ಪುಟ:ಪೈಗಂಬರ ಮಹಮ್ಮದನು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ತನ್ನ ಮಗ ಅಬೂತಾಲಿಬ್ ಎಂಬಾತನಿಗೆ ಮೊಮ್ಮಗನನ್ನು ಒಪ್ಪಿಸಿ, ತಾನು ಕಣ್ಣುಮುಚ್ಚಿಕೊಂಡನು. ಅಂದಿನಿಂದ ಮಹಮ್ಮದನು ತನ್ನ ಚಿಕ್ಕಪ್ಪನ ಪೋಷ್ಯ ವರ್ಗಕ್ಕೆ ಸೇರಿದನು. ಆದರೇನು ? ತನ್ನ ನ್ನು ಅಕ್ಕರೆ ಯಿಂದ ಸಲಹುತ್ತ ತಾಯಿ ತಂದೆಗಳಿಬ್ಬರ ಸ್ಥಾನವನ್ನೂ ವಹಿಸಿದ ತಾತನು ಮೃತನಾದುದರಿಂದ ಮಹಮ್ಮದನು . ಶೋಕ ಸಂತಪ್ತನಾಗಿ ಕಳೆಗುಂದಿದನು ; ಚಿಕ್ಕಪ್ಪನ ಮನೆಯಲ್ಲಿ ಓಡಾಡುತ್ತಿದ್ದರೂ ಅವನ ಮನಸ್ಸು ಮಾತ್ರ ಯಾವುದೋ ಒಂದು ಸ್ವಪ್ನ ಪ್ರಪಂಚದಲ್ಲಿ ತೇಲಾಡು ತಿದ್ದಿತು. ಮುಂದಿನ ಮಹತ್ವವನ್ನು ಸೂಚಿಸಲು ಅವನ ಮನಸ್ಸು, ಲಂಗರು ಹರಿದ ಹಡಗಿನಂತೆ, ಬಂಧ ವಿಮೋಚನೆಯನ್ನು ಪಡೆಯಿತು. ಮಹಮ್ಮದನು ಮನೆಯಲ್ಲಿ ಹಿಂಡು ಬಳಗದೊಡಗೂಡಿದ್ರೂ ಏಕಾಕಿ ರೂಾಗಿದ್ದನು ; ಹಾಲು ಹಸುಳೆಯಾಗಿದ್ದ ತನ್ನ ಕೈಗೆ ಸಿಕ್ಕದ ಯಾವುದೋ ಪ್ರ) ಸಂಚರ ಫಲಗಳಿಗೆ ಕೈನೀಡುತ್ತಿದ್ದನು. ಅವನ ದುರ್ದಶಿಯನ್ನು ಕಂಡು ಮನ ಮರುಗದವರಾರು? ಆಲೋಚನಾ ಮಗ್ನ ನಾ ಕಾಲವನ್ನು ಕಳೆಯುತ್ತಿದ್ದ ಅವನ ಪುಟ್ಟ ತಲೆಯನ್ನು ಸ್ಪರ್ಶಿಸಿ ಆನಂದಪಡದವರಾರು ? ಭೀರುವಲ್ಲದಿದ್ದರೂ ಮೃದು ಸ್ವಭಾವದವ ನಾಗಿದ್ದ ಅವನ ಮುಖವನ್ನು ಕಂಡು ಹಿಗ್ಗದವರಾರು? ಅವನ ಬಂಧು ವರ್ಗದವರೆಲ್ಲರೂ ಅವನನ್ನು ಆದರಿಸುತ್ತಿದ್ದರು. ಅಬೂತಾಲಿಬ್ಬನಿಗಂತು ಮಹಮ್ಮದನೇ ಪ್ರೇಮ ಪುತ್ಥಳಿ, ಅವನ ಪಂಚ ಪ್ರಾಣ ; ಹೆಚ್ಚೇಕೆ ? ಹುಡುಗನ ಮನಸ್ಸಿಗೆ ತಾತನು ಸತ್ತ ದುಃಖವು ಅಂಟದಂತೆ ಮಾಡುವ ಭಾಗದಲ್ಲಿ ಅವನ ಚಿಕ್ಕಪ್ಪನು ಲೇಶ ಮಾತ್ರವೂ ಲೋಪ ಮಾಡಲಿಲ್ಲ. ಆದರೂ ಹಿರಿಯರ ಕಾಲದಲ್ಲಿ ಸಿರಿವಂತರಾಗಿದ್ದ ಆ ಮನೆತನದವರಿಗೆ ಬಡತನದ ಬಾಧೆ ; ಆದಕಾರಣ ಮಹಮ್ಮದನು ನಿರಾತಂಕವಾಗಿ ಬಾ ಯೋಗ್ಯವಾದ ಆಟ ಪಾಟಗಳಲ್ಲಿ ಮಗ್ನನಾಗಿ ಕಾಲವನ್ನು ಕಳೆಯುವ ಹಾಗಿರಲಿಲ್ಲ; ಆ ಎಳೆಯ ವಯಸ್ಸಿನಲ್ಲಿಯೂ ಅವನು ಕೆಲಸ ಮಾಡಿದಲ್ಲದೆ ಕಡೆ ಹಾಯುವಂತಿರಲಿಲ್ಲ: ಚಿಗುರಿನಂತಿದ್ದ ತನ್ನ ಕೈಯಲ್ಲಿ ಚಾವಟಿ ಯನ್ನು ಹಿಡಿದು ತನ್ನ ಚಿಕ್ಕಪ್ಪನ ಕುರಿಯ ಮಂದೆಯನ್ನು ಕಾಯ ಬೇಕಾಗಿದ್ದಿತು. ಆದರೇನು ? ಭಗವಂತನೇ ಅವನ ಹೃದಯಕ್ಕೆ ಅಮೃತ.