ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಸತೀಹಿತೈಷಿಣಿ (ಡ್ರೈಮಾಸಿಕ

  • * * * * * * * * * * * * * * \/\\\

ಒಬ್ಬನ ಪವಿತ್ರಸಂದೇಶವೆಂದು ಮಾತ್ರ ತಿಳಿಯಬೇಡ. ನಮ್ಮ ಅರಮಹನೀಯರು ತಮ್ಮ ಔರಸಪುತ್ರರಲ್ಲಿ, ಸಂದರ್ಭಾನುಸಾರವಾಗಿ ಆಗ್ರಹವನ್ನು ಪ್ರಕಟಿಸಿದರೂ, ತಮ್ಮಲ್ಲಿ ಗುರುಕುಲವಾಸಕ್ಕಾಗಿ ಬಂದ ಶಿಷ್ಯರನ್ನು ತಮ್ಮ ಪ್ರಾಣಕ್ಕೂ ಹೆಚ್ಚಾಗಿ ಭಾವಿಸಿ ರಕ್ಷಿಸುತ್ತ ಬಂದರು!!! ಆದುದರಿಂದಲೇ ನಮ್ಮ ಆಧ್ಯಸಂಪ್ರದಾಯದಲ್ಲಿ, ಈ ಗು ರುಕುಲವಾಸ, ಶಿಷ್ಯವೃತ್ತಿ, ಬ್ರಹ್ಮಚಯ್ಯನಿಷ್ಠೆಗಳೆಂಬ ಮಾನವನ ಪ್ರಾಥಮಿಕ ಆಭ್ಯಾಸಯೋಗಕ್ಕೆ ಇಷ್ಟು ಪ್ರಾಶಸ್ಯವುಂಟಾಗಿದೆ. ಈ ತತ್ವವನ್ನು ತಿಳಿದು ನಾನು ಮತ್ತೆ ಹೇಗೆ ವರ್ತಿಸಬಹುದು-ಹೇಳುವೆಯಾ ? ಕಲಾ-ಮತ್ತೂ ಹೆಚ್ಚಿದ ಬಟ್ಟೆಯಿಂದ ಉತ್ತರವನ್ನು ಕೊಡಲು ಈ ಬಾಲಕನು ಅಸಮರ್ಥನು ! ಆದರೂ ಈತನಲ್ಲಿ ಸ್ತುತ್ಯರ್ಹವಾದ ಗುಣವಾವದಿರುವ ದೋ ತಿಳಿಯದು ?' ಭಾಸ್ಕರ-ತಲೆದೂಗಿ ಕಲಾಧವನನ್ನೇ ನೋಡುತ್ತ 'ಸುಕು ಮಾರಾ ! ಗುಣವೆಂದರೆ, ಶ್ಲಾಘನೆಗೆ ತಕ್ಕುದಾದ ಗುಣ ವೆಂದರೆ, ಮತ್ತಾವುದೆಂದು ಹೇಳುವೆ ? ಸಹನಶೀಲತೆ, (ಶ್ರಮಸಹಿಷ್ಣುತೆ) ವಿಧೇಯತೆ, ಸತ್ಯತೆ, ಶಾಂತತೆ, ಸಾರಾಸಾರ ವಿಚಾರತತ್ಪರತೆಗಳೇ ಮೊದಲಾದ ಈ ಗುಣ ಗಳ ಒಂದೊಂದು ಗುಣವೇ ವಿದ್ಯಾರ್ಥಿಯ ಸಚ್ಚರಿತೆ ಯನ್ನು ಸೂಚಿಸುವ ಸ್ತುತ್ಯರ್ಹ ವಾದ ಗುಣಗಳಲ್ಲವೇ ನು ? ಇವುಗಳಿಂದಲೇ ಅಲ್ಲವೇ,ನಮ್ಮ ಪೂರ್ವಜ