ಣಿಯು ತನ್ನ ಸಂಕಲ್ಪಿತ ಕಾರ್ಯವು ಭಂಗವಾಗಬಾರದೆಂದು ಭಾವಿಸಿ,- “ಪ್ರಾರಭ್ಯ ತೇ ನ ಖಲು ವಿಘ್ನ ಭಯೇನ ನೀ | ಪ್ರಾರಭ್ಯ ವಿಘ್ನ ವಿನತಾ ವಿರಮಂತಿ ಮಧ್ಯಾತ್ || ಏಧ್ಯೆತಿ ಸಹಸ್ರ ಗುರಪಿ ಹನ್ಯ ಮಾನಾಃ | ಪ್ರಾರಬ್ಧ ಮುತ್ತ ಮಜನಾ ನಪರಿತ್ಯಜಂತಿ |' ಎಂಬ ನೀತಿಯನ್ನು ನೆನಪಿನಲ್ಲಿಟ್ಟು ಆರಮಹನೀಯರ ಮಾರ್ಗವನ್ನು ಯಂt ತಾದರೂ ಅನುಸರಿಸಬೇಕೆಂದು ಭಾವಿಸಿ, ಮುಂದರಿದುದಾಯಿತು. ಸದ್ಗುರು ಸಹಾಯವು ಚನ್ನಾಗಿದ್ದುದರಿಂದ ಎಷ್ಟುಗಳೆಲ್ಲವೂ ನಿವಾರಣ ವಾಗಿ, ನಿರ್ದಿಷ್ಟ ಫಲವನ್ನು ಕಾಣುವಂತಾಯಿತು. ಆದರೆ,ಚಂದ್ರವದನೆಯಲ್ಲಿ ಹೇಳಿದ್ದಂತೆ ಪೂರ್ಣಕಲೆಯನ್ನು ಚಂದ್ರ ವದನೆಯಷ್ಟೇ ನಿಲ್ಲಿಸಲಾಗದೆ, ಪೂಣ೯ ಪುಸ್ತಕವಾಗಿ ಮಾಡಬೇಕಾಯಿತು. ಕಾಗದಕ್ಕೆ ಕ್ಷಾಮವುಂಟಾಗಿರುವುದರಿಂದ ಇದರ ಉಪಯೋಗಕ್ಕೂ ಇದರಲ್ಲಿರುವ ನಾಲ್ಕಾರು ಭಾವಚಿತ್ರಗಳಿಗೂ ಇದರ ಪುಟಸಂಖ್ಯೆಗೂ ತಕ್ಕಂತೆ ಬೆಲೆಯನ್ನು ೧-೪-೦ ಕ್ಕೆ ಏರಿಸಬೇಕಾಯಿತು. ಇನ್ನು ಮುಂದಿನ ಪುಸ್ತಕಗಳೂ,-ಎಂದರೆ “ವಿದ್ಯಾವಿನೋದ, ಬ್ರಹ್ಮಚಾರಿಣಿ' ಗಳು ಕೂಡ ಹೀಗೆಯೇ ವಿಸ್ತ್ರತಗ್ರಂಧಗಳಾಗಿ ಹೊರಬೀಳುವುವು. ಭಗ ವಸೆಯಿದ್ದರೆ ಅವೆರಡು ಗ್ರಂಧಗಳೂ ಮಾರ್ಗಶಿರ-ಪುಷ್ಯ ಮಾಸದೆ ಳಗಾಗಿ ಹೊರಬೀಳುವುದೆಂದು ನಂಬಿರುವೆವು. ಮತ್ತು ಕಾಗದದ ಕ್ಷಾಮವು ಇಳಿದು ಸುಸ್ಥಿತಿಗೆ ಬರುವವರೆಗೆ, ನಮ್ಮ ಚಂದಾದಾರರಿಗೂ ಪುಸ್ತಕಗಳನ್ನು ಸಾಮಾನ್ಯ ಕ್ರಯಕ್ಕೆ ಕೊಡುವಂತೆಯೂ ಪ್ರತಿಯೊಂದು ಗ್ರಂಧಕ್ಕೂ ಚಂದಾದಾರರಿಗೆ ಮಾತ್ರ ನಾಲ್ಕಾಣೆಗೆ ಕಡಮೆಯಿಲ್ಲದ ಬಹು ಮಾನ ಪುಸ್ತಕಗಳನ್ನೂ ಹಂಚುವಂತೆಯೂ ನಿಶ್ಚಯಿಸಿರುವೆವು. ಈ ಪೂರ್ಣಕಲೆಯ ಮುದ್ರಣಕ್ಕೆ ಪ್ರಾರಂಭವಾದುದು ಮೊದ ಲು ಗ್ರಂಥಕತ್ರಿಗೂ, ಮುದ್ರಾಹಕರಿಗೂ ಉಂಟಾದ ಅನೇಕ ವಿಧವಾದ ಅನನುಕೂಲತೆಗಳಿಂದ ಗ್ರಂಧದಲ್ಲಿ ಅನೇಕ ತಪ್ಪುಗಳು ಬಿದ್ದು ಹೋಗಿದೆ
ಪುಟ:ಪೂರ್ಣಕಲಾ.djvu/೮
ಗೋಚರ