ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೧- ದಿಂದ ನಾನು ಇಪ್ಪತ್ತೊಂದು ವರ್ಷಗಳ ವರೆಗೆ ಅಂಧನಾಗಿ, ಕುಷ್ಟದಿಂದ ಪೀಡಿತನಾಗಿಯೇ ಇರಬೇಕಾಗುವದು. ಈ ಅವಧಿ ಯಲ್ಲಿ ನೀನು ನನ್ನ ಸೇವೆಮಾಡಿಕೊಂಡು ಇರುವದಾದರೆ, ನಿನ್ನ ಉಚ್ಚೆಯವು ನಿಜವಾಗಿ ಆಗುವದು ಆದರೆ ನಾನು ಹೇಳುವ ದನ್ನು ಪೂರ್ಣವಾಗಿ ಲಕ್ಷಗೊಟ್ಟು ಕೇಳು, ನಾನು ವ್ಯಾಧಿಪೀಡಿತ ನಾದಾಗ ಬಹಳ ಕಷ್ಟ ಪಡಬೇಕಾಗುವುದು. ವ್ಯಾಧಿಗ್ರಸ್ತರು ಒಂದು ಪಾಲು ಕಷ್ಟಪಟ್ಟರೆ, ಸೇವಾತತ್ಪರರು ಹತ್ತು ಪಾಲು ಕಷ್ಟ ಪಡಬೇ ಕಾಗುವದು. ಆದ್ಧರಿಂದ ವಿಚಾರಮಾದಿಕೊ೦ಡು, ದೃಢಮನಸ್ಸಿ ನಿಂದ ಸೇವೆಮಾಡಲಿಕ್ಕೆ ಒಪ್ಪುತ್ತಿದ್ದರೆ ಹೇಳು” ಎಂದರು. - ಗುರುಗಳ ಮಾತನ್ನು ಕೇಳಿ ತಾನು ನಿಶ್ಚಯಪೂರ್ವಕವಾಗಿ ಸೇವಾ ತತ್ಪರನಾಗುವೆನೆಂದು ದೀಪಕನು ಹೇಳಿದನು. ಬಳಿಕ ಆ ಗುರುಶಿಷ್ಯರು ಸಂಕೇತದಂತೆ ಕಾಶಿಗೆ ಹೋದರು. ಅಲ್ಲಿ ಗುರುಗಳು ಗಂಗೆಯಲ್ಲಿ ಸ್ನಾನಮಾಡಿ ವ್ಯಾಧಿಯನ್ನು ಬರಮಾಡಿಕೊಂಡರು ಅವರ ವ್ಯಾಧಿಯು ನಿಜವಾದ ವ್ಯಾಧಿಯಾಗಿರದೆ ಶಿಷ್ಯನ ಪರೀಕ್ಷೆಗೆ ಬೇಕಂತಧರಿಸಿದ ಎರಿಧಿಯಾಗಿತ್ತು. ಗುರುಗಳು ಶಿಷ್ಯನಲ್ಲಿ ದೃಢ ನಿಶ್ಚಯ ನೆಲೆಗೊಳಿಸುವದಕ್ಕಾಗಿ ಹಲವು ಪ್ರಕಾರದ ವೇಷಗಳನ್ನು ಧರಿಸಿದರು. ಅವರ ಮೈಯಲ್ಲಿ ವ್ರಣಗಳಾದವು; ಕಣ್ಣು ಕಾಣದಾ ದವು; ಕಿವಿಗಳು ಕೇಳದಾದವು; ದೇಹದಲ್ಲಿ ಹುಳ ಬಿದ್ದವು. ವ್ಯಾಧಿ ಹೆಚ್ಚಾದಂತೆ ಗುರುಗಳ ಸಂತಾಪವು ಹೆಚ್ಚಾಗತೊಡಗಿತು ಸಂತಾ ಪದ ಭರದಲ್ಲಿ ಅವರು ದೀಪಕನಿಗೆ ಬಹಳ ಕಷ್ಟ ಕೊಡಹತ್ತಿದರು. ಅವನು ತಿರಿದುತಂದ ಭಿಕ್ಷಾನ್ನಕ್ಕೆ ಕಂಡ ಕಂಡ ಹಾಗೆ ಹೆಸರಿಡುವರು; ಒಮ್ಮೊಮ್ಮೆ ಅದು ಕಹಿಯಾಗಿದೆಯೆಂದೂ, ಮಧುರವಾಗಿತ್ತೆಂದೂ ಹೇಳಿ ಅದನ್ನು ನೆಲದ ಮೇಲೆ ತಿರಸ್ಕಾರದಿಂದ ಬಿಸುಟಿಬಿಡುವರು. ಮರುದಿನ ಅವನು ಒಳ್ಳೆ ಶೀಯಾದ ಹಾಗು ಮಧುರವಾದ ಅನ್ನ ವನ್ನು ತಂದು ನೀಡಿದರೆ, ಅವರು ಈ ಅನ್ನವು ಬಹಳ ಹುಳಿಯಾಗಿದೆ ಯೆಂದು ಹೇಳಿ ಊಟವನ್ನೇ ಬಿಡುವರು, ಒಂದುದಿನ ಬಟೈ ಜಳ