ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ೪೦ ಸತೀಹಿತೈಷಿಣಿ (ಿ ಮಾಸಿಕ • • • • • • • ••• - - - - ಬಾಲೆಯ ಕಮನೀಯಕಂಠದಿಂದ ಹೊರಡುತ್ತಿದ್ದವು. ಹೊತ್ತು ಆಗಲೇ ರಾತ್ರಿ ಹನ್ನೆರಡಕ್ಕೆ ಹತ್ತಿರವಾಗುತ್ತಿದ್ದಿತು. ಬಾಲೆಯು ಇನ್ನೂ ಮ೦) ಗಿರಲಿಲ್ಲ. ಕಣ್ಣೀರು ಸುರಿಸುತ್ತಾ, ನಡನಡುವೆ ನಿಟ್ಟುಸಿರು ಬಿಡುತ್ತ ಕೀರ್ತನೆಮಾಡುತ್ತಿದ್ದಳು. ಶಾಲೆಯ ಮುಂದೆಯೇ ಒಂದು ದೀಪಸ್ತಂ ಭವೂ, ಮುಂದೆಯೇ ಶಾರದಾದೇವಿಯ ಚಿತ್ರ ಪಠವೂ ಪ್ರಕಾಶಿಸುತ್ತಿ ದ್ದವು. ಚಿತ್ರಪಟದಮುಂದೆ ಕೆಲವು ಪುಸ್ತಕಗಳೊಳಕೊಂಡಿದ್ದ ಪೆಟ್ಟಿ ಗೆಯ ಇರಿಸಲ್ಪಟ್ಟಿದ್ದಿತು, ಬಾಲೆಯು ಕುಳಿತಿದ್ದುದಕ್ಕೆ ಇದಿರಾಗಿಯೆ ಕಿರುಮನೆಯ ಒಂದು ಮೂಲೆಯ ಕಡೆಯಲ್ಲಿ ಒರ್ವ ವೃದ್ದಳು ಗಾಢ ನಿದ್ರೆಯಲ್ಲಿ ಮಲಗಿದ್ದಳು. ಸುಕುಮಾರಿಯು ಭಕ್ತಿಪರವಶತೆಯಿಂದ ಕುಳಿತು ಧ್ಯಾನವ ಡುತ್ತಿರುವಾಗಲೇ ಮಲಗಿದ್ದ ಮುದುಕಿಯು ಧಿಗ್ಗನೆದ್ದು ನೋಡಿ, ಗಾಬರಿ ಗೊಂಡೆದ್ದು ಬಂದು, ಪ್ರೇಮವ್ಯಂಜಕಸ್ವರದಿಂದ ಪೂರ್ಣಕಲೆಯ ತಲೆಯ ಮೇಲೆ ಕೈಯಿರಿಸಿ ಕೇಳಿದಳು. «« ಇನ್ನೂ ಮಲಗಿಲ್ಲವೇ? ನನ್ನ ಕಂದಾ? ರಾತ್ರಿ ಇಷ್ಟು ಹೊತ್ತಾ ಗಿದ್ದೂ ಇನ್ನೂ ಮಲಗಲಿಲ್ಲವೇ? ಹೀಗೆ ನಿದ್ದೆಗೆಟ್ಟರೆ ಹೇಗೆ,-ಮಗುವೇ ? ಎಳೆಮಿದುಳಿಗೆ ಈಗಲೇ ಇಷ್ಟೊಂದು ಚಿಂತೆಯಾದರೆ ಗತಿಯೇನು ? ಬಾಲೆ:-ಎಚ್ಚರಿಕೆಯಿಂದಿ, ಏನೆಂದೆಯಷ್ಟೇ ? ನಿದ್ದೆಗೆಟ್ಟೆನೆಂದೆ ಯಾ?ನಾನೇನುಮಾಡಲಿ?ಇಂದು ನನಗೇನೋ ನಿದ್ದೆಯೆ ಬಾರದಂತಾಗಿದೆ. ಕಣ್ಣು ಬಿಗಿದರಲ್ಲವೇ, ಮಲಗುವದು? ವೃದ್ದೆ:-ಆತುರದಿಂದ ಅದೇಕೆ ನಿದ್ದೆ ಬಾರದು ? ಮಲಗಿದ ರಲ್ಲವೇ, ನಿದ್ದೆ ಬರುವದೂ ಇಲ್ಲದುದೂ ತಿಳಿಯಬೇಕು? ಬಾಲೆ:- ನಿಜ; ಆದರೆ ಕೇಳು, ಅಜ್ಜಿ ! ಅದೇನು ಕಾರಣದಿಂ ದಲೋ ನಾನರಿಯೆನು, ನನಗಿಂದು ಎಂದೂ ಇಲ್ಲದ