೭೨ ಸತೀಹಿತೈಷಿಣಿ (ಿ ಮಾಸಿಕ
- * * * *
ಕೈಯಲ್ಲಿರಿಸಿದ ಪತ್ರವು ಮತ್ತಾವುದಿರಬೇಕು ? ಲೇಖಕರ ವಿಚಾರದಲ್ಲಿ ನಾನೀಗಲೇ ಹೇಳಬೇಕೆಂದರೆ,-ಲೇಖಕರ ಹೆಸರನ್ನೇ ಕಾಣಿಸಲಿಲ್ಲ, ಇನ್ನು ನಾವೇನು ಹೇಳಬಹುದು ? ಆದರೆ ಲೇಖನದ ರೀತಿಯನ್ನು ನೋಡಿನೀವೇ ಊಹಿಸಬಹುದೆಂದು ಅದರ ಪ್ರತಿಯನ್ನೇ ಇಲ್ಲಿ ಕೊಟ್ಟಿದೆ. ಪರಿ ಶೀಲಿಸಿ ನೋಡಿರಿ, || ಪತ್ರ | “ಶಿ...ದೇವೀಸಹಾಯ” ಭಿಕ್ಷಾಂಪ್ರದೇಹಿ............ ಕುಧಿತಾಯಮಂ. ದೇವಿ ! ಅನ್ವರ್ಥನಾ ಯಾದ ಪೂರ್ಣಕಲಾದೇವಿ !! ನಾನೂ ಬೃ ಭಿಕ್ಷುಕನು; ಭಿಕ್ಷಾಪಾತ್ರವನ್ನು ಹಿಡಿದು ಬೇಡುತ್ತಿದ್ದೇನೆ. ಹಸಿವು ತೃಷೆಗಳಿಂದ ಅತಿಯಾಗಿ ಪೀಡಿತನಾಗಿ, ಆರ್ತತೆಯಿಂದ ಪ್ರಾರ್ಥಿಸುತ್ತಿ ದೇನೆ. (ದೇಹಿಯೆಂದರೆ ನಾಸ್ತಿಯೆನ್ನ ಬೇಡ ಎಂಬುದು ನಿನಗೆ ತಿಳಿದೇ ಇದೆ. ಆದರೆ-ಅದೇನು ಹೇಳುವೆ? ಭಿಕ್ಷುಕನಾಗಿದ್ದರೆ, ಭೋಜನ ಶಾಲೆಯ ಬಳಿಗೆ ಬರಬೇಕೆಂದೂ, ಅಡಗಿ ಕೇಳಿದರೆ ಭಿಕ್ಷವು ದೊರೆಯ ದೆಂದೂ ಹೇಳುವೆಯೇನು ? ಆದರೆ ದೇವಿ ! ನನಗೆ ಆ ಹಿಡಿಗೂಳಿನಿಂ ದಣಿಯುವಂತಹ ಹಸಿವಲ್ಲ !........ ಇನ್ನೂ ಹೆಚ್ಚು ಹೇಳಲಾರೆ. ಗುರು ರಾಜಪುತ್ರಿ!-ನಾನಿಂದಿನವರೆಗೆ ನಿನ್ನನ್ನು ನೋಡಿದುದಾಗಲೀ-ನಿನ್ನ ವಿಷಯವನ್ನು ಕೇಳಿದುದಾಗಲೀ ಇಲ್ಲ. ಇದೇ ಈಗಲೇ ತಿಳಿದು ಬಂದು ನಿನಗೆ ಕಾಣದಂತೆ ನಿಂತು ನಿನ್ನನ್ನು ನೋಡಿದೆನು ; ಸಂತೋಷದಿಂದ ಪರ ವಶನಾದೆನು. ಮತ್ತೂ ಹೇಳಿ ? ನೀನಿನ್ನೂ ಕನ್ಯಾವಸ್ಥೆಯಲ್ಲಿರುವುದ ರಿಂದ, ನಾಗರಿಕ ಜನಾಂಗಕ್ಕೆ ಸೇರಿರುವ ಪ್ರೌಢವಿದ್ಯಾವತಿಯೆಂದು