ಪುಟ:ಪೊನ್ನಮ್ಮ-ಗೌರಮ್ಮ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ದು ಬಹಳ ವರ್ಷಗಳ ಹಿಂದಿನ ಕತೆ, ಒಂದೂರಿನಲ್ಲಿ ಒಬ್ಬ ಕೊಡಗನೂ ಒಬ್ಬ ಕೊಡಗಿತಿಯೂ ಇದ್ದರು. ಅವರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಪೊನ್ನಮ್ಮ, ಪೊನ್ನಮ್ಮ ಬಹಳ ಚೆಂದದ ಹುಡುಗಿ, ಅವಳ ತಾಯಿಯು ಮನೆಗೆಲಸ ಮಾಡುವಾಗ ಚಿಕ್ಕ ಪೊನ್ನಮ್ಮ ಅಂಗಳದಲ್ಲಿ ಆಟವಾಡಿಕೊಂಡಿರುತ್ತಿದ್ದಳು. ಅವಳು ಎಂದೂ ಅತ್ತು ಕೊಂಡು ತಾಯಿಯನ್ನು ತೊಂದರೆಪಡಿಸುತ್ತಿರಲಿಲ್ಲ. ಅವಳ ತಂದೆ' ಅವಳಿಗೊಂದು ಪುಟ್ಟ ನಾಯಿಮರಿಯನ್ನು ತಂದುಕೊಟ್ಟಿದ್ದನು. ಅದನ್ನು ಅವಳು ಬಹಳ ಪ್ರೀತಿಯಿಂದ ಸಾಕುತ್ತಿದ್ದಳು. ಅದಕ್ಕೆ 'ಮೋತಿ' ಎಂದು ಹೆಸರಿಟ್ಟು ಕೊಂಡು ಅದರ ಜೊತೆಯಲ್ಲಿ ಆಡುತ್ತಿದ್ದಳು. ತಾಯಿಯ ಮನೆಗೆಲಸಗಳು ಮುಗಿಯುವ ಹೊತ್ತಿಗೆ ತಂದೆಯು ಗದ್ದೆ ಯಿಂದ ಮನೆಗೆ ಬರುತ್ತಿದ್ದನು. ತಂದೆ ಮನೆಗೆ ಬಂದ ಮೇಲೆ ಪುಟ್ಟ ಪೊನ್ನಮ್ಮನನ್ನು ಹತ್ತಿರ ಕರೆದು ಕೂರಿಸಿ