ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mar-9 . ಯನ್ನು ಮಾಡಿ, ಪ್ರಸಿದ್ಧನಾಗಿ ಪ್ರಗತಿಹೊಂದುವನು, ಅವನೇ ಡಿಸಿ ಸ್ಯದ ಶೃಂಖಲೆಯನ್ನು ತೋರುಮಾಡಲಿಕ್ಕೆ ಕಾರಣನಾಗುವನು. ಪ್ರಗತಿಹೊಂದುವ ಇಚ್ಛೆಯುಳ್ಳವನು ಇ೦ಧ ಮನುಷ್ಯನ ಪ್ರತಿಯೊಂ ದು ಕೃತಿಯನ್ನು ಅನುಕರಣ ಮಾಡದೆ, ಅವನಲ್ಲಿಯ ವಿಶಿಷ್ಟ ಗುಣ ಗಳಲ್ಲಿ ಯಾವವು ತಮ್ಮ ವಿಶಿಷ್ಟಗುಣಗಳ ಪೋಷಣೆಗೆ ಅವಶ್ಯವಾಗಿ ರುವವೋ ಅವುಗಳನ್ನು ಮಾತ್ರ, ಹುಲಿಯು ಇಡಿ ಪ್ರಾಣಿಯನ್ನು ತಿನ್ನದೆ ಬರೇ ರಕ್ತವನ್ನು ಹೀರಿಕೊಳ್ಳುವಂತೆ, ಶೋಷಿಸಿಕೊಳ್ಳತಕ್ಕದ್ದು. ದೃಢನಿಶ್ಚಯದ ಹಾಗು ಅಲೌಕಿಕ ಮನುಷ್ಯನಿಗೆ ಯೋಗ್ಯ ಮಾರ್ಗ ತೋರಿಸಲಿಕ್ಕೆ ಸೃಷ್ಟಿಯು ಸದಾ ತತ್ಪರವಾಗಿರುತ್ತದೆ! ಸಕಾ ವಲಂಬಿಯ, ಹೇಡಿಯ ಆದವನಿಗೆ ಅದು ಕೊಂಚವೂ ಸಹಾಯ ಮಾಡಲಾರದು. ಲೋಕದಲ್ಲಿ ಅಪೂರ್ವತೆಯುಳ್ಳವರ ಅವಶ್ಯಕ ತೆಯು ಹೆಚ್ಚಾಗಿರುವದು, ಕೇವಲ ಹೊಸ ಪದ್ಧತಿಯಿಂದ ಔಷಧ ಕೊಡುವ ವೈದ್ಯರೂ, ಹೊಸ ಹೊಸ ತರದ ಯಂತ್ರಗಳನ್ನು ತಯಾರಿ ಸುವ ಯಂತ್ರ ಕಲಾನಿಪುಣರೂ, ವಿಶಿಷ್ಟ ಪದ್ಧತಿಯಿಂದ ಖಟ್ಟೆನಡಿಸುವ ವಕೀಲರೂ, ಹಿಂದೆ ಯಾರೂ ಬೋಧಿಸದೆ ಇದ್ದ ರೀತಿಯಿಂದ ಬೋಧಿ ಸುವ ಉಪದೇಶಕರೂ, ಹೊಸ ಪದ್ಧತಿಯಿಂದ ಕಲಿಸುವ ಶಿಕ್ಷಕರೂ, ವಿಶೇಷವಾಗಿ ಬೇಕಾಗಿರುವರು. ಈಗಿನ ಮನ್ವಂತರದಲ್ಲಿ ಇಂಧ ಜನರ ಮೇಲಾಟವು ನಡದೇ ಇರುವದು, ಆದರೂ ಎಂಧ ಹೊಸ ವಸ್ತುವಾದರೂ ಅದನ್ನು ಒಮ್ಮೆ ಉಪಯೋಗಿಸಿದ ಮಾತ್ರದಿಂದ ಅದು 'ಸೆಕಂಡಹ್ಯಾಂಡ' ಎಂದು ಕರೆಯಲ್ಪಟ್ಟು ಬೆಲೆಯಲ್ಲಿ ಅದು ಹ್ಯಾಗೆ ಕಡಿಮೆತರದ್ದಾಗುವದೋ ಹಾಗೆ ಇಂದಿನ ವಿಶಿಷ್ಯತ್ವವು ನಾಳೆ ಗೆ ಹಳೆಯದಾಗುವುದರಿಂದ, ಪ್ರಗತಿಗಾಮಿಗಳು ತಮ್ಮ ವಿಶಿಷ್ಯತ್ವವನ್ನು ಸ್ಥಾಪಿಸಲು ಹಿಂದೆಗೆಯಬಾರದು. " ನಾವು ಪ್ರಗತಿಹೊಂದಲಿಕ್ಕೆ ಬೇಕಾಗುವ ಶಕ್ತಿಯು ನಮ್ಮಲ್ಲೇ ಇರುತ್ತದೆ. ಅದು ನಮ್ಮ ವಿಶಿಷ್ಟ ಈರ್ಷೆಯಲ್ಲಿಯ, ದೃಢನಿಶ್ಚ ಯದಲ್ಲಿಯೂ, ನಡಾವಳಿಯಲ್ಲಿಯ, ಅಪೂರ್ವತೆಯಲ್ಲಿ ಯ ತುಂಬಿ