ಪುಟ:ಪೈಗಂಬರ ಮಹಮ್ಮದನು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭. ಪೈಗಂಬರ ಮಹಮ್ಮದನು ಹೆಚ್ಚಲು, ಅನೇಕರು ಮೃತಪಟ್ಟರು. ಇದರ ಜೊತೆಗೆ, ಪ್ರಚಂಡವಾದ ಬಿರುಗಾಳಿಯೆದ್ದು ಮಳೆ ಸುರಿದು ಶತ್ರುಗಳ ಗುಡಾರಗಳು ನೆಲಕ್ಕುರು ಆದುವು. ಶತ್ರುಗಳು ದಿಕ್ಕುಗೆಟ್ಟು ಪಲಾಯನ ಮಾಡಿದರು. ಉತ್ಸಾಹ ದಿಂದ ದಂಡನ್ನು ತಂದಿದ್ದ ಅಬ ಸುಫ್ಯಾನನು ಪರಾಭವದಿಂದ ಕಳೆಗುಂದಿ ಹೊರಟುಹೋದನು. ಮದೀನಾ ನಗರದಲ್ಲಿ ವಾಸವಾಗಿದ್ದ ಕೆಲವು ಮಂದಿ ಯೆಹೂದ್ಯರು ತಮ್ಮ ರಕ್ಷಕನಾಗಿದ್ದ ಮಹಮ್ಮದನಿಗೆ ಆಪತ್ಕಾಲದಲ್ಲಿ ಸಹಾಯಮಾಡುವ ಯೋಚನೆಯನ್ನು ಕಟ್ಟು ದ್ರೋಹ ಚಿಂತನೆ ಮಾಡಿ ಅಪರಾಧಿಗಳಿಗೆ ಶತ್ರುಗಳಿಗೆ ಸಹಾಯ ಮಾಡಿದ ಅಪರಾಧಕ್ಕೆನು ತಕ್ಕ ದಂಡನೆ ಕಾರಣವೆಂದು ಮಹಮ್ಮದನು ಅವರನ್ನು ಕೇಳಿದನು. ಅವರಿಂದ ಸದುತ್ತರವೂ ಬಾರದೆಹೋದುದು ಮಾತ್ರ) ವಲ್ಲದೆ ಅವರು ಮತ್ತಷ್ಟು ಅವಿಧೇಯತೆಯನ್ನು ಪ್ರದರ್ಶಿಸಿ ಬಿರುನುಡಿ ಗಳನ್ನಾಡಿ ಒಂದು ಕೋಟೆಯೊಳಗೆ ಸೇರಿಕೊಂಡರು. ಮಹಮ್ಮದನು ಅವರ ತಪ್ಪಿಗೆ ತಕ್ಕ ಶಿಕ್ಷೆಯನ್ನು ಮಾಡುವ ಚಲವನ್ನು ತೊಟ್ಟು ಅವ ರಿದ್ದ ಕೋಟೆಯನ್ನು ಮುತ್ತಿ ಎಲ್ಲರನ್ನೂ ಸೆರೆಹಿಡಿದರು. ಅವರು ನಿರು ಪಾಯರಾಗಿ, ತಮ್ಮನ್ನು ವಿಚಾರಣೆ ಮಾಡಿ ತಕ್ಕ ಶಿಕ್ಷೆಯನ್ನು ವಿಧಿಸುವ ದಕ್ಕಾಗಿ ಸಾದನೆಂಬಾತನನ್ನು ನಿಯಮಿಸಬೇಕೆಂದು ಕೇಳಿಕೊಳ್ಳಲು, ಮಹಮ್ಮದನು ಅದಕ್ಕೆ ಒಪ್ಪಿದನು. ಅವರಮೇಲೆ ರಾಜ ದ್ರೋಹದ ಗುರುತರವಾದ ಅಪರಾಧವು ಹೊತ್ತು, ಸಾದನು ಅವರ ಧರ್ಮಶಾಸ್ತ್ರದ ಪ್ರಕಾರವೇ ಅವರೆಲ್ಲರಿಗೂ ಮರಣ ದಂಡನೆಯನ್ನು ವಿಧಿಸಿದನು. ಶಿಕ್ಷೆ ಯೇನೋ ಕ್ರೂರವಾದುದೇ ಆದರೂ, ಅದು ಯೆಹೂದ್ಯರ ಧರ್ಮ ಶಾಸ್ತ್ರದ ಪ್ರಕಾರವೇ ವಿಧಿಸಲ್ಪಟ್ಟುದೆಂಬ ಅಂಶವನ್ನು ನಾವು ನೆನಪಿನ ಕ್ಲಿಡಬೇಕು. ಇದಲ್ಲದೆ, ಆಗಿನ ಕಾಲದ ಪದ್ದತಿಗಳೂ ಹಾಗೆಯೇ ಇದ್ದು, - ಹೀಗೆ ಅನೇಕ ಕದನಗಳಲ್ಲಿ ವಿಜಯವುಂಟಾಗಲು, ಮಹಮ್ಮದೀ ಯರ ಉತ್ಸಾಹವು ಹತ್ತರಷ್ಟು ಹೆಚ್ಚಿತು. ಮೆದೀನಾ ನಗರದ ಕೊನೆಯ ಮುತ್ತಿಗೆಯ ಕಾಲದಲ್ಲಿ, ಗಾಳಿ ಮಳೆಗಳ ರೂಪದಲ್ಲಿ ಪ್ರಕೃತಿಯ ಮಹಮ್ಮದನಿಗೆ ಸಹಾಯ ಮಾಡಿದುದನ್ನು ಕಂಡು, ಶತ್ತು) ವರ್ಗದವ.