ನ ಸಂ|| ಮಾರ್ಗಶಿರ) ಪೂರ್ಣಕಲಾ ع ع \\/ \ / \ |
- * * * * * ***
- * * * * *
ಪ್ರಭಾಕರ-ಆಹಾ ! ಹೊಗುವಾಗಲೇ ಹೇಳಿರಲಿಲ್ಲವೆ?-ಮ ರುವಾರಗಳ ಅವಧಿಯಲ್ಲಿ ಬಂದು, ಗುರುಕುಲವಾಸದಲ್ಲಿ ಸೇರುವೆನೆಂದು -ಅದರಂತಯೇ ತಾಯಿತಂದೆಗಳಿಂದ ಅನು ಮತಿ ಹೊಂದಿ ಬಂದುಬಿಟ್ಟೆನು. ಅಕ್ಷಯ -- ಹಾಗಿದ್ದರೆ ನಿನ್ನ ಪತ್ನಿಯೊ ? ಅವಳೆಲ್ಲಿರುವಳು ? ವಯಸ್ಸೆಷ್ಟು ? ವ್ಯಾಸಂಗಿಸುತ್ತಿರುವಳೋ ? ಪ್ರಭಾಕರ ಕಿರುನಗೆಯಿಂದ- ಅಷ್ಟು ದೂರದ ಪ್ರಶ್ನೆಗಳೇಕೆ ?? ಅಕ್ಷಯ ಹೇಳಿದರೆ ನಿನಗಾಗುವ ನಷ್ಟವೇನು ? ನನಗದರಿಂದ ಕೆಲಸವಾಗತಕ್ಕುದಿದೆ. ಪ್ರಭಾಕರ -ನನಗೆ ನಷ್ಟವಿಲ್ಲ. ನೀನು ಹಾಸ್ಯಕ್ಕಾಗಿ ಕೇಳಿದೆ ಯೆಂದು ತಿಳಿದಿದ್ದೆ ; ಕ್ಷಮಿಸು ! ನನ್ನ ಪತ್ನಿಗೆ ಈಗ ವಯಸ್ಸು ಹದಿಮೂರು ವ್ಯಾಸಂಗವೆಂದರೆ ಪ್ರಾಥ ಮಿಕ ಶಿಕ್ಷಣದಲ್ಲಿ ತಕ್ಕ ಮಟ್ಟಿಗೂ ಜ್ಞಾನವನ್ನು ಹೊಂ ದಿರುವಳೆಂದು ಬಲ್ಲೆ. ಈಗ ಸದ್ಯಕ್ಕೆ ತಂದೆ ತಾಯಿ ಯರ ಬಳಿಯಲ್ಲಿಯೇ ಇರುತ್ತಾಳೆ. ಅಕ್ಷಯ ಹಾಗಾದರೆ, ಅವಳಿಗೆ ಇನ್ನೂ ವ್ಯಾಸಂಗವು ನಡೆ ಯುತ್ತಿದೆಯೋ ? ಹೇಗೆ ? ಯಾರಿಂದ ? ಪ್ರಭಾ ಅವಳ ತಾಯಿತಂದೆಗಳೇನೋ ಇನ್ನೂ ಪ್ರೌಢಶಿಕ್ಷಣ ಕ್ಯಾಗಿ ಕಲಾಶಾಲೆಗೆ ಕಳುಹಬೇಕೆಂದಿದ್ದರು; ಆದರೆ, ನಾನು ಅಷ್ಟಕ್ಕೆ ಅವಕಾಶಕೊಡದೆ, ನಮ್ಮ ತಾಯಿ ತಂದೆ ಗಳನ್ನು ಮುಂದುಮಾಡಿ, ಅವಳಿಗೆ ನಮ್ಮ ಆಚಾರ ವಿಚಾರಗಳಲ್ಲಿಯೂ, ನಮ್ಮ ಧರ್ಮ-ನೀತಿ-ತತ್ತ್ವಗಳ