ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಗತಿಯಾಗಿರದಿದ್ದರೂ, ಮನುಷ್ಯ ನ ವಿಚಾರಸರಣಿಗನುಸರಿಸಿ ಯೋಗ್ಯವಾಗಿರುವದು, ಪ್ರಗತಿಹೊಂದೋಣವೆಂದರೆ, ಇದ್ದ ಸ್ಥಿತಿಯಿ೦ದ ಅ೦ತರಿಸುತ್ತ ಕೀಳುಸ್ಥಿತಿಯನ್ನು ಬಿಟ್ಟು ಉತ್ತಮಪದವನ್ನು ಏರೋಣವು, ಪ್ರಗ ತಿಹೊಂದದ ಸ್ಥಿತಿಗೆ ಕೀಳು ಆಥವಾ ದಾಸ್ಯಸ್ಥಿತಿಯೆಂತಲೂ, ಉ, ಮಪದವೇರಿದ ಸ್ಥಿತಿಗೆ ಪ್ರಗತಿ ಅಧವಾ ದಾಸ್ಯವಿಮೋಚನಸ್ಸಿತಿಯೆಂ ತಲೂ ನಿರ್ಬಾ ಧವಾಗಿ ಹೇಳಬಹುದು. ಮೇಲೆ ಹೇಳಿದಂತೆ ಮಿನವು ಪ್ರಗತಿಹೊಂದದೆಯಿದ್ದಾಗ ಕೀಳು- ದಾಸ್ಯಸ್ಥಿತಿಯಲ್ಲಿ ಇದ್ದು, ಅದು ಪ್ರಗತಿಪಥವನ್ನು ಕ್ರಮಕ್ರಮಿಸಿದಂತೆ ಪ್ರಗತಿ-ದಾಸ್ಯವಿಮೋಚನ ಸ್ಥಿತಿ ಯನ್ನು ಹೊಂದಿರುವದು. ದಡ್ಯನು ಪಂಡಿತನಾಗುವದೂ, ಮರ್ಖನು ವಿವೇಕಿಯಾಗುವದೂ, ಹೇಡಿಯ ಪ್ರಸಿದ್ಧ ರಣಪಂಡಿತನಾಗುವದೂ, ಅಶಕ್ತನು ಸಶಕ್ತನಾಗುವದೂ , ಅಳುಬುರಕನು ಧೈರ್ಯಶಾಲಿಯಾ ಗುವದೂ, ಕಳ್ಳನು ನೀತಿಶಾಸ್ತ್ರಬೋಧಕನಾಗುವದೂ, ದರಿದ್ರನು ಘನಶ್ರೀಮಂತನಾಗುವದೂ ಕೂಲಿಯವನು ಯಜಮಾನನಾಗುವದೂ, ನೌಕರನು ಪ್ರಖ್ಯಾತ ಉದ್ಯೋಗಸ್ಯನಾಗುವ, ಜಾರಿಣಿಯು ಪತಿ ವತಾಶಿರೋಮಣಿಯಾಗುವದೂ ಪ್ರಗತಿ ಅಧವಾ ದಾಸ್ಯವಿಮೋಚನ ದಿಂದಲೇ ಪ್ರಗತಿಪಥವನ್ನು ಕ್ರಮಿಸಹತ್ತಿದರೆ ಮನುಷ್ಯನಲ್ಲಿ ನಿಜ ವಾದ ಮನುಷ್ಯತ್ವವು ಕ್ರಮೇಣಬರತೊಡಗುವದು. ಪೂರ್ವ ಜನ್ಮ ಸಂಸ್ಕಾರದಿಂದ ನಮ್ಮಲ್ಲಿಯ ಎಷ್ಟೋ ಜನರು ಹುಟ್ಕಾ ಪ್ರಗತಿಗಾಮಿ ಗಳಾದ್ದರಿಂದ ಅವರು ಬಾಲ್ಯದಲ್ಲಿಯೇ ಮನುಷ್ಯತ್ವವನ್ನು ಹೊಂದಿ, ತಮ್ಮ ಆ ಮಾರ್ಗದ ಶುದ್ಧಾಚರಣೆಯಿಂದ ಲೋಕವಂದ್ಯರಾಗುವರು. ಶ್ರೀಶಂಕರಾಚಾರ್ಯ, ಶ್ರೀಮಧ್ವಾಚಾರ್ಯ, ಶ್ರೀರಾಮಾನುಜಾ ಚಾರ್ಯ, ಏಸಕ್ರಿಸ್ತ, ಮಹಮ್ಮದ ಪೈಗಂಬರ, ಬುದ್ಧದೇವ, ಶ್ರೀಸಮರ್ಥ ರಾಮದಾಸ, ಶ್ರೀಶಿವಾಜಿಮಹಾರಾಜ, ಶೀಟೇಂಬ್ ಮಹಾರಾಜ, ಶ್ರೀ ಶೇಷಾಚಲ ಸಾಧುಗಳು, ಮಹಾತ್ಮಾಗಾಂಧೀ, ಶ್ರೀಯುತ ಟಿಳಕ ಮೊದಲಾದವರು ಹುಟ್ಟಾ ಪ್ರಗತಿಗಾಮಿಗಳಾಗಿ