ಪುಟ:ಪೊನ್ನಮ್ಮ-ಗೌರಮ್ಮ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ತೊಳೆದುಕೊಂಡು ಬಾ” ಎಂದಳು. ಕುಕ್ಕೆ ಹರಿದಿದ್ದುದರಿಂದ ಪೊನ್ನಮ್ಮ ತೊಳೆಯುವಾಗ ನುಚ್ಚೆಲ್ಲಾ ನೀರಿಗೆ ಬಿದ್ದು ಹರಿದುಹೋಯಿತು. ಅದನ್ನು ಕೇಳಿ ಚಿಕ್ಕ ತಾಯಿಯು ಕೊಪದಿಂದ “ ನುಚ್ಚನ್ನು ತರದೆ ಮನೆಗೆ ಬರಬೇಡ ” ಎಂದು ಗದರಿಸಿ ಅಟ್ಟಿಬಿಟ್ಟಳು.

ಪಾಪ! ಪೊನ್ನಮ್ಮ ನೀರಿನಲ್ಲಿ ಹೋದ ನುಚ್ಚನ್ನು ತರುವುದು ಹೇಗೆ? ಅವಳಿಗೆ ಬಹಳ ವ್ಯಸನವಾಯಿತು. ತನ್ನ ಸತ್ತ ತಾಯಿಯನ್ನು ನೆನಿಸಿಕೊಂಡು ಗೊಳೋ ಎಂದು ಅತ್ತಳು.

ಅಳುತ್ತಾ ಅಳುತ್ತಾ ಪೊನ್ನಮ್ಮ ಹರಿದುಹೋಗುತ್ತಿರುವ ನುಚ್ಚಕ್ಕಿಯನ್ನು ಕುರಿತು 'ನುಚ್ಚಕ್ಕಿ ನುರಿಯಕ್ಕೀ ನಾ ಬಪ್ಪೀ ನೀ ನಿಲ್ಲೂ” ಅಂದರೆ "ನುಚ್ಚಕ್ಕೀ ನುರಿಯಕ್ಕಿ ನಾನು ಬರುತ್ತೇನೆ ನೀನು ನಿಲ್ಲೂ” ಎಂದುಕೊಂಡು ಕಾಲುವೆಯ ಏರಿಯ ಮೇಲೆಯೇ ಹಿಂಬಾಲಿಸತೊಡಗಿದಳು.

ಹೀಗೆಯೇ ಹೋಗುತ್ತಿರುವಾಗ ದಾರಿಯಲ್ಲಿ ಒಂದು ದನವು ಬಹಳ ಸೋತು ಏಳಲಾರದೆ ಬಿದ್ದು ಕೊಂಡಿತ್ತು. ಅದನ್ನು ನೋಡಿ ಪೊನ್ನಮ್ಮನಿಗೆ ಬಹಳ ವ್ಯಸನವಾಯಿತು. ಅದಕ್ಕೆ ನೀರು ಕುಡಿಸಿ ಹುಲ್ಲು ಕುಯಿದು ತಂದುಹಾಕಿದಳು. ದನಕ್ಕೆ ಸಂತೋಷವಾಗಿ ಹುಲ್ಲು ತಿನ್ನತೊಡಗಿತು. ತರುವಾಯ ಪೊನ್ನಮ್ಮ ಮುಂದೆ ಹೊರಟಳು. ಸ್ವಲ್ಪ