ನಲಸಂ|| ಮಾರ್ಗಶಿರ) ಪೂರ್ಣಕಲಾ ೪೧ ದುಃಖವುಂಟಾಗಿ ಅಳುವುದಕ್ಕಾಗಲೀ ಮಲಗುವದಕ್ಕಾ ಗಲೀ ಆಗದಂತಾಗಿ ಹೋಗಿದೆ. ವೃದ್ಧೆ-ಕಂಪಿತಸ್ವರದಿಂದ 'ಮಗುವೆ ? ಸುಮ್ಮನೇ ಅತ್ತರೆ, ನಿಮ್ಮ ಮ್ಮನು ಎದ್ದು ಬರುವಳೇ ? ಎಂದೋ ಕಾಲ ವಾಗಿ ಹೋದ ತಾಯಿಯನ್ನು ನೆನೆನೆನೆದು, ಹೀಗೆ ಅತು ಅತ್ತು ಮೈಯನ್ನು ಗಾಸಿಮಾಡಿಕೊಳ್ಳಬಾರದು !' ಬಾಲೆ-ಅಜ್ಜಿ ! ಅದಲ್ಲ-ಅದಲ್ಲ ! ನನ್ನ ದುಃಖಕ್ಕೆ ಕಾರ ಣವು ಅದೇನೂ ಅಲ್ಲ. ನಾನು ನಮ್ಮ ಅಮ್ಮನನ್ನು ನೆನೆದು ಅಳುತ್ತಿಲ್ಲ. ವೃದ್ದೆ. ಹಾಗಾದರೆ, ಮತ್ತೇಕೆ ವಿಚಾರಮಾಡುತ್ತಿರುವೆ ? ಬಾಲೆ-ಅಜ್ಜಿ ! ಮಾವನನ್ನು ಬರಹೇಳಿ ಕಳಿಸಿದ್ದೆ ; ಆತ ನಿನ್ನೂ ಬರಲಿಲ್ಲ. ಈವರೆಗೆ ಆತನು ನನ್ನ ಮಾತನು ಅದೆಂದೂ ತೆಗೆದುಹಾಕಿರಲಿಲ್ಲ, ಇಂದು....! ವೃದ್ದೆ ಇಷ್ಟು ಹೊತ್ತಿನಲ್ಲಿ ಅಷ್ಟರ ಅಗತ್ಯವೇನಿದೆ? ಬಾಲೆ-ಉಗುಳುನುಂಗುತ್ತ ಅಷ್ಟೇ! ನಿನಗೊಂದೂ ತಿಳಿಯದು. ನನಗಿಂದು ಮಿದುಳೆಲ್ಲಾ ಹಾರುವಂತೆ ಏನೇನೋ ಆಗಿ ಹೋಗಿದೆ ! ಹೀಗಾದುದೇಕೆಂದು ವಿಚಾರಮಾಡುವ ಆತುರವು ನನಗೆ ಅತಿಯಾಗಿದೆ. ಇದಕ್ಕಾಗಿ ಶಾಂತಿನಾ ಧನನ್ನೇ ಕಳುಹಿದ್ದೆನು. ಆತನಿನ್ನೂ ಬರಲಿಲ್ಲ.' ವೃದ್ದೆ --ಸರಿ ರಾತ್ರಿಯಲ್ಲಿ, ಆತನಿಲ್ಲಿಗೆ ಹೇಗೆಬರುವನು-ಪೂರ್ಣ? ಬಾಲೆ ) ಕಣ್ಣ ಳನ್ನು ಅರಳಿಸಿ “ಬರಬಾರದೇಕೆ-ಅಜ್ಜಿ ? ಪೂರ್ಣಕಲೆ | ಮಾವನೂ ಇಲ್ಲಿಗೆ ಬರಲಾಗದೇನು ? ನನ್ನೊ 6
ಪುಟ:ಪೂರ್ಣಕಲಾ.djvu/೫೭
ಗೋಚರ