ಪುಟ:ಪೊನ್ನಮ್ಮ-ಗೌರಮ್ಮ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ಕೊಂಡು ಪಾಠ ಹೇಳಿಕೊಡುತ್ತಿದ್ದನು. ತಾಯಿ ಕತೆಗಳನ್ನು ಹೇಳುತ್ತಿದ್ದಳು ಹೀಗೆ ಅವರೆಲ್ಲರೂ ಬಹಳ ಸುಖವಾಗಿ ಇದ್ದರು.

ಪೊನ್ನಮ್ಮನಿಗೆ ಆರು ವರ್ಷಗಳಾದವು. ಅವಳು ಶಾಲೆಗೆ ಹೋಗತೊಡಗಿದಳು. ಶಾಲೆಯಲ್ಲಿಯೂ ಅವಳು ಬಹಳ ಚೆನ್ನಾಗಿ ಪಾಠ ಕಲಿತು ಒಳ್ಳೆಯವಳೆನಿಸಿಕೊಳ್ಳ ಹತ್ತಿದಳು. ಹೀಗಿರುವಾಗ ಒಂದು ದಿನ ಅವಳು ಶಾಲೆ ಯಿಂದ ಮನೆಗೆ ಬರುವಾಗ ಎಂದಿನಂತೆ ಅವಳ ತಾಯಿ ಬಾಗಿಲಲ್ಲಿರಲಿಲ್ಲ. ಯಾವಾಗಲೂ ಅವಳು ಬರುವುದನ್ನೇ ಕಾಯುತ್ತ ಅವಳ ತಾಯಿ ಬಾಗಿಲಲ್ಲಿ ನಿಂತಿರುವುದು ವಾಡಿಕೆ. ಆ ದಿನ ತಾಯಿಯನ್ನು ಕಾಣದೆ ಪೊನ್ನಮ್ಮನಿಗೆ ಆಶ್ಚರ್ಯವಾಯಿತು. ಅವಳು ಓಡುತ್ತ ಒಳಗೆ ಹೋಗಿ 'ಅಮ್ಮಾ, ಅಮ್ಮಾ' ಎಂದು ಕೂಗಿದಳು. ಅವಳ ತಾಯಿ ಮಲಗಿದ್ದಳು. ಪೊನ್ನಮ್ಮನನ್ನು ನೋಡಿ ಇಲ್ಲಿ ಬಾ ಪೊನ್ನು' ಎಂದಳು. ಪೊನ್ನಮ್ಮ ತಾಯಿಯ ಹತ್ತಿರ ಹೋದಳು. ಅವಳ ತಾಯಿಗೆ ಬಹಳ ಜ್ವರ ಬಂದಿತ್ತು. ಅಷ್ಟು ಹೊತ್ತಿಗೆ ಅವಳ ತಂದೆಯೂ ಬಂದನು. ತಾಯಿಗೆ ಜ್ವರ ಬಂದು ದನ್ನು ನೋಡಿ ಮದ್ದು ತಂದುಕೊಟ್ಟನು. ಆ ದಿವಸವೆಲ್ಲ ಪೊನ್ನಮ್ಮ ತಾಯಿಯ ಹತ್ತಿರವೇ ಕೂತುಕೊಂಡು ಅವಳ ಸೇವೆ ಮಾಡಿದಳು. ಆದರೆ ಜ್ವರ ಮಾತ್ರ ಬಿಡಲೇ ಇಲ್ಲ.