ಪುಟ:ಪೈಗಂಬರ ಮಹಮ್ಮದನು.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1. ಮಹಮ್ಮದನ ಬಾಲ್ಯ ಇಲ್ಲ. ಜನರು ತಮ್ಮ ಕರ್ತವ್ಯವನ್ನೇ ಮರೆತು ಪಂಗಡಗಳನ್ನು ಕಟ್ಟಿ ಕೊಂಡು ದೊಂಬಿ ಮಾಡಲುಪಕ್ರಮಿಸಿದರು. ಪ್ರಬಲವಾಗಿದ್ದ ಕೆಲವು. ಮನೆತನಗಳವರಲ್ಲಿ ಪರಸ್ಪರ ದ್ವೇಷ ಭಾವವು ಹೊತ್ತಿ ಉರಿಯುತ್ತಿದ್ದಿತು ; ಅವರು ತಮ್ಮ ತಮ್ಮ ಅನುಯಾಯಿಗಳೊಡಗೂಡಿ ಸರಸ್ಸರವಾಗಿ ಹೊಡದಾಡುತ್ತಿದ್ದರು. ಅರಬ್ಬ ದೇಶಸ್ಥರೆಲ್ಲರೂ ಪಿಗ್ರಹಾರಾಧಕರಾಗಿದ್ದರು. ಆದರೆ, ಭಾರತೀಯರಲ್ಲಿ ಆಚರಣೆಯಲ್ಲಿರುವಂತೆ, ವಿಗ್ರಹವು ಜಗತ್ಕರ್ತಾರನಾದ ಭಗವಂತನನ್ನು ನೆನಪಿಗೆ ತರುವ ಲಾಂಛನವೆಂಬ ಭಾವನೆಯಿಂದ ಅವರು ಸಿಗಹಗಳನ್ನು ಪೂಜಿಸುತ್ತಿರಲಿಲ್ಲ; ಕಲ್ಲು ಮಣ್ಣಿನ ಬೊಂಬೆಗಳೇ ದೇವರೆಂಬ ಭಾವನೆಯಿಂದ ಅವರು ವಿಗ್ರಹಾರಾಧನೆ ಮಾಡುತ್ತಿದ್ದರು. ಅಂತು, ಈಗ್ಗೆ ಸುಮಾರು ಹದಿನಾಲ್ಕು ಶತಮಾನಗಳಿಗೆ ಹಿಂದೆ ಅರಬ್ಬಿ ದೇಶವು ಅವನತಿಯ ಚರಮ ಸೀಮೆಯನ್ನು ಮುಟ್ಟಿತು. ಈ ತೆರದ ಅಧೋ ಗತಿಯಿಂದ ಅದನ್ನು ಉಪ್ಪರಿಸಿದ ಪುಣ್ಯಾತ್ಮನೇ ಮಹಮ್ಮದನು. ಇಸ್ಕಾಂ ಮತವನ್ನು ಚಿರಸ್ಥಾಯಿಯಾಗಿ ಸ್ಥಾಪಿಸಿ, ನೀತಿ ಬಾಹಿರ ರಾಗಿದ್ದವರಿಗೆ ಧರ್ಮಬೋಧೆ ಮಾಟ ಉದ್ಧಾರ ಮಾಡಿದ ಮಹಾತ್ಮನೇ ಮಹಮ್ಮದನು. ಜಗತ್ತಿನಲ್ಲಿ ಶ್ರೇಷ್ಠವೆನಿಸಿರುವ ಮತಗಳಲ್ಲೊಂದಾದ. ಮತವನ್ನು ಸ್ಥಾಪಿಸಿ ಜ್ಞಾನಜ್ಯೋತಿಯನ್ನು ಎತ್ತಿ ಹಿಡಿದ ಮಹಾ ಪುರುಷನೇ ಮಹಮ್ಮದನು. ಭಗವದಂಶ ಸಂಭೂತರಾದ ಮಹಾ ಪುರುಷರು ಅವತರಿಸುವುದು. ಧರ್ಮಾತ್ಮರ ಮನೆಯಲ್ಲಿಯೇ, ಮಕ್ಕಾ ನಗರದಲ್ಲಿ ಅಬ್ದುಲ್ಲಾ ಎಂಬ ಪುಣ್ಯಾತ್ಮನೊಬ್ಬನಿದ್ದನು. ಪತಿ ಪರಾಯಣೆಯಾದ ಮಹಮ್ಮದನ ಆಮೀನಾ ಎಂಬಾಕೆಯು ಆತನ ಧರ್ಮ ಪತ್ನಿ, ಭಾಗ್ಯಶಾಲಿಗಳಾದ ಈ ದಂಪತಿಗಳೇ ಮಹಮ್ಮದನ ತಂದೆ ತಾಯಿಗಳು, ಮುಹಮ್ಮದನು ಅವತರಿಸಿದ ಮನೆತನದಲ್ಲಿ ಪರೋಪ. ಕಾರವು. ವಂಶಾನುಗತವಾಗಿ ಬಂದಿದ್ದ ಅಮೋಘ ಗುಣ, ಮಹಮ್ಮದನ. ಪಿತಾಮಹನ ಔದಾರ್ಯದ ಫಲವಾಗಿ, ಆ ಮನೆತನಕ್ಕೆ ಬಡತನವ ಬಂದೊದಗಿತು.. ಆದರೇನು ? ಇಂತಹ ಬಡತನವೂ ಶ್ಲಾನ್ಯವಾದುದೇ ಜನನ