ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*** ಪ್ರಯತ್ನದಿಂದಲೂ ಈ ಗುಣಗಳು ಮನುಷ್ಯನಲ್ಲಿ ಪ್ರಾದುರ್ಭವಿಸುವ ಸಂಭವವಿರುವದಿಲ್ಲ. ಸ್ವಂತದ ಉದ್ಯೋಗದಲ್ಲಿ ಸ್ವಂತದ ಲಾಭ ಹಾನಿಗಳ ಪರವಿಯೇ ಯಾವಾಗಲೂ ನಮ್ಮನ್ನು ಜಾಗ್ರತಗೊಳಿಸು ವದು; ಹಾಗು ಸತತ ಪರಿಶ್ರಮ ಮಾಡಲಿಕ್ಕೆ ಕಾರಣೀಭೂತವಾಗು ವದು. ಸ್ವಂತದ ಉದ್ಯೋಗಗಳಲ್ಲಿ ನಮ್ಮ ಶೋಧಕಬುದ್ಧಿಯ ಪೂರ್ಣ ಉಪಯೋಗಮಾಡಿಕೊಳ್ಳಲಿಕ್ಕೆ ಬರುತ್ತಿರುವದರಿಂದ, ನವ ಮಾನಸಿಕ ಶಕ್ತಿಯ ಹಾಗು ಬುದ್ಧಿಯ ವಿಕಾಸಕ್ಕೆ ಬಾಧೆಬಾರದೆ, ಅವು ಕ್ರಮೇಣ ಬೆಳೆದು ನಮ್ಮ ಪ್ರಗತಿಗೆ ಕಾರಣಗಳಾಗುವವು. ಯಾಕಂ ದರೆ, ಯಾವ ಪರಿಸ್ಥಿತಿಯಲ್ಲಿ ನಮಗೆ ಹೆಚ್ಚು ವಿಚಾರಮಾಡುವ, ಮನನ ಇಲ್ಲವೆ ಚಿ೦ತನಮಾಡುವ ಅಭ್ಯಾಸಮಾಡುವ ಕಾರ್ಯಕ್ರ ಮಗೊಳಿಸುವ ಹಾಗು ಅದರಂತೆ ನಡೆಯುವ ಯೋಗ್ಯ ಸಂಧಿಯು ಸಿಗುವದೋ, ಆ ಪರಿಸ್ಥಿತಿಯು ಯೋಗದಿಂದ ನಮ್ಮ ಉನ್ನತಿಯಾಗು ಇದೆ. ಆ ಪರಿಸ್ಥಿತಿಯಂದರೇ ಸ್ವಾತಂತ್ರ್ಯ ಈಗಿನಂಧ ಭಯಂಕರ ಮಹರ್ಗತೆಯ ಕಾಲದಲ್ಲಿ ಸ್ವಲ್ಪ ಬಂಡ ವಲದಿಂದ ಯಾವದಾದರೊಂದು ಸ್ವತಂತ್ರ ಉದ್ಯೋಗವನ್ನು ತೆಗೆ ಯುವ ಮನುಷ್ಯನು, ನಿಕರದ ಪ್ರಸಂಗದಲ್ಲಿ ಹತ್ತರದ ಮದ್ದುಗುಂಡು ತೀರುತ್ತ ಬಂt'ದ ಸೇನೆ .ತಿಯು ವರ್ತಿಸುವಂತೆ ಬಹಳ ಎಚ್ಚರಿಕೆ ಯಿಂದ ನಡೆಯಬೇಕಾಗುವದು. ಅವನು ಕಾರ್ಯಸಾಧನಕ್ಕಾಗಿ ತನ್ನ ಕಾಯಿಕ-ವಾಚಿಕ-ಮಾನಸಿಕ ಮೊದಲಾದ ಎಲ್ಲ ಶಕ್ತಿಗಳನ್ನೂ, ಸದಸದ್ವಿವೇಕಬುದ್ಧಿಯನ್ನೂ, ಧೈರ್ಯ ಹಾಗು ಸಹನಶೀಲತೆ-ಶ್ರಮ ಸಹಿಷ್ಣುತೆಗಳನ್ನೂ ಸಹಾಯಕ್ಕೆ ತೆಗೆದುಕೊಳ್ಳಬೇಕು. ತನ್ನ ಒಂದೂ ಮನೋಭಿಲಾಷೆಯ ಗುರಿಯು ವ್ಯರ್ಥವಾಗದಂತೆ, ಒಂದು ಪೈಕೂಡ ಅಕ್ರಮವಾಗಿ ವೆಚ್ಚವಾಗದಂತೆ, ಪ್ರತಿಯೊಂದು ಪ್ರಯ ತವೂ ನಿಷ್ಪಲವಾಗದಂತೆ ಜಾಗರೂಕನಾಗಿರಬೇಕು. ಅಂದರೆ ಅವನ ಪ್ರಗತಿಯಾಗಹತ್ತುತ್ತದೆ: ಮಹತ್ವಾಕಾಂಕ್ಷೆಯು ತನ್ನಿಂದ ಎಂಧ ಪರಿಶ್ರಮವನ್ನು ಮಾಡಿಸಿಕೊಳ್ಳುತ್ತದೆಂಬದು ನಿದರ್ಶನಕ್ಕೆ ಬರಹ