ಪುಟ:ಪೊನ್ನಮ್ಮ-ಗೌರಮ್ಮ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ಮಾಡಿದನು. ಇದನ್ನು ನೋಡಿ ಚಿಕ್ಕ ತಾಯಿಗೆ ಬುದ್ಧಿಬಂತು. ಅವಳು ಪೊನ್ನಮ್ಮನನ್ನು ಪುನಃ ಪ್ರೀತಿಸತೊಡಗಿದಳು. ಬೋಜಮ್ಮನೂ ಪೊನ್ನಮ್ಮನನ್ನು ನೋಡಿ ಅವಳಂತೆಯೇ ಒಳ್ಳೆಯವಳಾಗಲು ಪ್ರಯತ್ನಿಸತೊಡಗಿದಳು. ಇದನ್ನು ಕಂಡು ಪೊನ್ನಮ್ಮ ಬೋಜಮ್ಮನನ್ನು ಮೊದಲಿಗಿಂತಲೂ ಮಿಗಿಲಾಗಿ ಪ್ರೀತಿಸಹತ್ತಿದಳು.

ಹೀಗೆ ಎಲ್ಲರೂ ಸುಖವಾಗಿ ಇದ್ದರು. ಪೊನ್ನಮ್ಮನಂತೆ ಮಕ್ಕಳು ಒಳ್ಳೆಯವರಾಗಿದ್ದರೆ ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆದುದರಿಂದ ನಾವೆಲ್ಲರೂ ಒಳ್ಳೆಯವರಾಗಬೇಕು. ಪ್ರಾಣಿಗಳಲ್ಲಿ ದಯೆಯನ್ನಿಡಬೇಕು.