ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿ ಸತೀಹಿತೈಷಿಣಿ - (ಮಾಸಿಕ MAM ಅಕ್ಷಯ-ಹಾಗೋ ! ಆದರೆ ಸಂತೋಷ ! ನಮ್ಮ ಗುರುವೇ - ಸುರಗುರು, ನಾನೇ ಕಾಳಿದಾಸ-ಒಪ್ಪಿದೆಯೋ? ಹಾಗಿ ದ್ದರೆ ಹಿಡಿ; 'ವಿದ್ಯಾರ್ಥಿಕುಲಮಂಡ' ನೆಂಬ ಬಿರುದನ್ನು ಕಲಾ-ಅದುಹೇಗೆ ? ಅರ್ಥಕ್ಕೆ ಸರಿಯಾದ ಪಾತ್ರವನ್ನು ನೋ ಡಬೇಡವೇ ?* ವಿದ್ಯಾರ್ಥಿ ಎಂಬ ಶಬ್ದದ ಅರ್ಥವನ್ನು ಗ್ರಹಿಸುವದಕ್ಕಾದರೂ ಶಕ್ತಿಯಿಲ್ಲದ ನನಗೆ ವಿದಾರ್ಥಿ ಕುಲಮಂಡನ ” ನೆಂಬ ಬಿರುದೇ ? ಚನ್ನಾಗಿದೆ ! ಅಕ್ಷಯ-ಚೆನ್ನಾಗಿಯಿಲ್ಲದೆ ಮತ್ತೇನು? ಕಾಳಿದಾಸನ ಬಾಯಿಂ ದ ಹೊರಬಿದ್ದುದು ಅದೆಂದಿಗೂ ಸುಳ್ಳಾಗಿರಬಾರದಷ್ಟೆ ? ಕಲಾ-ತಲೆದೂಗಿ, 14 ಸರಿ ಸರಿ ! ಒಪ್ಪಿದೆನು. ಆದರೆ, ಕವಿಸಾ ರ್ವಭೌಮ!-ಅಭಿನವಕಾಳಿದಾಸ-ಮಹೋದಯ !! ಪ್ರಸನ್ನನಾಗಿ ನನ್ನನ್ನು ಆಶೀರ್ವದಿಸು ? ಅಕ್ಷಯ-ನಗುತ್ತ “ ಆಹಾ ! ಅಪ್ರಾರ್ಥಿತನಾಗಿಯೇ ನಿನಗೆ ಪ್ರಸನ್ನನಾಗಿ ಬಂದಿರುವೆನು, ಇಷ್ಟು ದೈನ್ಯವೇಕೆ?ಕೇಳು, ಆವಾವ ವರವನ್ನು ಕೋರುವೆಯೋ-ಕೇಳು, ಸರಸ್ವ ತಿಯು ಕೊಡುವಳು. ಕಲಾ-ಕೈಜೋಡಿಸಿ " ಹಾಗಿದ್ದರೆ ಅನುಗ್ರಹಿಸಬೇಕು. ನನ್ನ ಈ ಸಂಕುಚಿತಹೃದಯವು ಭಕ್ತಿಜ್ಞಾನ ಪ್ರಭಾವದಿಂದ ವಿಸ್ತಾರವೂ, ಪ್ರಕಾಶವೂ ಆಗಬೇಕು. ಅಂತಹ ದಿವ್ಯ ಸ್ಥಾನದಲ್ಲಿ ನನ್ನ ಪರದೈವಸ್ವರೂಪರಾದ ಗುರುಗಳ ಮತ್ತು ನನ್ನ ಆಜನ್ಮದಾತಾರರ ಮೂರ್ತಿಗಳನ್ನು ಪ್ರತಿಷ್ಠಿಸಿ, ಅನವರತವೂ ನಾನು, ಅವರ ಸೇವಾರೂಪದ