ಪುಟ:ಪೈಗಂಬರ ಮಹಮ್ಮದನು.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ಪೈಗಂಬರ ಮಹಮ್ಮದನು ಹದಿನೈದನೆಯ ಅಧ್ಯಾಯ ಇಸ್ಲಾಂ ಮತದ ಮೂಲ ತತ್ತ್ವಗಳು ಮಹಮ್ಮದನು ಮತ ಬೋಧೆ ಮಾಡಲಾರಂಭಿಸುವುದಕ್ಕೆ ಮೊದಲು ಅರಬ್ಬಿಯವರ ಸಮಾಜವು ದುರಾಚಾರಗಳ ನೆಲೆಯೆನಿಸಿ ಎಲ್ಲಿ ನೋಡಿದರೂ, ನಾಸ್ತಿಕತೆಯ ಮ ದ ಪಾ ನ ವೂ ನೀತಿ ಬಾಹಿ ಪತಿತರನ್ನು ರತೆಯ ತುಂಬಿದ್ದು ಸರ್ವ ಶಕ್ತನಾದ ಜಗದೀಶ್ವರನು. ಉದ್ಧರಿಸಿದ ಮತ ಒಬ್ಬನಿರುವನೆಂಬ ಭಾವನೆಯೇ ಅವರಿಗಿರಲಿಲ್ಲವೆಂದು ಈ ಹಿಂದೆಯೇ ಸೂಚಿಸಿದೆ. ಇಂತಹ ಅಸಭ್ಯ ಜನರ ಉದ್ಧಾರಕ್ಕಾಗಿಯೇ ಭಗವಂತನ ದಯೆಯಿಂದ ಮಹಮ್ಮದನು ಅವತರಿಸಿ,. ಪತಿತರಾಗಿದ್ದವರನ್ನು ಪುನೀತರನ್ನಾಗಿ ಪರಿವರ್ತನೆಗೊಳಿಸಲು ಇಸ್ಲಾಂ ಮತವನ್ನು ಸ್ಥಾಪಿಸಿ, ಅದರ ಮೂಲ ತತ್ತ್ವಗಳನ್ನು ದೇಶ ವಿದೇಶ ಗಳಿಗೂ ಸಾರಿ, ಆ ಮತವನ್ನು ಪ್ರಚುರಗೊಳಿಸಿದನು. ಸಮಾಜವನ್ನು ಸುಧಾರಣೆಗೊಳಿಸಿ ಉದ್ಧರಿಸುವುದಕ್ಕೂ, ನಾಸ್ತಿಕರನ್ನು ಆಸ್ತಿಕ ರನ್ನಾಗಿ ಮಾರ್ಪಡಿಸಿ ಪವಿತಗೊಳಿಸುವುದಕ್ಕೂ, ಪತಿತರನ್ನು ಪಾವನ: ಮಾಡಿ ರಕ್ಷಿಸುವುದಕ್ಕೂ ಇಸ್ಲಾಂ ಮತವು ದೊಡ್ಡ ಸಾಧಕವಾಯಿತು.. ಮಹಮ್ಮದೀಯರ ಪವಿತ್ರ ಗ್ರಂಥವಾದ ಖುರಾನಿನಲ್ಲಿ ಹೇಳಿರುವ ಇಸ್ಲಾಂ ಮತದ ಎಲ್ಲ ಸಿದ್ಧಾಂತಗಳನ್ನೂ ಮಹಮ್ಮದನ ತರುವಾಯ. ಬಂದ ನಾನಾ ಭಾಷ್ಯಕಾರರ ವ್ಯಾಖ್ಯಾನಗಳ ಮೇರೆಗೆ ವಿಷಯ ನಿರೂಪಣೆಯ ಸಮನ್ವಯ ಮಾಡುವುದೂ, ಸುನ್ನಿ, ಪಿಯಾ: ಸಿಂಹಾವಲೋಕನ ಮುಂತಾದ ಸಂಗಡ ವಿಭೇದಗಳ ಸ್ವರೂಪವನ್ನು ಚರ್ಚಿಸುವುದೂ ಈ ಗ್ರಂಥದ ಉದ್ದೇಶವಲ್ಲ; ಅದಕ್ಕೆ ಇಲ್ಲಿ ಅವಕಾಶವೂ ಇಲ್ಲ. ಕೇವಲ ಸ್ಕೂಲವಾಗಿ ಪರಿಶೀಲಿಸಿ, ಇಸ್ಲಾಂ ಮತಕ್ಕೆ ಮೂಲಾಧಾರವಾಗಿರುವಂತೆ ತೋರುವ ಕೆಲವು ಅಂಶಗಳನ್ನು ಮಾತ್ರ ಅತಿ ಸಂಕ್ಷೇಪವಾಗಿ ಇಲ್ಲಿ ಪ್ರಸ್ತಾವಿಸಲಾಗುವುದು, - ಇಸ್ಲಾಂ ಮತವು ಅನುಷ್ಟಾನ ಯೋಗ್ಯವಾಗಿಯೂ ಉದಾರ ಭಾವ. ಪರಿಪೂರ್ಣವಾಗಿಯೂ ಇರುವ ಮತ. ಮಾನವನಲ್ಲಡಗಿರುವ ಆಸುರೀ