ನೆಲಸಂ|| ಮಾರ್ಗಶಿರ) ಪೂರ್ಣಕಲಾ ೬೩ •••••• ತಿಳಿದುದರಿಂದಲೂ, ಮತ್ತು ಕಲಾಕೌಶಲ್ಯಗಳಲ್ಲಿ ನಿಷ್ಣಾತರಾಗಿರುವೆಯೆಂ ಬುದು ನಿನ್ನ ನಾಮಧೇಯದಿಂದಲೇ ತಿಳಿಯುವುದರಿಂದಲೂ --ಧೈರ್ಯ ವಾಗಿ ಕೇವಲ ಆತ್ಮೀಯಭಾವದಿಂದ, ಪೂರ್ಣ ಸ್ವಾತಂತ್ರ ದಿಂದ ಈ ಪತ್ರದ್ವಾರಾ ಸಂಪ್ರಾರ್ಥಿಸುತ್ತಿರುವೆನು. ಇದರಿಂದ ನನ್ನನ್ನು ಆರ ಸಿಕನೆಂದಾಗಲೀ, ಅನಾಗರಿಕನೆಂದಾಗಲೀ, ಅಂಗಹೀನ.ಅಥವಾ ನಿರ್ಭಾ ಗ್ಯನೆಂದಾಗಲೀ, ಭಾವಿಸಬೇಕಾಗಿಲ್ಲ. ಇಂತಹ ಕೊರತೆಯು ನನ್ನನ್ನು ಸೋಕುವಂತೆಯೂ ಇಲ್ಲ. ಕನ್ಯಾ -ಕನ್ಯಾಪಿತ-ಮತ್ತು ಕನ್ಯಾ ಬಂಧು ವಗಳ ಕ್ಕೆಲ್ಲಾ ಸಮರ್ಪಕವಾಗುವಂತಹ ಸುಸ್ವರೂಪ, ವಯೋನುಗುಣ ವಿದ್ಯಾ -ಕುಲ ಸಂಪಭವಗಳಲ್ಲಿ ಅವ ಭಾಗದಲ್ಲಿಯ ಆವ ನ್ಯೂನ ತೆಯೂ ಇಲ್ಲವೆಂದು ಖಂಡಿತವಾಗಿ ತಿಳಿಯಬಹುದು. ಹಾಗೆ ನೀನು ಇಷ್ಟ ಪಡುವುವಾದರೆ ಧಾರಾಳವಾಗಿ ನಿನ್ನ ಮುಂದೆ ಬಂದು ನಿಲ್ಲುವೆನು. ನಿನ್ನಲ್ಲಿ ಸಂಭಾಷಿಸುವಷ್ಟರ ಅವಕಾಶವನ್ನು ಕಲ್ಪಿಸಿಕೊಡುವುದಾದರೆಆಗಿನ ನನ್ನ ಆನಂದಕ್ಕೆ ಮೇರೆಯೇ ಇರುವುದಿಲ್ಲ, ಸುಕುಮಾರಿ ! ಶುಭಾಂಗಿ !! ಹೆಚ್ಚಾಗಿ ಹೇಳಲಾರೆನು. ನೀನು ಯೌವನೋನ್ಮುಖಿ ಯಾಗಿದ್ದು ಸ್ವಾತಂತ್ರವನ್ನು ವಹಿಸುವ ಅರ್ಹತೆಯನ್ನು ಹೊಂದಿ ರುವೆ. ನಿನ್ನ ಭಾವಸುಖ-ಸಂಪತ್ತಿಯ ಕಡೆಗೆ ನೀನೇ ಹೆಚ್ಚು ಗಮನ ವನ್ನು ಕೊಡಬೇಕಲ್ಲದೆ, ಯೋಗಿವಯ್ಯರಾದ, ವಿರಕ್ತಾಗ್ರೇಸರರಾದ ನಿಮ್ಮ ತಂದೆಯು, ಆಷ್ಟಾಗಿ ಗಮನಿಸುವಂತಿಲ್ಲ. ಮತ್ತೆ ನಿನಗೆ ನಿನ್ನಅಪ್ರೇಮಯಿಯಾದ ತಾಯಿಯೂ ಇಲ್ಲ. ವಸ್ತುಸ್ಥಿತಿಯು ಹೀಗಿದು ನಿನ್ನ ಭವಿಷ್ಯ ಜೀವನದ ಸುಖಾನುಭವವಿಚಾರದ, - ಸಮಸ್ತಭಾರವೂ ನಿನ್ನನ್ನೇ ಸೇರಿರುವುದೆಂದು ಹೇಳಲು ಏನೂ ಅಡ್ಡಿ ಯಿರಲಾರದು ! ಅದು ದರಿಂದ ಮೇಲಿನ ನನ್ನ “ ಭಿಕ್ಷಾಂದೇಹಿ...” ಎಂಬ ವಾಕ್ಯವನು _10
ಪುಟ:ಪೂರ್ಣಕಲಾ.djvu/೮೯
ಗೋಚರ