೨೨ ಸತೀಹಿತೈಷಿಣಿ (ಡ್ರೈಮಾಸಿಕ M ಇರುವುದೋ ಒಬ್ಬಿಬ್ಬರಿಗೆ ಚಿಂತಿಸಿದರೆ ಸಾಕೋ? ಕುಮಾರ್ಗದಲ್ಲಿ ಬಿದ್ದರೆ ಅವನೇ ಕೆಟ್ಟನು, ನೀನೇಕೆ ಇಷ್ಟು ತಪಿಸುತ್ತಿರುವೆ ? ಆಕ್ಷಯ-ಹಾಗೆ ಹೇಳಬಹುದೆಶಾಂತಿನಾಥ? ಅವನಿಲ್ಲಿಗೆ ಬಾ ರದೆಯೇ ಇದ್ದಿದ್ದರೆ, ಅವನ ಚಿಂತೆಯು ನನಗಾಗುತ್ತಿರ ಲಿಲ್ಲ. ಒಂದೇ ಗುರುಕುಲವಾಸದಲ್ಲಿ ಒಂದೇ ಛತ್ರ ಛಾಯೆಯಲ್ಲಿ-ಉಪಜೀವಿಸುತ್ತಿರುವ ನಾವು, ಪರಸ್ಪರ ಹಿತೇಚ್ಚುಗಳಾಗಿರಬೇಡವೇ ? ತನ್ನ ಸಂಗಡಿಗನೆನ್ನಿಸಿ, ತನ್ನೊಡನೆ ವ್ಯಾಸಂಗಿಸುವಂತೆ ಗುರುಮುಖದಿಂದ ನಿಯ ಮಿಸಲ್ಪಟ್ಟಿರುವವನು ಕುಮಾರ್ಗದಲ್ಲಿ ಬಿದ್ದರೂ ಸುಮ್ಮ ನಿರಲೇ ? ಶಾಂತಿ-ನಿಜ ; ಆವನ ದುರ್ವ್ಯವನ್ನು ಕುರಿತು ಸಂತಾಪವಾ ಗುತ್ತದೆ. ಮತ್ತು ಅವನ ದೆಸೆಯಿಂದ ನಿಮಗೂ, ನಿಮ್ಮ ಗುರುವಿಗೂ, ಕಡೆಗೆ ಈ ವಿದ್ಯಾನಿಲಯಕ್ಕೂ-ಅಪ ವಾದವು ಸಂಭವಿಸಬಹುದೆಂದು ಕೂಡ ಶಂಕೆಯುಂಟಾ ಗುತ್ತದೆ. ಆದರೂ ನಾವು ಮಾಡುವದೇನು? ಹುಟ್ಟು ಸುಳಿಯನ್ನು ಬೋಳಿಸಿದರೆ ಹೋದೀತೇ ? ಅಕ್ಷಯ-ಹಾಗೆಂದು ಸುಮ್ಮನಿರುವದಲ್ಲ. ನಮ್ಮ ಶಕ್ತಿವಂ ಚನೆಯಿಲ್ಲದೆ, ಮನಸ್ಸಾಕ್ಷಿಯಾಗಿ ಅವರ ಹಿತವನ್ನು ಕೋ ರುವದು ನಮ್ಮ ಕರ್ತವ್ಯವು ಶಾಂತಿ-ಕೋರುವದಕ್ಕೆ ತಡೆಮಾಡಿದೇನು ? ಕುಮಾರ ! ಹಿತ ವನ್ನು ಕೋರುವೆನೆಂದು ನಿನ್ನಂತೆ ಹಗಲಿರುಳೂ ದೇಶ ಸ್ಮರಣೆಯಿಲ್ಲದೆ ಕೊರಗುತ್ತಿರಬೇಕೇ ?
ಪುಟ:ಪೂರ್ಣಕಲಾ.djvu/೩೮
ಗೋಚರ