ನಲಸಂ|| ಮಾರ್ಗಶಿರ) ಪೂರ್ಣಕಲಾ • , , /* * * * * ೧arv೧೧v ಭಾಷಣ, ಸಂಗ್ರಹಣಾದಿ ವ್ಯಾಪಾರಗಳಿಂದ ವೈಭವಗೊಳ್ಳುವದೋ, ಆ ನಿನ್ನ ಪರಮ ಕಾರುಣ್ಯಮೂರ್ತಿಯನ್ನು ನನ್ನ ಹೃಠದಲ್ಲಿ ಪ್ರಕಾಶ ಗೊಳಿಸು ! ಹೇ ದೇವಿ ! ವಾಗ್ದವಿ ! ಕ್ಷಣಮಾತ್ರದ ನಿನ್ನ ವಿಯೋಗ ದಿಂದ ಮಾನವನು ಮೂಕ, ಬಧಿರ, ಅಂಧ, ಉನ್ಮತ್ತನಂತಾಗುವನೋ, ಆವ ನಿನ್ನ ವರಪ್ರಸಾದಬಲದಿಂದಲೇ ತ್ರಿಲೋಕವನ್ನೂ ಜಯಿಸುವಂತಹ ಪ್ರತಿಭಾಸಂಪನ್ನ ನೆನ್ನಿಸುವನೋ, ಆ ನಿನ್ನ ಸುಮನೋಹರಸ್ವರೂಪವನ್ನು ನನ್ನ ರಸನೇಂದ್ರಿಯದಲ್ಲಿ ಸರ್ವದಾ ನೆಲೆಗೊಳಿಸಿ ಅನುಗ್ರಹಿಸುತ್ತಿರು.' • ಹೇ ಜನನೀ ! ಜೈತನ್ಯದಾಯಿನಿ !! ಯಾವ ಆ ನಿನ್ನ ಪ್ರತಿಭಾ ಸಂಪನ್ನ ತೆಯನ್ನೇ ಸುರ, ನರ, ಮುನಿ, ದನುಜ, ಸಿದ್ಧ, ವಿದ್ಯಾಧರರಾದಿ ಸಮಸ್ತರೂ ಪ್ರಾರ್ಥಿಸುತ್ತಿರುವರೋ, ಆನಸಿನ್ನ ಪ್ರಣಯಸಹಾಯ ದಿಂದಲೇ ಸೃಷ್ಟಾರನ ಸೃಷ್ಟಿ ರಚನಾಕಾರವು ಕೌತುಕಯುಕ್ತವಾಗಿ ಪರಿ ಶೋಭಿಸುವುದೋ, ಆವ ನಿನ್ನ ದಿನ ಸ್ವರೂಪಕ್ಕೆ `ಜನ್ಮಸ್ಥಾನವೆನ್ನಿಸಿದ ಸಾಕ್ಷಾತ್ ಎರಡೂಪನ ವದನವು ಸುಧಾಮಯವೆಂದು ಪ್ರಸಿದ್ದಿ ಹೊಂದಿರುವುದೋ, ಆ ನಿನ್ನ ಕೃಪಾಪರಿಪೂರ್ಣವಾದ ದಿವ್ಯ ರೂಪ ಸಾಕ್ಷಾತ್ಕಾರಲಾಭದಿಂದ ಈ ನಿನ್ನ ಅಣಮಾತ್ರದ ಅಣುಗಿಯನ್ನು ಕೃತಾರ್ಥಳನ್ನಾಗಿ ಮಾಡು ತಾಯೇ ! ಕೈನೀಡಿ ಬೇಡುವೆನು. ಕೃಪೆ ಮಾಡು, ಮಾಡು ! :) ಮೇಲೆ ಹೇಳಿದ ವಾಗ್ಗೇವತಾಸ್ತುತಿ, ಸಂಪ್ರಾರ್ಥನೆಗಳು, ಶಾಲಾ ಧ್ಯಕ್ಷರಾದ ಶ್ರೀಯುಕ್ತ ಜ್ಞಾನಾನಂದಭಾಸ್ಕರಭಟ್ಟಾಚಾರೈರ ಮನೆಯ ಮಾಳಿಗೆಯ ಮೇಲಿನ ಕಿರುಮನೆಯಲ್ಲಿ, ನೆಲದಮೇಲೆ ಮೊಣಕಾ ಊರಿ, ದೈನ್ಯಭಾವದಿಂದ ಕೈಜೋಡಿಸಿ, ಊರ್ಧ್ವಮುಖಿಯಾಗಿ ಕುಳಿತು ಪ್ರಾರ್ಥಿಸುತ್ತಿದ್ದ ಓರ್ವ ಹದಿನಾಲ್ಕು ವರ್ಷದ ಕೋಮ
ಪುಟ:ಪೂರ್ಣಕಲಾ.djvu/೫೫
ಗೋಚರ