ಪುಟ:ಪೈಗಂಬರ ಮಹಮ್ಮದನು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಎರವಲಾಗಿ ಪಡೆದು ತನ್ನ ಕೆಲಸ ತೀರಿದಮೇಲೆ ಅದಕ್ಕಿಂತ ಉತ್ತಮವಾದ ಒಂಟೆಯನ್ನು ಹಿಂದಕ್ಕೆ ಕೊಟ್ಟು, ( ಉಚಿತವಾದ ರೀತಿಯಲ್ಲಿ ಸಾಲ ವನ್ನು ತೀರಿಸಬೇಕಾದುದು ನಮ್ಮ ಅವಶ್ಯ ಧರ್ಮ ಎಂದು ತಿಳಿಸಿದನು. ಕುತ ಬುದ್ದಿಯುಳ್ಳ ಧನಿಕನೊಬ್ಬನಿಂದ ಮಹಮ್ಮದನು ಒಮ್ಮೆ ಸಾಲವನ್ನು ತಂದಿದ್ದನು. ಸಾಲಗಾರನು ಹಣವನ್ನು ಹಿಂದಕ್ಕೆ ಕೇಳಲು ಬಂದಾಗ ಮಹಮ್ಮದನಲ್ಲಿ ಹಣವಿಲ್ಲದೆ ತೊಂದರೆ ಪಡುತ್ತಿರುವಲ್ಲಿ, ಧನಿ ಕನು ಅವನನ್ನು ಗದರಿಸತೊಡಗಿದನು. ಪರಕೀಯನೊಬ್ಬನು ತಮ್ಮ ಗುರುವನ್ನು ಹೀಗೆ ಗದರಿಸುವುದನ್ನು ನೋಡಿ ಮಹಮ್ಮದನ ಶಿಷ್ಯರು ಕುಪಿತರಾಗಿ, " ಯಾರಲ್ಲಿ ಈ ಮಾತನ್ನಾಡುತ್ತಿರುವೆಯೆಂಬ ಪರಿಜ್ಞಾ ನವು ನಿನಗುಂಟೆ ? ಎಂದು ಗರ್ಜಿಸಿದರು. ಧನಿಕನು, " ಅವನು ಯಾರಾದರೆ ನನಗೇನು ? ಕೊಟ್ಟ ಒಡವೆಯನ್ನು ಕೇಳಿದುದೇ ತಪ್ಪೋ ? ಎಂದು ಕೂಗಾಡಿದನು. ಮಹಮ್ಮದನು ತನ್ನ ವರನ್ನು ಸಮಾಧಾನ ಪಡಿಸಿ, ಧನಿಕನದು ಎಳ್ಳಷ್ಟೂ ತಪ್ಪಿಲ್ಲವೆ೦ದು ಶಾ೦ತ ತೆ ಯಿ೦ದ ತನ್ನ ವರಿಗೆ ಬುದ್ದಿ ಹೇಳಿದನು. ಒಮ್ಮೆ, ಮೆದೀನಾ ನಗರದ ಹೊರೆಗೆ ವ್ಯಾಪಾರಿಗಳು ಬೀಡು ಬಿಟ್ಟಿ ದೃರು. ಅವರಲ್ಲಿದ್ದ ಒಂದು ಸೊಗಸಾದ ಕೆಂಪು ಬಣ್ಣದ ಒಂಟೆಯನ್ನು ಕಂಡು ಅದನ್ನು ತಾನಿಟ್ಟುಕೊಳ್ಳಬೇಕೆಂಬ ಅಭಿಲಾಷೆಯಿಂದ, ಅದಕ್ಕೆ ಅವರು ಹೇಳಿದಷ್ಟು ಕ್ರಯವನ್ನು ಕೊಡುವುದಾಗಿ ಒಪ್ಪಿ, ಮಹ ಮೃದನು ಒಂಟೆಯನ್ನು ಹೊಡೆದುಕೊಂಡು ಹೋದನು. ಅವನು ಯಾರೆಂಬುದನ್ನು ಕೂಡ ವಿಚಾರಿಸದೆ ಒಂಟೆಯನ್ನು ಕೊಟ್ಟುಬಿಟ್ಟ ತರುವಾಯ, ಹಣವನ್ನು ಅವನು ಕಳುಹಿಸುವನೋ ಇಲ್ಲವೋ ಎಂದು ವ್ಯಾಪಾರಿಗಳಿಗೆ ಸಂಶಯ ಹುಟ್ಟಿತು. ತಮ್ಮ ಅವಿವೇಕತನವನ್ನು ಅವ ರೆಲ್ಲರೂ ಹಳಿದುಕೊಳ್ಳುತ್ತಿರುವಲ್ಲಿ, ಅವರೊಡನಿದ್ದ ಹೆಂಗಸೊಬ್ಬಳು, * ಹೀಗೇತಕ್ಕೆ ಚಿಂತಿಸುತ್ತೀರಿ? ಅಂತಹ ತೇಜಸ್ವಿಯನ್ನು ನಾನು ಇದು ವರೆಗೂ ಎಲ್ಲಿಯೂ ನೋಡಿಲ್ಲ ; ಅವನೆಂದಿಗೂ ಮೋಸಮಾಡಲಾರನು ಎಂದಳು. ಆ ದಿನ ರಾತ್ರಿಯೇ ಮಹಮ್ಮದನು ಒಂಟೆಯ ಬೆಲೆಯನ್ನು ಕಳುಹಿಸಿಕೊಟ್ಟನೆಂದು ಹೇಳಬೇಕೆ ?