ಪುಟ:ಪೈಗಂಬರ ಮಹಮ್ಮದನು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ತ್ವಗಳು ೧೩೭ ಪ್ರಕೃತಿಯನ್ನು ದಮನ ಮಾಡಿ, ದೈವಿಕ ಪ್ರಕೃತಿ “ಇಸ್ಲಾ೦ ಮ ತ ದ ಯನ್ನು ಪರಿಸ್ಪುಟಗೊಳಿಸುವುದೇ ಸಮಸ್ಯೆ ಮತ ಮುಖ್ಯ ಲಕ್ಷಣ ಗಳಲ್ಲಿಯೂ ಹೇಳಿರುವ ಸಿದ್ದಾಂತ ಸಾರ. ಆದರೆ, ಯಾವುದಾದರೂ ಒಂದು ಗೊತ್ತಾದ ಸ್ಥಳಕ್ಕೆ ಹೋಗಲು ನಾನಾ ವಿಧವಾಗಿರುವ ಬೇರೆ ಬೇರೆ ದಾರಿಗಳು ಹೇಗಿರು ವುವೋ ಅದೇ ರೀತಿಯಲ್ಲಿ ನಾನಾ ಮತಗಳೂ ಈ ಉದ್ದೇಶ ಸಾಧನೆಗೆ ಬಗೆ ಬಗೆಯ ಅನುಷ್ಠಾನ ಮಾರ್ಗಗಳನ್ನು ಬೋಧಿಸಿವೆ. ಈ ದೃಷ್ಟಿಯಿಂದ ನೋಡಿದರೆ ಇಸ್ಲಾಂ ಮತವೂ ಉತ್ತಮ ಮತಗಳಲ್ಲೊಂದಾಗಿದೆಯೆಂದು ಧಾರಾಳವಾಗಿ ಹೇಳಬಹುದು. ಯಾವ ವೃತ್ತಿಯನ್ನನುಸರಿಸಿ, ಯಾವ ಸನ್ನಿವೇಶದಲ್ಲಿದ್ದರೂ, ಖುರಾನಿನಲ್ಲಿ ಹೇಳಿರುವಂತೆ ನಡೆಯುವುದಾದರೆ, ಮನುಷ್ಯನು ಕೃತಾರ್ಥನಾಗುವನೆಂಬುದೇ ಇಸ್ಲಾಂಮತದ ಮುಖ್ಯ ಲಕ್ಷಣ. ಭಗವತೃರೂಪವನ್ನು ಕುರಿತು ಮಹಮ್ಮದನು ಹೀಗೆ ತಿಳಿಸಿರು ವನು:- ಭಗವಂತನೆಂದರೆ ಸರ್ವ ಶಕ್ತನಾದ ಜಗದೀಶ್ವರನೊಬ್ಬನೇ ಅವನೇ ಸತ್ಯಶಾಲಿಯಾದ ಶಾಶ್ವತನು; ನಿದ್ರೆಯ ಭಗವರೂಪ ಮರವೆಯ ಅವನ ಬಳಿಯಲ್ಲಿ ಸುಳಿಯವು, ಭೂಮಂ ಡಲದಲ್ಲಾಗಲಿ, ನಭೋಮಂಡಲದಲ್ಲಾಗಲಿ, ಸ್ವರ್ಗ ಲೋಕದಲ್ಲಾಗಲಿ ಇರತಕ್ಕ ಸಮಸ್ತ ವಸ್ತುಗಳಿಗೂ ಅವನೇ ಒಡೆಯನು. ಅವನು ಭೂತ ಭವಿಷ್ಯತ್ತುಗಳೆರಡನ್ನೂ ಬಲ್ಲನು. ಅವನ ಅನುಗ್ರಹಕ್ಕೆ ಪಾತ್ರರಾಗದವರಿಗೆ ದಿವ್ಯ ಜ್ಞಾನದ ಲವಲೇಶವೂ ಲಭಿಸದು. ಅವನ ಅಪ್ರತಿಹತವಾದ ಅಧಿಕಾರವು ಭೂಮ್ಯಂತರಿಕ್ಷಗಳನ್ನೂ ಇತರ ಎಲ್ಲಾ ಪ್ರದೇಶಗಳನ್ನೂ ವ್ಯಾಪಿಸಿರುವುದು. ಸೂರ್ಯ ಚಂದ್ರರನ್ನೂ ನಕ್ಷತು ಮಂಡಲವನ್ನೂ ಸೃಷ್ಟಿಸಿದವನೂ ಅವನೇ; ಗ್ರಹಗಳ ಗತಿಯನ್ನು ನಿರ್ಧರಿಸಿದವನೂ ಅವನೇ ; ಎಲ್ಲಾ ಪ್ರಪಂಚಗಳಿಗೂ ಅಧಿನಾಯಕನ ಅವನೇ; ಶಾಶ್ವತನೂ, ಜನನ ಮರಣ ರಹಿತನೂ, ಸರ್ವಜ್ಞನೂ, ಅಗ್ನಿ, ತೀಯನಾದ ಭಗವಂತನೂ ಅವನೇ. ನಮ್ಮ ಕಣ್ಣುಗಳು ಅವನನ್ನು ಕಾಣಲಾರವು; ಆದರೆ ಅವನಿಗೆ ಮಾತ್ರ ಎಲ್ಲವೂ ಗೋಚರವಾಗುವುದು ;