವು ಯಥಾರ್ಥವಾಗಿ ಆರ್ಯನಾರಿಯರು ; ನಿಮ್ಮ ವಿದ್ವತ್ರೆಯ ಪ್ರಚಾರಕ್ಕೆ ಇದೇ ತಕ್ಕ ರೀತಿ. ಹೀಗೆಂದು ಹೇಳು ತಿರುವನಲ್ಲದೆ ತಂದೆಯು 1ಈಗಲೀಗ ಆರ್ಯಸಮಾಜಕ್ಕೆ ಅಲಂ ಕಾರಪ್ರಾಯರಾದ ಧೀರಪುರುಷರಾದರೆಂದೂ ಇನ್ನು ತಮ್ಮ ಮನೆತನವು ಉತ್ತಮೋತ್ತಮವೆನ್ನಿಸಿ ಸರ್ವತೋಮುಖವಾದ ಸ್ತುತಿಗೆ ಪಾತ್ರವಾಗುವುದೆಂದೂ, ಹಿಗ್ಗು ತಿರುವನು, ಅಜ್ಜಿ-ಅಹುದು, ತಾರಾ! ಕುಮುದಮಿತ್ರನ ನುಡಿಯು ಸತ್ಯವಾದು ದು, ಅದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಸಾಮಾನ್ಯ ಧರ್ಮವೇ ಅದು. ಹೆಂಗಸರು ಸ್ವಚ್ಛೆಯಿಂದ ನಡೆಯುವಂತೆ ಸ್ವತಂತ್ರವನ್ನು ಪಡೆದರೆ ಅವರಿಗೆ ಹೆಜ್ಜೆ ಹೆಜ್ಜೆಗೂ ವಿಪತ್ತುಗಳ ಅಡ್ಡಯಿಸಿ ಬರುವುವು. ಅವುಗಳಲ್ಲಿಯೂ ಹೆಂಗಸರ ಸರ್ವಸ್ವ