ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•y 3 ೧ನೆಯ ಖಂಡ-ಸ್ವಾತಂತ್ರ್ಯಪ್ರೀತಿ, ಪ್ರಗತಿಯನ್ನು ಹೊಂದಲಿಚ್ಛಿಸುವವನಲ್ಲಿ ಸ್ವಾತಂತ್ರ್ಯಪ್ರೀತಿ” ಎಂಬ ಗುಣವು ಅತ್ಯವಶ್ಯವು, ಇಡಿ ಆಯುಷ್ಯವನ್ನು ನಿರಾಶೆಯಿಂದ ಮುಕ್ತ ಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ, ದುಃಖಗಳಿಂದ ವಿಮುಖಮಾಡಲಿಕ್ಕೂ ಸ್ವಾತಂತ್ರ್ಯಪ್ರೀತಿಯು ಮನುಷ್ಯನಿಗೆ ಸದಾ ಯಕವಾಗುವದು, ಆರಂಭದಿಂದಲೇ ಸ್ವಾತಂತ್ರ ಪ್ರೀತಿಯುಳ್ಳವನಿಗೆ ಯವದುಃಖಸಂಕಟಗಳಲ್ಲಿ ಸಿಲುಕುವ ಪ್ರಸಂಗವೇ ಬರುವದಿಲ್ಲ, ಸ್ವಾತಂತ್ರವಿಲ್ಲದ ಮನುಷ್ಯನು ಒಂದಿಲ್ಲೊಂದು ರೀತಿಯಿಂದ ಪರರಿಗೆ ದಾಸನಾಗಿರಬೇಕಾಗುವುದು ಸಹಜವ, ಅಂಧ ಮನುಷ್ಯನು ಸನ್ಮಾನನೀಯ ಅಮಲದಾರನಿದ್ದರೂ ಅಷ್ಟೆ; ಯಕಃಶ್ಚಿತ ಕೂಲಿಕಾ ರನಿದ್ದರೂ ಅಷ್ಟೇ, ಯಾವನಲ್ಲಿ ವಿವಸ್ವತಂತ್ರವಿಲ್ಲವೋ, ಆಚಾರ ಸ್ವತಂತ್ರವಿಲ್ಲವೋ ಅವನು ಮನುಷ್ಯನಾಗಿ ಹುಟ್ಟಿದ್ದು ನಿರರ್ಥಕವೆಂದು ಹೇಳಬಹುದು. ಯಾಕೆಂದರೆ, ಲೋಕದಲ್ಲಿಯ ಪ್ರತಿಯೊಂದು ಆಚೆ ತನ ಹಾಗು ಸಚೇತನ ವಸ್ತುಗಳು ಸ್ವಭಾವತಃ ಸ್ವತಂತ್ರವಾಗಿಯೇ ಇರುವವು. ಅವುಗಳ ಉತ್ಪತ್ತಿಯು ಸ್ವತಂತ್ರ, ಸ್ವರೂಪಾದಿಭೇದ ಗಳು ಸ್ವತಂತ್ರ ಕಾರ್ಯಕಾರಣಭಾವಗಳು ಸ್ವತಂತ್ರ ಹೀಗಿರಲು ಮನುಷ್ಯನಂಧ ಕೇವಲ ಬುದ್ದಿ ಮಾನಪ್ರಾಣಿಯು ಅಸ್ವತಂತ್ರನಾಗಿ ಪರ ರ ದಾಸ್ಯತ್ವವನ್ನು ವಹಿಸಲಿಕ್ಕೆ ಕಾರಣವೇನಿರಬಹುದೆಂಬದು ವಿಚಾರ ೯ನೇಯಮಾತಾಗಿದೆ. ಆದರೆ ಮನುಷ್ಯನು ಪರಾಧೀನ-ಆಸ್ಪತಂತ್ರ ನಾಗಲಿಕ್ಕೆ ಅವನಲ್ಲಿಯೆ ಸ್ವಾತಂತ್ರ್ಯಪ್ರೀತಿಯು ನಷ್ಟವಾದದ್ದೇ ಕಾರಣವಾಗಿದೆ ಎಂದು ಹೇಳಬಹುದು, “ ಪ್ರಾರಂಭದಿಂದಲೇ ತಾನೊಬ್ಬ ದೊಡ್ಡ ಸಂಖ್ಯೆಯ ಯಜ ಮಾನನು ಇಲ್ಲವೆ ಅರಸು, ಅಧವಾ ಧರ್ಮಾಧಿಕಾರಿಯು ಆಗಬೇಕು, ಎಂಬ ಕಾಲ್ಪನಿಕ ವಿಚಾರಗಳಿಂದಲೇ ಯಾಕಾಗಲೊಲ್ಲದು; ಯಾವನು ತನ್ನ ಜೀವನಾರ್ಧಕಲಹವನ್ನು ಸಾಗಿಸಲು ಪ್ರಯತ್ನಿಸದೆ, ಕೇವಲ ಗಿ೧ ಗವಾಗಿ ಸಾಗಾದರೂ ಜೀವನಾರ್ಧವನು , ದೊರಕಿಸಲು