ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಸತೀಹಿತೈಷಿಣಿ, (ತ್ರೈಮಾಸಿಕ • Any/www/vnwryv\wwwwwwwwwwww ಹೊತ್ತಿನಲ್ಲಿ ಬಂದೆಯೇಕೆ ? ನಾವಿನ್ನೂ ಎಚ್ಚರವಾಗಿ ಮಾತನಾಡುತ್ತಿದ್ದು ದರಿಂದ ನಿಷೇಧಿಸಲು ಒಂದೆ ? ಶಾಂತಿ:-ನಾನು ಬಂದುದು ಅದಕ್ಕವಾದರೂ, ಬಂದು, ನಿಷೇಧಿಸದೆ ಹೋಗುವುದಿಲ್ಲ, ಕಲಾ:-ಕುತೂಹಲದಿಂದ ಅದಾವಕೆಲಸಕ್ಕಾಗಿ ಬಂದೆ ? ' ಶಾಂತಿ:- ಅಕ್ಷಯಕುಮಾರನನ್ನು ಕರೆದೊಯ್ಯಲು ಬಂದೆನು, ಕಲಾ:-ಎಲ್ಲಿಗೆ ? ಏತಕ್ಕೆ ? ಶಾಂತಿ:-ನಮ್ಮ ಗುರುಪುತ್ರಿಯು ಈಗಲೇ ಕರೆತರಹೇಳಿ ಕಳು ಹಿರುವಳು. ಅಕ್ಷಯ:-ಓಹೋ ! ಮರೆತಿದ್ದೆನು. (ಪಕ್ಕಕ್ಕೆ ತಿರುಗಿ) ಕಲಂ ಧವಕುಮಾರ ! ಇನ್ನು ನನಗಪ್ಪಣೆಯೋ ? ಕಲಾ:-ಅಣ್ಣ ! ಸ್ವಲ್ಪ ತಾಳು, ಗುರುಪುತ್ರಿಯ ವಯಸ್ಸೆಷ್ಟು? ಗುರುವಿಗೆ ಮಕ್ಕಳೆಷ್ಟು ಮಂದಿ ? ಅಕ್ಷಯ:-ಗುರುಪಿಗೆ ಈಗ ಹದಿನಾಲ್ಕನೆಯ ವರುಷವು ನಡೆಯುತ್ತಿದೆ, ಅವಳೊಬ್ಬಳೇ ಮಗಳು, ಏಕೆ, ನೀನೀವ ರೆಗೂ ಅವಳನ್ನು ನೋಡಲಿಲ್ಲವೇ ? ಕಲಾ:- ನೋಡಬೇಕಾದ, ಕೇಳಬೇಕಾದ ಅಗತ್ಯವಿಲ್ಲ, ಗುರು ಸಮ್ಮುಖದಲ್ಲಿ ಎಷ್ಟೋಮಂದಿ ಬಾಲ-ಬಾಲಕಿಯರೂ, ಅನಾಥ-ಅನಾಥೆಯ ಆಶ್ರಿತರಾಗಿದ್ದಾರೆ. ಅವರೆಲ್ಲರ ಪರಿಚಯವನ್ನೂ ಮಾಡಿಕೊಳ್ಳಬೇಕಾದ ಅಗತ್ಯವೇನಿದೆ ? ಅಕ್ಷಯ:- ಅದುಸರಿಯೆ, ಈಗ ನೀನೂ ನನ್ನೊಡನೆ ಬರುವೆಯೋ? ಕಲಾ: ನಾನೇಕೆ ಬರಲಿ ? ಗುರುಪುತ್ರಿಯ ಬಳಿಯಲ್ಲಿ, ಅದೂ ಇಷ್ಟು ಹೊತ್ತಿನಲ್ಲಿ ಅಂತಹ ಕಾರೈಗೌರವವು ನನಗೇನು ?