ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆಲಸಂ|| ಮಾರ್ಗಶಿರ) ಪೂರ್ಣಕಲಾ vyM ಮೇಲೆ ಹೇಳಿದ ಸ್ತೋತ್ರವು, ವಿದ್ಯಾರ್ಥಿಮಂದಿರದಲ್ಲಿ ಅಕ್ಷ ಯಕುಮಾರನ ಕಿರುಮನೆಯ ಸಮೀಪದ ಕಿರುಮನೆಯೊಳಗೆ ಶಯ್ಯಾ ಗತನಾಗಿ ಕುಳಿತು, ದೃಢಭಕ್ತಿ ಭರವಸೆಯಿಂದ ಕಣ್ಣುಗಳನ್ನು ಮುಚ್ಚಿ ಕೈನೀ ಪ್ರಾರ್ಥಿಸುತ್ತಿದ್ದ ಹದಿನೆಂಟುವರ್ಷವಯಸ್ಸುಳ್ಳ ಉ ಜ್ವಲತೇಜೋಮೂರ್ತಿಯ ಬಾಯಿಂದ ಹೊರಡುತ್ತಿದ್ದಿತು. ಮೂರ್ತಿಯ ಮುಂದೆ ಉತ್ಸಾಹಗೊಂಡು ಕೈನೀಡಿ ನಿಂತಿದ್ದ ಅಕ್ಷಯಕುಮಾರನೇ ಪ್ರಾರ್ಥನೆಗೆ ಉತ್ತರವನ್ನು ಕೊಟ್ಟವನು, ಅಕ್ಷಯನ ಧ್ವನಿಯನ್ನು ಕೇಳಿದ ಕಲಾಧವನು ಬೆಚ್ಚರಗೊಂಡು ಥಟ್ಟನೆ ಕಣ್ಣೆರೆದು ನೋಡಲು, ಸ್ನೇಹವೇ ಮೂರ್ತಿಭವಿಸಿದಂತೆ ನಿಂ ತಿದ್ದ ಮಿತ್ರನನ್ನು ಕಂಡು ಆನಂದ ಪಾರವಶ್ಯತೆಯಿಂದ ಆಕ್ಷಯಕುಮಾ ರನನ್ನು ಎಳೆದಪ್ಪಿ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಕಂಪನಸ್ವರದಿಂದ ಕೇಳಿ ದನು. ಪ್ರಿಯಮಿತ್ರ ! ಇದೇನಿಂದು ಭಟ್ಟಾರಕನಾಗಿ ಬಂದಿರುವೆ? ನಿನ್ನ ಇಂದಿನ ಪಾಂಡಿತ್ಯ ಪ್ರದರ್ಶನಕ್ಕೆ ಕಾರಣವೇನು ? ಅಕ್ಷಯ-ಕಾರಣವೇನೆಂದು ಕೇಳುವೆಯಾ ? ಭೂಮಿಯ ಬೃಹಸ್ಪತ್ಯಾಚಾರನೂ, ಅಭಿನವ ಕಾಳಿದಾಸನೂ ಆಗಿ ರುವ ನಿನ್ನ ಸಂದರ್ಶನದ ಪ್ರಭಾವವೇ ಸಾಲದೋ ? ಇದರ ಪ್ರಭಾವಕ್ಕೆ ಲುಬ್ದನಾಗಿರುವದರಿಂದಲೇ ನಾನು ನಿನ್ನಲ್ಲಿಗೆ ಭಟ್ಟಾರಕನಾಗಿ ಬಂದೆನಲ್ಲವೊ ? ಕಲೆ-ಅಣ್ಣ ! ಅಷ್ಟು ಹೊಗಳಿಕೆಗೆ ನಾನು ಅರ್ಹನಲ್ಲ, ಬೃಹಸ್ಪತ್ಯಾಚಾರೈರ ಸನ್ಮಾನಕ್ಕೆ ನಮ್ಮ ಗುರುದೇವರೇ ಪಾತ್ರರು ; ನಾನಲ್ಲ, ಕವಿತಾಮಾನಿನಿಯ ಸುಮಧುರ ವಾದ ಅಧರಾಮೃತದ ಸವಿಯನ್ನು ಚನ್ನಾಗಿ ತಿಳಿದಿರುವ ನೀನಲ್ಲದೆ, ಅಭಿನವ ಕಾಳಿದಾಸನು ನಾನೆಂತಾಗುವೆನು ?