ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೧- ಸಂಗತಿಗಳ ಅನುಭವವು-ಶಿಕ್ಷಣವು ಮನುಷ್ಯನಿಗೆ ಎಷ್ಟು ತೀವ್ರ ಪ್ರಾಜ್ಞ ವಾಗುವವೋ ಆ ಪ್ರಕಾರದ ಅನುಭವವೂ ಶಿಕ್ಷಣವೂ ನರ ದಾಸ್ಯತ್ವ ದಲ್ಲಿದ್ದಾಗ ಜನ್ಮಜನ್ಮಾಂತರದಲ್ಲಿ ದೊರಕದು. ಜವಾಬ್ದಾರಿಯ ಭಾವನೆಯೇ ಶಿಕ್ಷಣಹೊಂದುವ ಸುಲಭವ ರ್ಗವಾಗಿದೆ. ಬಹಳ ಕಠಿಣ ಹಾಗು ಜವಾಬುದಾರಿಯ ಪ್ರಸಂಗಗಳು ಬಂದಹೊರತು ತಾವು ಮುಂದೆ ಏನು ಮಾಡಬಹುದೆಂಬದನ್ನು ರೂಪಿ 'ಸಲಿಕ್ಕಾಗುವದಿಲ್ಲ; ನಮ್ಮ ಸಾಮರ್ಥ್ಯದ ಕಲ್ಪನೆಯು ನಮಗಿರುವ ದಿಲ್ಲ. ಆದರೆ ಯಾವಾಗ ನಮಗೆ ಎರಡನೆ ಕಡೆಯಿಂದ ಸಹಾಯವು ದೊರೆಯುವ ಸಂಭವವಿರುವದಿಲ್ಲವೋ, ಸ್ವಂತದ ಕಾಲಮೇಲೆ ನಿಂತ ಹೊರತು ಅನ್ಯಮಾರ್ಗವಿರುವದಿಲ್ಲವೋ ಅವಾಗ್ಗೆ ನಾವು ನಿಕರ ದಿಂದ ಪ್ರಯತ್ನ ಮಾಡಹತ್ತುತ್ತೇವೆ. ಈ ನಿಕರದ ಪ್ರಯತ್ನದಲ್ಲಿ ಈಶ್ವರನು ನಿಶ್ಚಯದಿಂದ ನಮಗೆ ಯಶಸ್ಸು ಕೊಡುವನು. ಸೇವಾಧರ್ಮಕ್ಕೆ ಕನಿಷ್ಟ ಬರಲಿಕ್ಕೆ ಮುಖ್ಯ ಕಾರಣವೇನಂ ದರೆ, ಸೇವಾಧರ್ಮ ದಿಂದ ಸೇವಕನ ಸತ್ಯಕ್ಕೆ ಭಂಗಬರುತ್ತಿದ್ದ, ಪ್ರಗ ತಿಮಾರ್ಗವಲಂಬನಕ್ಕೆ ಅವನಿಗೆ ಸಂಧಿಯೇ ಸಿಗದಾಗುವದು, ಹೀಗೆ ನೈಸರ್ಗಿಕಗುಣಗಳ ಓದಿಗೇ ಭಂಗಬರುತ್ತಿರಲು, ಪ್ರಯತ್ನಪೂರ್ವ ಕಸಾಧಿಸಬೇಕಾದ ಪ್ರಗತಿಯ ಗತಿಯೇನು? ಹೀಗಾಗಿ ಸೇವಕನು ಎಲ್ಲ ಬಗೆಯಿಂದಲೂ ವಸ್ಯವಿಮೋಚನ ಮಾಡಿಕೊಳ್ಳಲು (ಪ್ರಗತಿ ಹೊಂದಲು) ಅಯೋಗ್ಯನಾಗುತ್ತಾನೆ, ಇನ್ನು ಕೆಲವರು ಹೀಗೆ ತರ್ಕಿಸಬಹುದು, ನಾವು ಎಲ್ಲರೂ ಸ್ವತಂತ್ರರಾಗುವದೂ ಎಲ್ಲರೂ ಉದ್ಯೋಗಸ್ತರಾಗುವದೂ ಅರಸರಾ ಗುವದೂ ಶಕ್ಯವಾಗಿಯಾದರೂ ತೋರುವದೊ? ಎಲ್ಲರೂ ಇಲ್ಲ ಕೈಯಲ್ಲಿ ಕೂತರೆ ಪಲ್ಲಕ್ಕಿ ಹೊರುವವರಾರು” ತಾರ್ಕಿಕರ ಈ ತರ್ಕ ವು ವಿಚಾರಣೀಯವಾಗಿದೆ, ಆದರೆ ಇದೇ ವಿಚಾರವು ಸ್ವತಂತ್ರರೀತಿ ಯಿಂದ ಇರುವ ಉದ್ಯೋಗಸ್ಥರ, ರಯತರ ಇಲ್ಲವೆ ಆರಸರ ಮನಸಿ ನಲ್ಲಿ ಬಂದು ಅವರು ತಮ್ಮ ತಮ, ಮಂತ್ರಿಗಳನ್ನು ಬಿಟ್ಟು ಕೊಟ್ಟು,