ಪುಟ:ಪೈಗಂಬರ ಮಹಮ್ಮದನು.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

IX, ಮಕ್ಕಾ ನಗರಕ್ಕೆ ಪ್ರಯಾಣ ೮೧ ನಿಂತು ಯುದ್ಧ ಮಾಡಿದ್ದರೆ, ಅವರೆಲ್ಲರೂ ತಮ್ಮ ಪ್ರಾಣಗಳನ್ನು ಬಲಿ ಯಾಗಿ ಸಮರ್ಪಿಸಬೇಕಾಗುತ್ತಿದ್ದಿತು. ಆದರೆ, ಮಹಮ್ಮದೀಯರ ಈ ವೀರ ಪ್ರತಿಜ್ಞೆಯನ್ನು ಕೇಳಿಯೋ, ಅಥವಾ ಮತ್ತಾವ ಕಾರಣ ದಿಂದಲೋ ಶತ್ರುಗಳು ಸಂಧಿಯ ಪ್ರಸ್ತಾವವನ್ನೆ ತ್ರಿ, ತಾವು ಹೇಳುವ ಷರತ್ತುಗಳಿಗೆ ಒಪ್ಪುವುದಾದರೆ ಮಹಮ್ಮದೀಯರೊಡನೆ ಒಪ್ಪಂದ ಮಾಡಿಕೊಳ್ಳುವುದಾಗಿ ತಿಳಿಸಿದರು. ಅದರ ಫಲಿತಾಂಶವಾಗಿ ಹುದ್ದೆ ಬಿಯಾವಿನ ಒಪ್ಪಂದವು ಮುಂದೆ ಹೇಳುವ ಷರತ್ತುಗಳ ಮೇರೆಗೆ ನಡೆಯಿತು:-ಹತ್ತು ವರುಷಗಳ ಕಾಲ ಉಭಯತ್ರರೂ ಪರಸ್ಪರ ಯುದ್ದ ಪ್ರಸಕ್ತಿಯಿಲ್ಲದೆ ತಟಸ್ಥರಾಗಿರಬೇಕು. ಮಹಮ್ಮದನೂ ಅವನ ಪರಿವಾರವೂ ಆ ವರುಷ ಮಕ್ಕಾ ನಗರಕ್ಕೆ ಹೋಗದೆ ಮದೀನಾ ನಗರಕ್ಕೆ ಹಿಂದಿರುಗಬೇಕು. ಮಾರನೆಯ ವರುಷ ಅವರು ಮಕ್ಕಾ ನಗರಕ್ಕೆ ಹೋಗಬಹುದಾದರೂ, ಮರು ದಿನಗಳಿಗಿಂತಲೂ ಹೆಚ್ಚಾಗಿ ಅವರು ಆ ನಗರದಲ್ಲಿರಕೂಡದು. ಮಕ್ಕಾ ನಗರದಲ್ಲಿರುವ ಮಹಮ್ಮದೀಯರಲ್ಲಿ ಯಾರೊಬ್ಬರನ್ನೂ ಈಗ ಅವರು ತಮ್ಮೊಡನೆ ಕರೆದುಕೊಂಡು ಹೋಗ ಕೂಡದು. ಅಲ್ಲದೆ, ತಮ್ಮೊಡನೆ ಬಂದಿರುವ ಮಹಮ್ಮದೀಯರಲ್ಲಿ ಯಾರಾದರೂ ಮಕ್ಕಾ ನಗರದಲ್ಲಿಯೇ ಇದ್ದು ಬಿಡಲು ಇಷ್ಟಪಡುವು ದಾದರೆ, ಮಹಮ್ಮದನು ಅದಕ್ಕೆ ಅಡ್ಡಿ ಮಾಡಕೂಡದು. ಮಕ್ಕಾ ನಗ ರದ ಮಹಮ್ಮದೀಯರು ಯಾರಾದರೂ ಮೆದೀನಾ ನಗರಕ್ಕೆ ಹೋಗಿ ನೆಲಸಲು ಅಪೇಕ್ಷಿಸಿದಲ್ಲಿ ಮಹಮ್ಮದನು ಅದಕ್ಕೆ ಸಮ್ಮತಿಸಕೂಡದು ; ಆದರೆ, ಮದೀನಾ ನಗರದಲ್ಲಿರುವ ಯಾವನಾದರೂ ಮಹಮ್ಮದೀಯನು ಮಕ್ಕಾ ನಗರಕ್ಕೆ ಹೊರಟು ಹೋಗಲಿಚ್ಚಿಸಿದರೆ ಮಹಮ್ಮದನು ಅದಕ್ಕೆ ಅನುಮತಿಯನ್ನು ಕೊಡಬೇಕು. ಅರಬೀ ದೇಶದಲ್ಲಿರುವ ಇತರ ಬುಡ ಕಟ್ಟಿನ ಜನರು ತಮಗೆ ಇಷ್ಟ ಬಂದಂತೆ ಯಾರೊಡನೆ ಬೇಕಾದರೂ ಸೇರು ವುದಕ್ಕೆ ಅವಕಾಶವಿರಬೇಕು. ಸಂದರ್ಭೋಚಿತವಾಗಿ ಕೆಲಸ ಮಾಡಬೇಕೇ ಹೊರತು, ಮೂರ್ಖ ತನದಿಂದ ದುಡುಕಿ ನಡೆಯುವುದರಿಂದ ಲೇಶವೂ ಫಲವಿಲ್ಲವೆಂಬುದನ್ನು ಮಹಮ್ಮದನು ಚೆನ್ನಾಗಿ ಅರಿತಿದ್ದನು. ತಾಳ್ಮೆ ತಪ್ಪಿ ವರ್ತಿಸು