ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦. ಸತೀಹಿತೈಷಿಣಿ (ತ್ರೈಮಾಸಿಕ /* f {f t} - // + (11A 2 ೧• ನೀನಾದರೂ ಬುದ್ದಿಗಲಿಸಿ, ಬೇಗ ಮಲಗುವಂತೆ ಮಾಡು ವುದು ಒಳ್ಳೆಯದು. ಅಕ್ಷಯ-ಅಜ್ಜಿ ! ಈವರೆಗೆ ಕಲೆಯು ಅಷ್ಟು ಮಟ್ಟಿಗೆ * ತಿಳಿದವಳಾಗಿರಲಿಲ್ಲ. ಇನ್ನು ಮುಂದೆ ಹಾಗೆಯೇ ಮಾಡುವಳು. ನೀವಿನ್ನು ನಿಶ್ಚಿಂತರಾಗಿ ಮಲಗಬಹುದು. ವೃದ್ಧೆಯು ತಲೆದೂಗುತ್ತ ಮೆಲ್ಲನೆದ್ದು ಹೋಗಿ ಮೊದಲಿನಂತೆ ಯೇ ಕಿರುಮನೆಯ ಮೂಲೆಯ ಕಡೆಯಲ್ಲಿದ್ದ ಹಾಸಿಗೆಯ ಮೇಲೆ ಮಸುಕಿಟ್ಟು ಮಲಗಿದಳು. ಅಕ್ಷಯ - ತಾರಾ ! ಯಾವ ಕೆಲಸಕ್ಕಾಗಿ ಕರೆಯಿಸಿದೆ ? ಪೂರ್ಣ ಮಾವ ! ನಿಮ್ಮ ಸಂಗಡಿಗರಲ್ಲಿ 14ಕಲಾಭ್ಯರ್ಥಿ' ಎಂಬುವನಿದ್ದಾನೆಯೋ ? ಅಕ್ಷಯಕುತೂಹಲದಿಂದ ಏಕೆ ??? ಪೂರ್ಣಉಡಿಯಲ್ಲಿರಿಸಿಕೊಂಡಿದ್ದ ಪತ್ರವೊಂದನ್ನು ತೆಗೆದು ಅಕ್ಷಯಕುಮಾರನ ಕೈಯಲ್ಲಿರಿಸಿ ( ಮಾವ ! ಇದನ್ನು ನೀನು ನಿಧಾನವಾಗಿ ಓದಿನೋಡಿ ಉತ್ತರವೇನು ಕೊಡ ಬೇಕೆಂಬುದನ್ನು ತಿಳಿಸಬೇಕು. ಧ್ಯಾನಾನಂತರ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದ ನನ್ನ ಮುಂದೆ ಇದೇಗವಾ ಕ್ಷದಿಂದ ಈ ಪತ್ರವು ಬಂದು ಬಿದ್ದಿತು. ಇದಕ್ಕಾಗಿಯೇ ನಾನು ನಿನ್ನನ್ನು ಇಷ್ಟು ಬಲಾತ್ಕಾರದಿಂದ ಬರಹೇಳಿ ದನು. ಈ ಸಂಗತಿಯು ಅಜಿಗೆ ತಿಳಿದರೆ ಗಂಟೆಯ ದೀತೆಂದು ಬಾಯ್ದೆರೆಯಲಿಲ್ಲ ಅಕ್ಷಯ --ಇರಲಿ, ಪೂರ್ಣಕಲಾ ! ಈ ಕಾಗದಕ್ಕೆ ನಾನು ನಾಳೆಯೇ ಸರಿಯಾದ ಉತ್ತರವನ್ನು ಬರೆದು ತಂದು, ಮುಂದಿನ ವಿಚಾರವನ್ನು ಹೇಳುವೆನು, ಇನ್ನು ನೀನು ಮಲಗು, ನಾನು ಹೋಗುವೆನು.? ಎಂದು ಉತ್ತರನಿರೀಕ್ಷೆಯಿಲ್ಲದೆ ಹೊರಟುಹೋದನು. ಪೂರ್ಣ ಕಲೆಯ ಬಂದು ಅಜ್ಜಿಯ ಬಳಿಯಲ್ಲಿದ್ದ ಹಾಸಿಗೆಯ ಮೇಲೆ ಮಲಗಿದಳು.