ಪುಟ:ಪೈಗಂಬರ ಮಹಮ್ಮದನು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಮಹಮ್ಮದೀಯನಾಗಿದ್ದವನಲ್ಲ; ಆದಕಾರಣ, ಅವನು ಗುರುವಿನ ಅಪ್ಪಣೆಯನ್ನು ಶಿರಸಾ ವಹಿಸಿ ಹಿಂದಕ್ಕೆ ಹೊರಟು ಹೋದನು. ಮಹ ಮ್ಮದನ ಕಡೆಯವರಿಗೆ ಮೊದಲೇ ಮನಸ್ಸಿನಲ್ಲಿದ್ದ ಬೇಗುದಿಯು ಇದರಿಂದ ಮತ್ತಷ್ಟು ಹೆಚ್ಚಿದರೂ ಅವರ ಗುರುಭಕ್ತಿಯು ಅದನ್ನು ಮೆಟ್ಟಿ ಶಾಂತತೆಯನ್ನುಂಟುಮಾಡಿತು. ಅನಾಥನಾಗಿದ್ದ ಉತ್ಸನು ಮಕ್ಕಾ ನಗರದ ಕಡೆಗೆ ಪಯಣ ಹೊರಟು ನಗರವನ್ನು ತಲಪಿದೊಡನೆಯೇ ಶತ್ರುಗಳ ಕೈಯಿಂದ ತನಗೆ ಸಾವು ಸಿದ್ದವೆಂಬುದನ್ನು ಗೊತ್ತುಮಾಡಿಕೊಂ ಹೊಸ ವಸತಿಯ ಸ್ಥಾಪನೆ

  • ತವನಾಗಿ, ನಿಶಾಲವಾದ ಈ ಪ್ರಪಂಚದ
  • ನನ್ನನ್ನು ರಕ್ಷಿಸುವವರು ಯಾರೂ ಇಲ್ಲವೆ!” ಎಂದು ವ್ಯಥೆಪಟ್ಟನು; ಸ್ವಲ್ಪ ಕಾಲದಲ್ಲಿಯೇ ಧೈರತಂದುಕೊಂಡು, “ಜಗದ್ರಕ್ಷ ಕನಾದ ಭಗವಂತನೇ ಸಹಾಯಕ್ಕಿರುವಲ್ಲಿ, ತನ್ನ ವರು ಯಾರೂ ಇಲ್ಲಿ ವೆಂದು ವ್ಯಥೆಪಡಲೇಕೆ ? ” ಎಂದಾಲೋಚಿಸಿ ತನ್ನ ಮನಸ್ಸಿಗೆ ತಾನೇ ಸಮಾಧಾನ ಹೇಳಿಕೊಂಡನು. ಸಮಯವನ್ನು ನಿರೀಕ್ಷಿಸಿಕೊಂಡಿದ್ದ ಉತ್ಸನು, ತನ್ನ ಮೇಲೆ ಕಾವಲಿದ್ದವರಲ್ಲೊಬ್ಬನನ್ನು ದಾರಿಯಲ್ಲಿಯೇ ಕೊಂದುಬಿಟ್ಟನು; ಪ್ರಾಣ ಭಯದಿಂದ ಮತ್ತೊಬ್ಬನು ನ೮ಾಯನ ಮಾಡಿ ದನು. ಆದರೆ ಉತ್ಸನು ಮೆದೀನಾ ನಗರಕ್ಕೆ ಹಿಂದಿರುಗಿ ಹೋಗುವಂತೆ 7 ರಲಿಲ್ಲ ; ಮಕ್ಕಾ ನಗರವಂತೂ ಅವನ ಭಾಗಕ್ಕೆ ನಮ್ಮ ಭೂಮಿಯಂ ತಿದ್ದಿತು. ಆದಕಾರಣ, ಸಮದು ಸಾಹಸಿಯಾದ ಆ ಉತ್ಸನು ಆ ಎರಡು ಯೋಚನೆಗಳನ್ನೂ ಬಿಟ್ಟು ಇಸ್ ಎಂಬ ತೀರ ಪ್ರದೇಶವನ್ನು ಸೇರಿ ಅಲ್ಲಿ ಹೊಸ ವಸತಿಯೊಂದನ್ನು ಸ್ಥಾಪಿಸಿಕೊಂಡು ನೆಲಸಿದನು. ಕೊರಷ” ಮನೆತನದವರ ಹಿಂಸೆಗೊಳಗಾಗಿದ್ದ ಇತರ ಮಹಮ್ಮದೀಯರೂ ಕ್ರಮೇಣ ಅಲ್ಲಿಗೆ ಬಂದು ಸೇರಿ, ಯಾರ ಭಯವೂ ಇಲ್ಲದೆ ಅವರೆಲ್ಲರೂ ನಿರುಪಾಧಿಕವಾಗಿ ವಾಸಮಾಡಲು ಅನುಕೂಲವಾಯಿತು. ದಿನ ದಿನಕ್ಕೆ ಅವರ ಪ್ರಾಬಲ್ಯವು ಹೆಚ್ಚುತ್ತ ಬಂದುದರಿಂದ, ಪರಿಣಾಮದಲ್ಲಿ ಅವರ ದೆಸೆಯಿಂದ ತಮ್ಮ ವ್ಯಾಪಾರಕ್ಕೆ ಕುಂದಕವುಂಟಾಗಿ, ಸಿರಿಯಾ ದೇಶ ದೊಡನೆ ತಮಗಿದ್ದ ಸಂಬಂಧವು ಮತ್ತೊಮ್ಮೆ ಎಲ್ಲಿ ತಪ್ಪಿ ಹೋಗು