ಪುಟ:ಪೊನ್ನಮ್ಮ-ಗೌರಮ್ಮ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ಅವಳನ್ನು ಶಾಲೆಗೆ ಹೋಗಲೂ ಬಿಡುತ್ತಿರಲಿಲ್ಲ. ಬೋಜಮ್ಮನನ್ನು ಮಾತ್ರ ಒಳ್ಳೊಳ್ಳೆಯ ಬಟ್ಟೆಗಳನ್ನು ಹಾಕಿ ಶಾಲೆಗೆ ಕಳಿಸುತ್ತಿದ್ದಳು. ಬೋಜಮ್ಮನಿಗೆ ಒಳ್ಳೊಳ್ಳೆಯ ಆಟಿಗೆಗಳನ್ನೂ ಬೋಂಬೆಗಳನ್ನೂ ಕೊಡುತ್ತಿದ್ದಳು. ಪೊನ್ನಮ್ಮನಿಗೆ ಏನೂ ಕೊಡುತ್ತಿರಲಿಲ್ಲ.

ಆದರೆ ಪೊನ್ನಮ್ಮ ಬಹಳೇ ಒಳ್ಳೆಯ ಹುಡುಗಿ, ಅವಳಿಗೆ ಕೆಲಸಮಾಡಲು ಸ್ವಲ್ಪವಾದರೂ ಬೇಸರವಿರಲಿಲ್ಲ. ಚಿಕ್ಕ ತಾಯಿಯು ಅವಳನ್ನು ಪ್ರೀತಿಸದಿದ್ದರೂ ಪೊನ್ನಮ್ಮ ಅವಳನ್ನು ಪ್ರೀತಿಸುತ್ತಿದ್ದಳು. ಅವಳು ಹೇಳಿದ ಯಾವ ಮಾತನ್ನೂ ಮೀರುತ್ತಿರಲಿಲ್ಲ.

ಪೊನ್ನಮ್ಮನಿಗೆ ಪ್ರಾಣಿಗಳ ಮೇಲೆ ಬಹಳ ದಯೆ ಇತ್ತು. ಅವಳು ಅವುಗಳಿಗೆ ಹೊಡೆಯುತ್ತಿರಲಿಲ್ಲ. ಅದರಿಂದಲೇ ಹಟ್ಟಿಯ ನಾಯಿಗಳೂ ಕೊಟ್ಟಿಗೆಯ ದನಗಳೂ ಅವಳನ್ನು ಬಹಳವಾಗಿ ಪ್ರೀತಿಸುತ್ತಿದ್ದವು. ಸಿಡುಕಿನ ಸ್ವಭಾವದವಳಾದ ಬೋಜಮ್ಮನನ್ನು ಕಂಡರೆ ಅವುಗಳಿಗಾಗುತ್ತಿರಲಿಲ್ಲ.

ಹೀಗಿರುವಾಗ ಒಂದು ದಿನ ಚಿಕ್ಕ ತಾಯಿಯು ಒಂದು ಹರಕು ಕುಕ್ಕೆ (ಬುಟ್ಟಿ)ಯಲ್ಲಿ ಸ್ವಲ್ಪ ಅಕ್ಕಿನುಚ್ಚನ್ನು ಹಾಕಿ ಪೊನ್ನಮ್ಮನ ಹತ್ತಿರ ಕೊಟ್ಟು “ ಕಾಲುವೆಗೆ ಹೋಗಿ