ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•-೧- ಶ್ಯವೆಂದು ನಮಗೆ ತೋರುವದರಿಂದ ಅದರ ಉಲ್ಲೇಖವನ್ನು ಇಲ್ಲಿ ಮಾಡುವೆವು. . ಈ ದೀಪಕನು ಬಾಲ್ಯದಲ್ಲಿ ವಿದ್ಯ ಕಲಿಯುವದಕ್ಕಾಗಿ ಒಬ್ಬ ಮಹಾಜ್ಞಾನಿಯಾದ ಋಷಿಯ ಬಳಿಯಲ್ಲಿರುತ್ತಿದ್ದನು. ಪೂರ್ವದ ಅಧ್ಯಾ ಪಕರು, ಋಷಿಗಳು, ಶಿಕ್ಷಣ ಕೊಡುವ ಪದ್ಧತಿಯು ಈಗಿನಂತೆ ಇದ್ದಿಲ್ಲ. ಅವರ ಲಿಸೋಣವು ಗಹನವ. ಆಗಿನ ಗುರುಗಳು ಈಗಿನಂತೆ, ವಿದ್ಯಾರ್ದಿಗಳಿಂದ ವ್ರಧಮಿಕಪುಸ್ತಕಗಳನ್ನು ಓದಿಸಿ ಬಳಿಕ ಉಟ್ಟೆ ತರದ ಶಿಕ್ಷಣ ಕೊಡುವಂತಿ ಪರ ಹೇಳುತ್ತಿದ್ದಿಲ್ಲ. ಅವರು ತಮ್ಮ ಲ್ಲಿಗೆ ಬಂದ ಎಲ್ಲ ವಿದ್ಯಾರ್ಥಿಗಳನ್ನು ಅವರವರ ಶೀಲ, ಗುಣಗ್ರಾಹ ಕತೆ, ದೃಢನಿಶ್ಚಯ ಮೊದಲಾದವನ್ನು ಪರೀಕ್ಷಿಸುವದಕ್ಕಾಗಿ ತಪಗ ಟೂಲೆ ಸೇವೆಮಾಡಲು ಹಕ್ಕವರು, ಉತ್ತಂಕನೆಂಬ ಮಹಾತ್ಮ ಹೈನು ಗುರುಗಳಲ್ಲಿ ದನಕಾಯ ವಿದ್ಯೆ ಸಂಪಾದಿಸಿದನು. ಶ್ರೀ ಕೃಷ್ಣನು ಕಟ್ಟಿಗೆ ತಂದು ವಿದ್ಯೆಗಲಿತನು. ಹೀಗೆ ಗುರುಗಳು ವಿದ್ಯಾರ್ಥಿಗಳನ್ನು ಸೇವೆಮಾಡಲಿಕ್ಕೆ ಹಚ್ಚಿ, ಅವರ ಅಂತಶುದ್ಧಿ ಯಾಗುವದಕ, ಅವರಲ್ಲಿ ನಿಜವಾದ ಸದ್ಗುಣಗಳು ಪ್ರಾದುರ್ಭವಿ ಸಲಿಕ್ಕೂ ಪ್ರಸಂಗ ದೊರಕುವಂತೆ ಅವರಿಗೆ ವಿಧವಿಧದ ಕಷ್ಟಗಳನ್ನು ಕೊಡುತ್ತಿದ್ದರು. ಇದೇ ಪ್ರಕಾರ ದೀಪಕಶಿಷ್ಯನಿಗೆ ಅವನ ಗುರು ಗಳು ಬಹಳವಾಗಿ ಕಾಡಿಸಿದರು. ಆದರೂ ಆ ದೃಢನಿಶ್ಚಯಿಯು ವಿಮ ನಸ್ಕನಾಗದೆ ಗುರುಸೇವೆಯನ್ನು ಒಮ್ಮನಸಿನಿಂದ ಮಾಡುತ್ತಿದ್ದನು. ಒಮ್ಮೆ ಗುರುಗಳು ದೀಪಕನ ದೃಢನಿಶ್ಚಯವನ್ನು ಪರೀಕ್ಷಿಸುವದ ಕಾಗಿ ಅವನನ್ನು ಕುರಿತು ತಮ್ಮಾ ದೀಪಕಾ, ನಾನು ಜನ್ಮಾಂತರ ದಲ್ಲಿ ಬಹಳ ನೀಚಕರ್ಮಗಳನ್ನು ಮಾಡಿರುವೆನು. ಈ ಜನ್ಮದಲ್ಲಿ ತಪೋನಿಷ್ಟನಾಗಿ ಒಹಳ ಪುಣ್ಯಸಂಪಾದಿಸಿದ್ದರೂ ಆ ಪ್ರಾಚೀನ ದುಷ್ಕೃತ್ಯವು ನನಗೆ ತೊಂದರೆ ಕೊಡದೆ ಇರದು, ಅದಕ್ಕಾಗಿ ಕೈಕಾಲು ಗಟ್ಟಿಯಾಗಿದ್ದು ಸ್ವತಂತ್ರನಿರುವಾಗಲೇ ನಾನು ಆದುಷ್ಯತಿರವಿಮೋ ಚನಕಾಗಿ ಉಪಾಯವನ್ನು ಮಾಡಬೇಕೆಂದಿರುವೆನು, ಆ ದುಷ್ಕರ್ಮ