ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೧- ನಮ್ಮಂತೆ ನೌಕರರಾಗಬಯಸಿದರೆ ನಮ್ಮ ತಾರ್ಕಿಕರ ತರ್ಕಕ್ಕನೆ ಬೇಕಾಗುವದು? ಆಗ ನಾವು ನೌಕರಿ ಮಾಡುವದಾದರೂ ಯಾರ ದು? ಹೊರಲಿಕ್ಕೆ ಪಲ್ಲಕ್ಕಿಯಾದರೂ ಯಾರದುಸಿಗುವದು? ಆದ್ದರಿಂದ ಸ್ವಾತಂತ್ರ್ಯ ಪ್ರೀತಿಯುಳ್ಳ ಮನುಜನು ಹೊಲ್ಲದ ಈ ಹೇಡಿಕುತರ್ಕ ಗಳಿಗೆ ಮನಸ್ಸನ್ನಳಿಸದೆ, ತನ್ನ ಅಂತಃಕರಣಕ್ಕೆ ಸರಿದೋರುವ ಮಾರ್ಗ ವನ್ನು ಹಿಡಿದು ತೀವ್ರವಾಗಿ ಪ್ರಗತಿಯನ್ನು ಹೊಂದಲುಯತ್ನಿಸಬೇಕು. ಸ್ವಾತಂತ್ರ್ಯಪ್ರೀತಿಯುಳ್ಳ ಎಲ್ಲ ವ್ಯಕ್ತಿಗಳ ಆಧಿಕಾರವು ಲೋಕದಲಿ ಒಂದೇಸವನೆ ಆಗಿರುವದು, ಆ ವೃತ್ತಿಯಿಂದ ನಮ ನ್ನು ಪರಾಜ್ಯ ಖಮಾಡಲಿಕ್ಕೆ ಯಾವನಿಗೂ ಅಧಿಕಾರ ವದಿಲ್ಲ. ಸ್ವಾತಂತ್ರ್ಯ ಪ್ರೀತಿಯನ್ನು ವೃದ್ಧಿಗೊಳಿಸದೆ ಕುಗ್ಗಿಸುವದೆಂದರೆ, ಮನುಷ್ಯತ್ವದ ಕರ್ತವ್ಯಕ್ಕೆ ಭಂಗತಂದಂತಾಗುವದು. ಆದ್ದರಿಂದ ಮನುಷ್ಯತ್ವಕಾ ಯುಕೊಳ್ಳು ವದಕ್ಕಾಗಿ ಪ್ರತಿಯೊಬ್ಬನೂ ಸ್ವಾತಂತ್ರ್ಯ ಪ್ರಿಯ ನಾಗಬೇಕು, ಪರತಂತ್ರ ಮನುಷ್ಯನು ಸ್ವತಂತ್ರನಾಗಬಹುಸಿ ಪ್ರಯತ್ನ ಪಡಹ ಆದರೆ ಅವನಿಗೆ ಒಮ್ಮೆಲೆ ಸರ್ವವೂ ಸಾಧ್ಯವಾಗಲಾರದೆಂಬದು ನಿಜವು; ಯಾಕಂದರೆ ಗತಆಯುಷ್ಯವು ಪಾರತಂತ್ರ್ಯರಜವಿನಿಂದ ಬಿಗಿಯ ಲ್ಪಟ್ಟಿತ್ತಾದ್ದರಿಂದ, ಈಗಲೂ ಅವನ ದೇಹದ ಮೇಲೆ, ಮನಸ್ಸಿನ ಮೇಲೆ ಆ ರಜ್ಜುವಿನ ಬಾಸಾಳಗಳು ಮೂಡಿರುವದರಿಂದ, ಕೆಲಕೆಲವು ಪ್ರಸಂಗಗಳಲ್ಲಿ ತನ್ನಿಂದ ತಾನೇ ಆವನು ತನ್ನ ಸ್ವಾತಂತ್ರಭಂಗಕ್ಕೆ ಕಾರಣನಾಗಿ, ಪ್ರಗತಿಗೆ ಆಗಿನ ಮಟ್ಟಿಗೆ ಬಾಧೆತಂದುಕೊಳ್ಳುವನು. ಆ ರಜ್ಜುವಿನ ಬಾಸಾಳಗಳು ಸಂಪೂರ್ಣ ಇಲ್ಲದಂತಾಗಲು ಅವನ ಪ್ರಗತಿಯು ಒಳ್ಳೇ ಒತ್ತರದಿಂದ ಆಗಹತವದು. ಆಗ ಅವನು ತನ್ನ ಮೊದಲಿನ ಹಾಗು ಈಗಿನ ಮಹತ್ವಾಕಾಂಕ್ಷೆಗಳ ತುಲನೆಯನ್ನು ಮಾಡಿದರೆ, ತನ್ನಲ್ಲಿ ಒಂದು ಪ್ರಕಾರದ ಸಾಮರ್ಥ್ಯವು ಉಂಟಾಗಿರುವ ದೆಂದು ಅವನಿಗೆ ಕಂಡುಬರುವದು. ಸ್ವಾವಲಂಬನದ ಸುಖದ ಮುಂದೆ ಪರಾವಲಂಬನದಸುಖವು ಅವನಿಗೆ ತುಚ್ಛವಾಗಿ ಕಾಣಹುವದು.ಹೀಗೆ