ಪುಟ:ಪೊನ್ನಮ್ಮ-ಗೌರಮ್ಮ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ಬೆಳಗಾಗುವ ಮೊದಲೇ ಅವಳ ತಾಯಿ ಸತ್ತು ಹೋದಳು. ಪೊನ್ನಮ್ಮನಿಗೂ ಅವಳ ತಂದೆಗೂ ಬಹಳ ವ್ಯಸನ ವಾಯಿತು. ಅವರಿಬ್ಬರೂ ಬಹಳ ಅತ್ತರು.

ತಾಯಿ ಸತ್ತು ಹೋದ ಮೇಲೆ ಪೊನ್ನಮ್ಮನನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಹೋದರು. ಅವಳ ತಂದೆಗೆ ಗದ್ದೆಯ ಕೆಲಸವಿತ್ತು. ಪೊನ್ನಮ್ಮನಿಗೆ ಸ್ನಾನ ಮಾಡಿಸಿ, ಊಟ ಉಣಿಸಿ, ಕತೆ ಹೇಳಿ ಮುದ್ದಿಸಲು ಅವನಿಗೆ ಸಮಯವಿರುತ್ತಿರಲಿಲ್ಲ. ಆದುದರಿಂದ ಏನು ಮಾಡುವುದು ಎಂದು ಬಹಳ ಯೋಚಿಸಿ ಕೊನೆಗೆ ಒಬ್ಬಳನ್ನು ಮದುವೆಯಾದನು. ಅವಳ ತಂದೆ ಮದುವೆಯಾದ ಎರಡನೆಯ ಹೆಂಡತಿ ಪೊನ್ನಮ್ಮನಿಗೆ ಚಿಕ್ಕ ತಾಯಿಯಾದಳು. ಈ ಚಿಕ್ಕ ತಾಯಿಯು ಬಂದ ಸುರುವಿನಲ್ಲಿ ಪೊನ್ನಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಸ್ವಲ್ಪ ದಿನಗಳಲ್ಲಿ ಅವಳಿಗೂ ಒಂದು ಮಗು ಆಯಿತು. ಆ ಮಗುವಿನ ಹೆಸರು ಬೋಜಮ್ಮ, ಬೋಜಮ್ಮ ಹುಟ್ಟಿದ ಮೇಲೆ ಚಿಕ್ಕತಾಯಿ ಪೊನ್ನಮ್ಮನನ್ನು ಮೊದಲಿನಷ್ಟು ಪ್ರೀತಿಸುತ್ತಿರಲಿಲ್ಲ.

ಮನೆಗೆಲಸಗಳನ್ನೆಲ್ಲ ಪೊನ್ನಮ್ಮನಿಂದಲೇ ಮಾಡಿಸು ತಿದ್ದಳು, ಕೋಳಿ ಕೂಗುವ ಮೊದಲೇ ಪೊನ್ನಮ್ಮ ಎದ್ದು ಎಲ್ಲ ಕೆಲಸಗಳನ್ನೂ ಮಾಡಬೇಕಾಯಿತು. ಚಿಕ್ಕತಾಯಿಯು