ಪುಟ:ಪೈಗಂಬರ ಮಹಮ್ಮದನು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III, ಭಗವತ್ಸಂದೇಶ ದವರು ಮಹಮ್ಮದನನ್ನು ಹಿಂಸಿಸುತ್ತಿದ್ದ ವಿಧಾನಗಳನ್ನು ಕೇಳಿ ಬೇಸತ್ತು, ಯಾತ್ರಿ" ದೊರೆಯು ಕೂಡ ಅವರ ವರ್ತನೆಯು ಅನುಚಿತ ವೆಂದೂ, ಪ್ರಾಮಾಣಿಕ ಸ್ವಭಾವದವನೆಂದು ಪ್ರಸಿದ್ಧನಾಗಿದ್ದ ಮಹ ಮ್ಮದನು ಬೋಧಿಸುತ್ತಿದ್ದ ತತ್ವಗಳನ್ನು ಅನ್ಯ ಮತ ಸಹಿಷ್ಣುತೆಯಿಂದ ಅವರೆಲ್ಲರ ಉಾಲಿಸಬೇಕಾದುದೇ ನ್ಯಾಯವೆಂದೂ ಅವರಿಗೆ ಬುದ್ದಿಯ ಮಾತುಗಳನ್ನು ಬರೆದು ಕಳುಹಿಸಿದನು. ಕೊರೈಷರ ಶಿಲಾ ಕಠಿ ನ ಹೃದಯದ ಮೇಲೆ ಇವು ಯಾವುದರಿಂದಲೂ ಸತ್ಪರಿಣಾಮವಾಗಲಿಲ್ಲ; ಮಹಮ್ಮದನನ್ನು ಅವರು ಹಿಂಸಿಸುವುದು ಲೇಶ ಮಾತ್ರವೂ ಕಡಿಮೆ ಯಾಗಲಿಲ್ಲ; ಆದರೇನು ? ಹಿಂಸೆ ಹೆಚ್ಚಿದಷ ಮಹಮ್ಮದನ ಹೃದ. ಯವ್ರ ಹುರಿಗಡಿ ಪಟುವಾಯಿತು. ತನ್ನ ಹಿಂಸಕರಲ್ಲಿ ಕೂಡ ಅವನು ದ್ವೇಷ ಭಾವವನ್ನವಲಂಬಿಸದೆ ಮೃದು ವಚನಗಳಿಂದಲೇ ಅವರಿಗೂ ಧರ್ಮ ಬೋಧೆ ಮಾಡಲು ಸಕ್ರಮಿಸಿದನು. ದೈವ ಸಂದೇಶದ ಬಲದಿಂದ ತಾನು ರಚಿಸಿದ ಖುರ್ರಾ ಎಂಬ ಗ್ರಂಥವನ್ನು ಅವರು ಓದಿ ಕೃತಾರ್ಥ ರಾಗಬೇಕೆಂದು ಮಹಮ್ಮದನು ಅವರಿಗೆ ಉಪದೇಶ ಮಾಡಿದನು. ಅಹಂಕಾರದಿಂದ ಮತ್ತರಾಗಿದ್ದ ಅವರಿಗೆ ಅದು ರುಚಿಸಲಿಲ್ಲವೆಂದು ಹೇಳಬೇಕೆ ? ಮಹಮ್ಮದನ ಅಧ್ಯವಸಾಯ ಬಲದಿಂದ ಅನೇಕರು ಅವನ ಶಿಷ್ಯ ರಾದುದನ್ನು ಕಂಡು ಅವನ ವಿರೋಧಿಗಳಿಗೆ ಮೊದಲೇ ಇದ್ದ ರೋಷವು. ಮತ್ತಷ್ಟು ಹೆಚ್ಚಿತು. ಸರ್ವ ಸಾಹಸ ಮಾಡಿ ಮಹ ಶಿಷ್ಯರಿಗೆ ಕಿರುಕುಳ ಮೃದನ ಪ್ರಯತ್ನಗಳು ಸಫಲವಾಗದಂತೆ ಮಾಡ. ಬೇಕೆಂದು ಅವರು ಚಲನನ್ನು ತೊಟ್ಟರು. ಕೊರೈಸ್ ಬುಡಕಟ್ಟಿನವರೇ ಮಕ್ಕಾ ನಗರದ ದೇವಸ್ಥಾನದ ಆಡಳಿತವನ್ನು ನೋಡು ತಿದ್ದವರು. ಅದರಿಂದ ಅವರಿಗೆ ಲಾಭವಿದ್ದುದಲ್ಲದೆ, ಅವರ ಪ್ರಾಬಲ್ಯವ. ಹೆಚ್ಚುವುದಕ್ಕೂ ಕಾರಣವಾಗಿದ್ದಿತು. ಮಹಮ್ಮದನು ಬೋಧಿಸುತ್ತಿದ್ದ ಮತವು ತಲೆಯೆತ್ತಿ, ಮುನ್ನೂರ ಅರವತ್ತು ವಿಗ್ರಹಗಳ ಪೂಜೆಯು ನಿಂತು ಹೋದರೆ, ಅವರ ಪ್ರಾಬಲ್ಯದ ಬುಡಕ್ಕೆ ಕೊಡಲಿ ಬೀಳುವಂತಿದ್ದಿತು. ಆದಕಾರಣ, ಕುಡಿಗಳನ್ನೂ ಕೊಂಬೆಗಳನ್ನೂ ಕತ್ತರಿಸಿ ಹಾಕಿದರೆ ಮರವೇ