ಪುಟ:ಪೈಗಂಬರ ಮಹಮ್ಮದನು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಪೈಗಂಬರ ಮಹಮ್ಮದನು ಸ್ಥಿತಿಯನ್ನು ಕಂಡು, ಖದೀಜಳು ಅಪ್ರತಿಭಳಾಗಿ ಅವನಿಗೆ ಶೈತ್ರೋಪ ಚಾರ ಮಾಡಲು, ಮಹಮ್ಮದನು ಮರ್ಧೆಯಿಂದೆಚ್ಚತ್ತು, ಖದೀಜಾ, ಖದೀಜಾ! ನಾನು ಕಣಿ ಹೇಳುವವನು ; ನನಗೆ ಹುಚ್ಚು ಹಿಡಿದು ಹೋಗಿದೆ” ಎಂದು ಹೇಳಿದನು. ಖದೀಜಳು, “ ನನ್ನ ಭಾಗಕ್ಕೆ ದೇವ ರಿದ್ದಾನೆ ; ಇಂತಹದೊಂದೂ ನಿಮಗೆ ಸಂಭವಿಸುವುದಿಲ್ಲವೆಂದು ನನಗೆ ನಂಬಿಕೆ. ಏಕೆಂದರೆ, ನೀವು ಸತ್ಯವಾದಿ, ಶ್ರದ್ಧಾಳು, ಅಪಕಾರಕ್ಕೆ ಪ್ರತೀ ಕಾರ ಮಾಡದ ಸದಯ ಹೃದಯರು ; ಇದರ ಮೇಲೆ ಬಂಧು ಮಿತ್ರರಲ್ಲಿ ಕೇವಲ ಪ್ರೀತಿಯುಳ್ಳವರು. ಪ್ರಿಯನೇ ! ಅದ್ಭುತವಾದುದೇನನ್ನಾದರೂ ನೋಡಿದಿರಾ? ಇದೇಕೆ ಹೀಗೆ ಭ್ರಾಂತರಾಗಿರುವಿರಿ? ಎಂದು ಆದರದಿಂದ ಕೇಳಿದಳು. ಅದಕ್ಕೆ ಮಹಮ್ಮದನು ತನ್ನ ಅನುಭವವನ್ನೆಲ್ಲ ಆಕೆಗೆ ವಿಸ್ತರಿಸಿ ತಿಳಿಸಲು, ಆಕೆಯು ಆನಂದ ಭರಿತಳಾಗಿ, “ಇದು ಸಂತೋಷದ ಸುದ್ದಿ, ನೀವು ಇದಕ್ಕಾಗಿ ಹಿಗ್ಗಬೇಕಲ್ಲವೆ ! ಪ್ರಾಣ ನಾಥ ! ಸಮಾಧಾನ ಹೊಂದಿರಿ. ನೀವು ನಮ್ಮ ದೇಶ ಬಾಂಧವರೆಲ್ಲರಿಗೂ ಉದ್ಧಾರಕರಾಗು ವಿರಿ?' ಎಂದು ಉತ್ತರ ಹೇಳಿದಳು, ತರುವಾಯ, ಆಕೆಯು ತನ್ನ ಸವಿಾಪ ಬಂಧುವಾದ ವರಕನೆಂಬಾತನ ಬಳಿಗೆ ಹೋಗಿ ಈ ಸಂತೋಷ ವಾರ್ತೆಯನ್ನು ತಿಳಿಸಲು, ವೃದ್ದನೂ ಅಂಧನೂ ಆಗಿದ್ದ ಆ ವರಕನು, ಯೆಹೂದ್ಯರ ಮತ್ತು ಕ್ರೈಸ್ತರ ಮತ ಗ್ರಂಥಗಳನ್ನು ಬಲ್ಲವನಾದುದ ರಿಂದ, ಖದೀಜಳು ಹೇಳಿದ ವಾರ್ತೆಯನ್ನು ಕೇಳಿ, ಶುಭ ವಾರ್ತೆ! ಶುಭ ವಾರ್ತೆ ! ಮೋಜಸನಿಗೂ ಯೇಸು ಕ್ರಿಸ್ತನಿಗೂ ಪ್ರತ್ಯಕ್ಷವಾಗಿದ್ದ ದೇವ ದೂತನೇ ಮಹಮ್ಮದನಿಗೂ ಒಲಿದಿದ್ದಾನೆ. ಮಹಮ್ಮದನು ಭಗವಂತನ ಪರವಾಗಿ ಮತ ಬೋಧಕನಾಗುತ್ತಾನೆ, ಇದು ನಿಜ ಎಂದು ಉತ್ತರ ಹೇಳಿದನು. ಈ ಸುದ್ದಿಯೇನೋ ದೇಶದಲ್ಲೆಲ್ಲ ಹರಡಿತು; ಆದರೂ ಖದೀ ಜಳೂ ವರಕನೂ ಹೊರತು ಉಳಿದವರಾರೂ ಒಡನೆಯೇ ಅದನ್ನು ನಂಬ ಲಿಲ್ಲ. ವರಕನೂ ಮಹಮ್ಮದನೂ ಸಂಧಿಸಿದಾಗ ವರಕನು, " ನಾನು ಭಗವಂತನ ಮೇಲೆ ಆಣೆಯಿಟ್ಟು ಹೇಳುತ್ತೇನೆ: ಅವನೇ ನಿನ್ನನ್ನು ತನ್ನ ಪರವಾದ ಮತ ಬೋಧಕನನ್ನಾಗಿ ಆರಿಸಿದ್ದಾನೆ. ನಿನಗೆ ಒಲಿದವನು ದೇವ ದೂತನೇ. ಈ ದೇಶದ ಜನರು ನಿನ್ನ ಹೇಳಿಕೆಯನ್ನು ನಂಬುವುದಿಲ್ಲ.