ಪುಟ:ಪೈಗಂಬರ ಮಹಮ್ಮದನು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮುಹಮ್ಮದನು ವಿಮುಖರಾಗಿಯೂ, ಪರೋಪಕಾರಿಗಳಾಗಿಯೇ ಇದ್ದುಕೊಂಡು ಧಗ ನಂತನ ಧ್ಯಾನ ಮಾಡುವುದನ್ನು ನಾವು ಆತನಿಂದ ಕಲಿತು ಧನ್ಯರಾದೆವು. ನಮ್ಮ ದೇಶದವರು ಕೆಲವರಿಗೆ ನಮ್ಮ ನಡತೆಯು ಸರಿಬೀಳದೆ ನಾವು ಹಳೆಯ ಮತವನ್ನೇ ಮತ್ತೆ ಅವಲಂಬಿಸಿ ವರ್ತಿಸುವಂತೆ ಮಾಡಬೇಕೆಂಬ ಉದ್ದೇಶದಿಂದ ಅವರು ನಮ್ಮನ್ನು ಹಿಂಸಿಸತೊಡಗಿದರು. ಅಲ್ಲಿ ನಮಗೆ ಕ್ಷೇಮವಿಲ್ಲವೆಂದು ಬಗೆದು ತಮ್ಮ ರಾಜ್ಯಕ್ಕೆ ನಾವೆಲ್ಲರೂ ಬಂದಿದ್ದೇವೆ. ತಾವು ನಮ್ಮೆಲ್ಲರನ್ನೂ ಶತ್ರುಗಳ ಕಾಟದಿಂದ ಪಾರು ಮಾಡಿ ಸುರಕ್ಷಿತ ವಾಗಿ ಕಾಪಾಡಬೇಕೆಂದು ಬೇಡಿಕೊಳ್ಳುವೆವು ಎಂದು ಅರಿಕೆ ಮಾಡಿ ಕೊಂಡನು. ಮಹಮ್ಮದನ ಶತ್ತು, ಪಕ್ಷದವರೂ ಸುಮ್ಮನಿರಲಿಲ್ಲ ; ಅಬಿಸೀನಿಯ ದೊರೆಯ ಮರೆ ಹೊಕ್ಕಿದ್ದವರನ್ನು ತಮ್ಮ ವಶಕ್ಕೆ ಬಿಟ್ಟು ಕೊಡಬೇಕೆಂದು ಅವರೆಲ್ಲರೂ ಆ ದೊರೆಯನ್ನು ಕೇಳಿದರು. ಆದರೆ ಕೊಟ್ಟ ಭಾಷೆಗೆ ತಪ್ಪದವನಾದ ಆ ದೊರೆಯು ತನಗೆ ಶರಣಾಗತರಾಗಿ ಬಂದಿದ್ದವರಲ್ಲಿ ಒಂದು ಒಳ್ಳೆಯನ್ನೂ ಬಿಟ್ಟು ಕೊಡಲಿಲ್ಲ. ಆದುದರಿಂದ, ಕೊರೈಷ್ ಬುಡಕಟ್ಟಿನವರ ಪ್ರಾರ್ಥನೆಯು ಸಾರ್ಥಕವಾಗದೆ ಅವರೆಲ್ಲರೂ ಅವಮಾನದಿಂದ ತಲೆತಗ್ಗಿಸುವಂತಾಯಿತು. ಶತ್ತು ಪಕ್ಷದವರು ಮತ್ತೆ ಸಂಧಾನ ಕೌಶಲವನ್ನು ತೋರಿಸ ತೊಡಗಿದರು. ದುರಾಶೆಯ ಬಲೆಯನ್ನೊಡ್ಡಿ ಬೇಟೆಯನ್ನು ಹಿಡಿಯ ಲಿಚ್ಚಿಸಿ ಅವರಲ್ಲಿ ಕೆಲವರು ಮಹಮ್ಮದನ ಬಳಿಗೆ ಆಸೆಯ ಬಲೆ . ಬಂದು, ನೀನು ಈ ಪ್ರಯತ್ನವನ್ನು ಬಿಡು ; ಇದ ರಿಂದ ಧನಾರ್ಜನೆಯು ನಿನ್ನ ಉದ್ದೇಶವಾಗಿದ್ದರೆ, ನಮ್ಮಲ್ಲಿ ಯಾರೊಬ್ಬರ ಬಳಿಯಲ್ಲಿಯೂ ಇಲ್ಲದಷ್ಟು ಧನವನ್ನು ನಾವೆಲ್ಲರೂ ನಿನಗೆ ಶೇಖರಮಾಡಿ ಕೊಡುವೆವು; ಘನತೆ ಗೌರವಗಳನ್ನು ಸಂಪಾದಿಸಬೇಕೆಂಬ ಉದ್ದೇಶವಿದ್ದರೆ ನೀನೇ ನಮ್ಮೆಲ್ಲರಿಗೂ ಅಧಿನಾಯಕ ನೆಂದು ನಾವೆಲ್ಲರೂ ಒಪ್ಪಿಕೊಂಡು ನಿನ್ನನ್ನು ಗೌರವಿಸುವೆವು; ನೀನು ಈ ಪ್ರಯತ್ನವನ್ನು ಬಿಟ್ಟುಬಿಡು. ಅಥವಾ, ರಾಜ್ಯವನ್ನು ಕಟ್ಟಬೇಕೆಂಬ ಆಸೆಯು ನಿನಗಿದ್ದರೆ ನಿನ್ನನ್ನು ನಮ್ಮ ದೊರೆಯಾಗಿ ಸ್ವೀಕರಿಸಿ ಓಲೈಸು ವೆವು; ಅಲ್ಲದೆ, ಯಾವುದಾದರೂ ಪಿಶಾಚಿಯು ನಿನ್ನಲ್ಲಿ ಆವೇಶವಾಗಿದ್ದು