ಪುಟ:ಪೈಗಂಬರ ಮಹಮ್ಮದನು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮ ಪೈಗಂಬರ ಮಹಮ್ಮದನು ಒಂಬತ್ತನೆಯ ಅಧ್ಯಾಯ ಮಕ್ಕಾ ನಗರಕ್ಕೆ ಪ್ರಯಾಣ ಮಕ್ಕಾ ನಗರವು ಅರಬ್ಬಿ ದೇಶದವರಿಗೆ ಪುರಾತನವಾದ ಯಾತ್ರಾ) ಸ್ಥಳ. ಇಸ್ಲಾಂ ಮತವು ಹುಟ್ಟಿದ ಮೇಲೂ ಮಕ್ಕಾ ನಗರದ ಈ ದೇವಾಲಯಕ್ಕೆ ಹೋಗಿ ಬರುವುದು ಮಹಾಯಾತ್ರೆ ಯಾತ್ರೆಯ ಆಸೆ ಯೆಂಬುದಾಗಿ ಅಲ್ಲಿಯವರ ಭಾವನೆಯಿದ್ದಿತು. ಇಸ್ಲಾಂ ಮತವು ಪ್ರಬಲವಾದ ಮೇಲೆ, ಆ ದೇವಾ ಲಯದಲ್ಲಿದ್ದ ವಿಗ್ರಹಗಳು ನಾಶಹೊಂದಿದುವೇ ಹೊರತು, ಆ ಸ್ಥಳದ ಪವಿತ್ರತೆಯ ವಿಷಯದಲ್ಲಿ ಮಾತ್ರ ಜನರಿಗೆ ಲೇಶ ಮಾತ್ರವೂ ಅನಾದರ ಹುಟ್ಟಲಿಲ್ಲ. ಈಗ ನಮ್ಮ ಕಾಲದಲ್ಲಿಯೂ ಮಕ್ಕಾ ನಗರಕ್ಕೆ ಹೋಗಿ ಬರುವುದು ಮಹಾ ಯಾತ್ರೆಯೆಂದೇ ಮುಸಲ್ಮಾನರ ಭಾವನೆ. ಪ್ರಸಕ್ತ ಸಮಯದಲ್ಲಿ, ಮಹಮ್ಮದನಿಗೂ ಅವನ ಅನುಯಾಯಿಗಳಿಗೂ ಮಕ್ಕಾ ನಗರಕ್ಕೆ ಹೋಗಿಬರಬೇಕೆಂಬ ಆಸೆಯು ಹುಟ್ಟಿತು. ಇತರ ನಾನಾ ಪ್ರದೇಶಗಳಿಂದಲೂ ಜನರು ವರ್ಷಂಪ್ರತಿ ಮಕ್ಕಾ ನಗರದ ಯಾತ್ರೆ ಯನ್ನು ಮಾಡಿಕೊಂಡು ಹೋಗುತ್ತಿರುವಲ್ಲಿ, ಅದೇ ನಗರದಲ್ಲಿಯೇ ಹುಟ್ಟಿ ಬೆಳೆದವರು ಆರು ವರುಷ ಕಾಲ ಸರಸ್ಕೃತವಾದ ಮೆದೀನಾ ನಗರದಲ್ಲಿದ್ದು ಆ ಬಳಿಕ ಅಲ್ಲಿಗೆ ಹೋಗಲು ಉತ್ಕಟವಾದ ಅಭಿಲಾಷೆ ಯನ್ನು ಹೊಂದಿದರೆಂದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಮಕ್ಕಾ ನಗರಕ್ಕೆ ಹೊರಡಬೇಕೆಂಬ ಅಪೇಕ್ಷೆಯನ್ನು ಮಹಮ್ಮದನು ಸೂಚಿಸಿದ ಕೂಡಲೆ ಅವನ ಅನುಯಾಯಿಗಳೆಲ್ಲರಿಗೂ ಕಾಲಿಗೆ ಗೆಜ್ಜೆಯನ್ನು ಕಟ್ಟಿ ದಂತಾಯಿತು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ?” ಎಂಬ ಉದಾತ್ತ ತತ್ಯಕ್ಕೆ ಶರಣಾಗತರಾಗದಿರುವ ಜನಾಂಗಗಳುಂಟೆ ? ಮಕ್ಕಾ ನಗರದಲ್ಲಿ ಪ್ರಬಲರಾಗಿದ್ದ ಕೊರೈಷ್ ಮನೆತನದವರಿಗೂ ಮಹಮ್ಮದನಿಗೂ ಮೈತ್ರಿಯಿಲ್ಲದಿದ್ದರೂ ಮಹಮ್ಮದನು ಯಾತ್ರಾರ್ಥಿ ಯಾಗಿ ಮಕ್ಕಾ ನಗರಕ್ಕೆ ಹೊರಟುದರ ಔಚಿತ್ಯದ ವಿಷಯದಲ್ಲಿ ಕೆಲವರಿಗೆ ಸಂದೇಹವಾಗಬಹುದು. ಪ್ರಯಾಣ