ನಲಸಂ|| ವರ್ಗಶಿರ) ಪೂರ್ಣಕಲಾ ೪೫ • • • • • • • • • • • • • • • -- * * * - – – * * * * ಅಕ್ಷಯ-ಬಿನ್ನ ಭಾವದಿಂದ ಪೂರ್ಣಕಲೆಯ ಮುಂದೆ ಕುಳಿತು “ತಾಯಿ ! ನಾನು ನಿಧಾನಿಸಿದ ಮಾತ್ರಕ್ಕೆ ನಿನಗೆ ಇಷ್ಟರ ದುಗುಡವೇ ? ಪೂರ್ಣ-ಕಂಪಿತಸ್ವರದಿಂದ 'ಮಾವ ! ತಾಯಿಯ ಬಳಿಯಲ್ಲಿ ಸರಸ ಸಲ್ಲಾಪ ಸುಖವನ್ನು ಅನುಭವಿಸುವದಕ್ಕಂತೂ ನನಗೆ ಪುಣ್ಯವಿಲ್ಲ. ತಂದೆಯಮಾತೆಂದರೆ, ಅವರು ಸಾಕ್ಷಾತ' ಪರಮಾತ್ಮನ ಪ್ರತಿನಿಧಿ ಸ್ವರೂಪರೇ ಆಗಿ ರುತ್ತಾರೆ. ಇನ್ನು ನನ್ನ ದುಃಖವನ್ನು ನಾನು ಸಲಿಗೆ ಯಿಂದ ಹೇಳಿಕೊಳ್ಳುವದಾರಲ್ಲಿ ? ನೀನು ಮತ್ತು ನಮ್ಮ ಅಜ್ಜಿ - ಇಬ್ಬರಲ್ಲದೆ ನನಗೆ ಮತ್ಯಾರು ? ಅಜ್ಜಿಯು ಕೈ ಕಾಲುತ್ರಾಣಗುಂದಿದವಳು. ಅಲ್ಲದೆ ಆರುಳುಮರುಳು,- ನಾನೊಂದೆಂದರೆ, ತಾನೊಂದನ್ನು ತಿಳಿದುಕೊಳ್ಳುವ ಸ್ಥಿತಿ ಯಲ್ಲಿರುವಳು. ನೀನಾದರೆ ಹೀಗೆ!' -(ಮುಂದೆ ನಾತಿ ಲ್ಲದೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು.) ಅಕ್ಷಯ-ಕಂಬನಿದುಂಬಿ ಅನುಕಂಪಿತಸ್ವರದಿಂದ ' ಪೂರ್ಣ ಕಲಾ ! ದುಃಖವನ್ನು ತಡೆದುಕೊ. ನಾನು ನಿನ್ನನ್ನು ಸ್ವಪ್ನದಲ್ಲಿಯೂ ಉಪೇಕ್ಷಿಸುವುದಿಲ್ಲ. ತಾಯಿ ! ನಾ ನು ಆಗಲೇ ಬರುತ್ತಿದ್ದನು. ಆದರೆ ನನ್ನ ಮಿತ್ರರಲ್ಲಿ ಮುಖ್ಯನಾಗಿರುವ 'ಕಲಾಧವ'ನೆಂಬುವನೊಡನೆ ಮಾತ ನಾಡುತ್ತ ಕುಳಿತೆನಾದುದರಿಂದ ನಿಧಾನವಾಯಿತು.” ಪೂರ್ಣ-ಕಣ್ರಸಿಕೊಂಡು ಅವನೇನಾದರೂ ನಿನ್ನನ್ನು ಹೋಗಬೇಡವಂದು ತಡೆದನೇ ? ನೀನಾಗಿ ಅಲ್ಲಿ ಮಾತಿಗೆ
ಪುಟ:ಪೂರ್ಣಕಲಾ.djvu/೬೧
ಗೋಚರ