ಪುಟ:ಪೈಗಂಬರ ಮಹಮ್ಮದನು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮ ದನ ರೂಪವೂ ಗುಣಗಳೂ ೧೧೭. ಮಾಡಿ ಧರ್ಮ ಮಾಡಬೇಕೆ? ಸಾಲ ಮಾಡಿ ದಾನ ಮಾಡಬೇಕೆಂದು ಭಗವಂತನು ವಿಧಿಸಿದ್ದಾನೆಯೆ ? ಹೀಗೆ ಮಾಡುತ್ತ ಬಂದರೆ ಎಷ್ಟು ಕಾಲ ಹಣವು ತಾನೆ ಒದಗುತ್ತದೆ ?” ಎನ್ನಲು, ಮಹಮ್ಮದನು ಇದಕ್ಕೆ ಉತ್ತರ ಕೊಡದೆ. ಮೌನದಿಂದಿದ್ದನು. ಆಗ ಯಾಚಕನು, “ ಕೊಡುವ ಕರ್ತನು ಕೊಟ್ಟೆ ಕೊಡುತ್ತಾನೆ ; ವೆಚ್ಚ ಮಾಡಿದಂತೆಲ್ಲ ಭಗವಂತನು ಹಣವನ್ನು ಒದಗಿ. ಸಿಯೇ ಒದಗಿಸುವನು ; ಅವನನ್ನು ನಂಬಿದವರಿಗೆ ಎಂದಿಗೂ ಭಯವಿಲ್ಲ ಎಂದು ಉತ್ತರ ಹೇಳಿದುದನ್ನು ಕೇಳಿ ಮಹಮ್ಮದನು ಸ್ವಲ್ಪ ನಕ್ಕು. ಸುಮ್ಮನಾದನು, ಒಮ್ಮೆ, ಬಕ್ರೀನ್ ಪ್ರಾಂತದಿಂದ ಕಪ್ಪ ಕಾಣಿಕೆಗಳ ರೂಪದಲ್ಲಿ ಬಹಳ ಹೆಚ್ಚಾದ ದ್ರವ್ಯವು ಬಂದಿತು. ಮಹಮ್ಮದನು ಅದರ ಲೆಕ್ಕವನ್ನು ಕೂಡ ಕೇಳದೆ ಅದನ್ನು ಮಸೀದಿಯ ಅಂಗಳದಲ್ಲಿ ಸುರಿಸಿ, ನಮಾಜು ಮುಗಿದ ಮೇಲೆ ಬಡವರಿಗೆ ಹಂಚಿದನು, ಬದರ್ ಕದನದಲ್ಲಿ ಅಬ್ಬಾಸ್ ಎಂಬಾತನು ತನ್ನ ಸರ್ವಸ್ವವನ್ನೂ ಕಳೆದುಕೊಂಡು ದರಿದ ನಾದಾಗ ಮಹಮ್ಮದನು ಅವನಿಗೆ ಯಥೇಷ್ಟವಾಗಿ ದ್ರವ್ಯ ಸಹಾಯ. ಮಾಡಿದನು. ಒಮ್ಮೆ ಯಾಚಕರ ಸಂಖ್ಯೆಯು ಅಪರಿಮಿತವಾಗಿಯೂ, ತನ್ನಲ್ಲಿ ಹಣವು ಸ್ವಲ್ಪವಾಗಿಯೂ ಇದ್ದುದನ್ನು ನೋಡಿ, ವ್ಯಥೆಯಿಂದ. ತನ್ನ ಆಪ್ತನೊಬ್ಬನೊಡನೆ ಮಹಮ್ಮದನು, “ಊಹುದ್ ಪರ್ವತವೇ ಚಿನ್ನವಾಗಿ ನನ್ನೆದುರಿಗೆ ರಾಕಿಬಿದ್ದರೆ ನಾನು ನಿರಾತಂಕವಾಗಿ ಅದನ್ನು ಬಡವರೆಲ್ಲರಿಗೂ ಆನಂದದಿಂದ ಹಂಚಿಬಿದ್ದೇನು ; ಅಷ್ಟು ಚಿನ್ನ ವೂ ನನ್ನಲ್ಲಿ ಮೂರು ದಿನಗಳಿಗಿಂತ ಹೆಚ್ಚಾಗಿ ಉಳಿಯಲಾರದು” ಎಂದನಂತೆ. ಮಹಮ್ಮದನ ಪ್ರಾಮಾಣಿಕತೆಯ ನಿಷ್ಪಕ್ಷಪಾತ ಬುದ್ದಿಯ. ಜನ ಜನಿತವಾಗಿ ಪ್ರಸಿದ್ದವಾಗಿದ್ದುವು. ಮೆದೀನಾ ನಗರದಲ್ಲಿ, ಅನ್ಯ ಮತೀಯರಾದ ಯೆಹೂದ್ಯರೂ ಇತರರೂ ಕೂಡ ನ್ಯಾಯ ಪರತೆ ತಮ್ಮ ವಿವಾದಗಳನ್ನೆಲ್ಲ ನ್ಯಾಯ ವಿಚಾರಣೆ ಮಾಡಿ. ತೀರ್ಪುಹೇಳಲು ಮಹಮ್ಮದನಿಗೇ ಒಪ್ಪಿಸುತ್ತಿದ್ದರು. ಯೆಹೂದ್ಯರಿಗೂ ಮಹಮ್ಮದೀಯರಿಗೂ ಬದ್ಧ ದ್ವೇಷವಿದ್ದ ಕಾಲ. ದಲ್ಲಿಯೂ ಸಹ, ಒಬ್ಬ ಯೆಹೂದ್ಯನಿಗೂ ಒಬ್ಬ ಮಹಮ್ಮದೀಯನಿಗೂ, ಇದ್ದ ಒಂದು ವಿವಾದವು ಮಹಮ್ಮದನಲ್ಲಿ ವಿಚಾರಣೆಗೆ ಬಂದಿತು. ಆಗ